More

    ಸಿದ್ದರಾಮೇಶ್ವರ ಜಯಂತ್ಯುತ್ಸವಕ್ಕೆ ಕ್ಷಣಗಣನೆ; ಸಿದ್ಧತೆ ಪರಿಶೀಲಿಸಿದ ಸಚಿವ ನಾಗೇಶ್ ನಾಳೆ ಮಾಜಿ ಸಿಎಂ ಬಿಎಸ್‌ವೈ ಉದ್ಘಾಟನೆ

    ತಿಪಟೂರು: ನಗರದ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಕಾಯಕಯೋಗಿ ಶ್ರೀ ಗುರು ಸಿದ್ದರಾಮೇಶ್ವರರ 850ನೇ ರಾಜ್ಯಮಟ್ಟದ ಜಯಂತಿ ಜ.14, 15ರಂದು ನಡೆಯಲಿದ್ದು, ಅಂತಿಮ ಹಂತದ ಸಿದ್ಧತೆ ನಡೆದಿವೆ.

    ಗುರುವಾರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರವಾಡ ಸ್ಥಳ ಪರಿಶೀಲಿಸಿದರು.

    ಸಿದ್ದರಾಮೇಶ್ವರ ಜಯಂತ್ಯುತ್ಸವಕ್ಕೆ ಕ್ಷಣಗಣನೆ; ಸಿದ್ಧತೆ ಪರಿಶೀಲಿಸಿದ ಸಚಿವ ನಾಗೇಶ್ ನಾಳೆ ಮಾಜಿ ಸಿಎಂ ಬಿಎಸ್‌ವೈ ಉದ್ಘಾಟನೆ

    ಸಿದ್ಧಗೊಂಡಿರುವ ವೇದಿಕೆ ಮುಂಭಾಗ.
    ಸಿದ್ದರಾಮೇಶ್ವರ ಜಯಂತ್ಯುತ್ಸವಕ್ಕೆ ಕ್ಷಣಗಣನೆ; ಸಿದ್ಧತೆ ಪರಿಶೀಲಿಸಿದ ಸಚಿವ ನಾಗೇಶ್ ನಾಳೆ ಮಾಜಿ ಸಿಎಂ ಬಿಎಸ್‌ವೈ ಉದ್ಘಾಟನೆ

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

    ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಜ.14ರಂದು ಬೆಳಗ್ಗೆ 11ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾರಂಭ ಉದ್ಘಾಟಿಸಲಿದ್ದು, ಸಂಸದ ಜಿ.ಎಸ್ ಬಸವರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಮತ್ತು ನಾಡಿನ ಹರ, ಗುರು ಶರಣರು ಭಾಗಿಯಾಗಲಿದ್ದಾರೆ. ಜ.15ರ ಬೆಳಗ್ಗೆ 11 ಕ್ಕೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸಮಾರೋಪ ಉದ್ಘಾಟಿಸಲಿದ್ದು, ಮೈಸೂರಿನ ದಸರಾ ರೀತಿಯಲ್ಲಿ ಸಿದ್ಧತೆ ನಡೆಯುತ್ತಿದೆ. 2-3 ಲಕ್ಷ ಭಕ್ತರು ಜಯಂತ್ಯುತ್ಸವದಲ್ಲಿ ಭಾಗಿಯಾಗಲಿದ್ದಾರೆ ಎಂದರು.

    ಸಿದ್ದರಾಮೇಶ್ವರ ಜಯಂತ್ಯುತ್ಸವಕ್ಕೆ ಕ್ಷಣಗಣನೆ; ಸಿದ್ಧತೆ ಪರಿಶೀಲಿಸಿದ ಸಚಿವ ನಾಗೇಶ್ ನಾಳೆ ಮಾಜಿ ಸಿಎಂ ಬಿಎಸ್‌ವೈ ಉದ್ಘಾಟನೆ

    ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ

    ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಸ್.ಮಧುಸೂಧನ್ ಮಾತನಾಡಿ, ಸಮಾರಂಭಕ್ಕೆ ಬರುವ ಎಲ್ಲರಿಗೂ ಊಟೋಪಚಾರ ಮತ್ತು ವಸತಿಗಾಗಿ ನಗರದ ಕಲ್ಪತರು ಕಾಲೇಜು, ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜು, ಮುನಿಯಪ್ಪನ ಆಲದಮರದ ಆವರಣ, ರಂಗಾಪುರದ ಶ್ರೀಮಠ, ಸರ್ಕಾರಿ ನೌಕರರ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. ವಾಹನ ಪಾಕಿರ್ಂಗ್‌ಗೆ ಮೂರು ಕಡೆ ಸ್ಥಳ ನಿಗದಿಗೊಳಿಸಿದ್ದು, 140*280 ಅಡಿ ಅಳತೆಯ ವೇದಿಕೆ ನಿರ್ಮಿಸಲಾಗಿದೆ. 40*60 ಅಳತೆಯ ಮುಖ್ಯ ವೇದಿಕೆ ಸಿದ್ಧಗೊಂಡಿದೆ. ಜ.14ರ ಬೆಳಗ್ಗೆ 7.30ಕ್ಕೆ ನಗರದ ಶ್ರೀಕೆಂಪಮ್ಮ ದೇವಾಲಯದಿಂದ ವೇದಿಕೆ ವರೆಗೂ 850 ಪೂರ್ಣಕುಂಭ, ಕಲಾ ತಂಡಗಳೊಂದಿಗೆ ಶ್ರೀ ಸಿದ್ದರಾಮೇಶ್ವರರ ಅದ್ದೂರಿ ಮೆರವಣಿಗೆ ನಡೆಯಲಿದೆ ಎಂದರು.

    ಊಟದ ಮೆನು: ವೈದ್ಯ ಡಾ.ಶ್ರೀಧರ್ ನೇತೃತ್ವದಲ್ಲಿ ನಗರದ ಸಿಂಗ್ರಿ ನಂಜಪ್ಪ ಕಲ್ಯಾಣ ಮಂಟಪದಲ್ಲಿ 2 ಲಕ್ಷ ಕಾಯಿ ಹೋಳಿಗೆ ಸಿದ್ಧಗೊಳಿಸಲಾಗುತ್ತಿದೆ. ತಿಂಡಿಗೆ ಉಪ್ಪಿಟ್ಟು, ಕೇಸರಿಬಾತ್, ಪಲಾವ್, ಪುಳಿಯೋಗರೆ, ಊಟಕ್ಕೆ ಬೂಂದಿ, ಪಾಯಸ, ಕಾಯಿ ಹೋಳಿಗೆ, ಮೈಸೂರುಪಾಕ್, ಪಲ್ಯ, ಕೋಸಂಬರಿ, ಅನ್ನ, ಸಾಂಬಾರ್, ಮಜ್ಜಿಗೆ ಇತ್ಯಾದಿ ಇರಲಿದೆ ಎಂದು ಮಧುಸೂದನ ತಿಳಿಸಿದರು.

    ಸಿದ್ದರಾಮೇಶ್ವರ ಜಯಂತ್ಯುತ್ಸವಕ್ಕೆ ಕ್ಷಣಗಣನೆ; ಸಿದ್ಧತೆ ಪರಿಶೀಲಿಸಿದ ಸಚಿವ ನಾಗೇಶ್ ನಾಳೆ ಮಾಜಿ ಸಿಎಂ ಬಿಎಸ್‌ವೈ ಉದ್ಘಾಟನೆ
    ಕಾರ್ಯಕ್ರಮಕ್ಕೆ ಬರುವವರಿಗಾಗಿ ಅಡುಗೆ ಸಿದ್ಧತೆ

    ಪ್ರಶಸ್ತಿ ಪ್ರದಾನ: ಜ.14ರಂದು ಕೃಷಿ ವಸ್ತುಪ್ರದರ್ಶನ, ಕೃತಿ ಬಿಡುಗಡೆ, ಕೃಷಿಗೋಷ್ಠಿ, ಸಿದ್ದರಾಮ ಸಾಹಿತ್ಯಗೋಷ್ಠಿ, ಜನಪದ ಸಂಗೀತ ರಸಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖ್ಯಾತ ವಿದ್ವಾಂಸ ಡಾ.ಬಿ. ರಾಜಶೇಖರಪ್ಪ ಅವರಿಗೆ ಸಿದ್ಧರಾಮ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಸ್.ಮಧುಸೂಧನ್ ಹಾಸನದಲ್ಲಿ ತಿಳಿಸಿದ್ದಾರೆ. ಜ. 15ರಂದು ನೊಳಂಬ ಲಿಂಗಾಯತ ಸಂಘದ ಮಾಜಿ ನಿರ್ದೇಶಕ ಚಿಂದಗಿರಿ ಜಿ.ಎಸ್.ಉಮಾಪತಿ, ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ.ಆರ್. ಬಸವರಾಜು ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ಅವರಿಗೆ ನೊಳಂಬಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts