More

    ವಿಧಾನ ಪರಿಷತ್: ಮತದಾರರ ಯಾದಿ ತಯಾರಿಕೆಗೆ ನಿರ್ದೇಶನ

    ಬೆಂಗಳೂರು: ವಿಧಾನ ಪರಿಷತ್ತಿನ ಐದು ಸ್ಥಾನಗಳ ದ್ವೈವಾರ್ಷಿಕ ಚುನಾವಣೆಗೆ ಹೊಸದಾಗಿ ಮತದಾರರ ಪಟ್ಟಿ ಸಿದ್ಧತೆಗೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

    ಡಾ.ಬಿ.ಚಂದ್ರಶೇಖರ ಪಾಟೀಲ, ಎ. ದೇವೇಗೌಡ, ಎಸ್.ಎಲ್. ಭೋಜೇಗೌಡ, ಮರಿತಿಬ್ಬೇಗೌಡ,ವೈ.ಎ.ನಾರಾಯಣಸ್ವಾಮಿ ಪ್ರತಿನಿಧಿಸುತ್ತಿರುವ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹೊಸದಾಗಿ ಮತದಾರರ ಯಾದಿ ಸಿದ್ಧಪಡಿಸುವಂತೆ ಮುಖ್ಯ ಚುನಾವಣಾಧಿಕಾರಿಗೆ ಸೂಚನೆ ನೀಡಲಾಗಿದೆ.

    ಬೆಂಗಳೂರು ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಪುಟ್ಟಣ್ಣ ರಾಜಾಜಿನಗರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದೇ ರೀತಿ ಆಯನೂರು ಮಂಜುನಾಥ್ ಶಿವಮೊಗ್ಗ ನಗರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.ಈ ಸ್ಥಾನಗಳು ಖಾಲಿ ಇವೆ. ಪುಟ್ಟಣ್ಣ ಅವರ ಅವಧಿ ನ.11,2026ಕ್ಕೆ ಹಾಗೂ ಆಯನೂರು ಮಂಜುನಾಥ್ ಅವಧಿ ಜೂ.21,2024ಕ್ಕೆ ಮುಕ್ತಾಯಗೊಳ್ಳಲಿದೆ.

    ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಅಥವಾ ಪರಿಷ್ಕರಣೆ ಮಾಡಲು ನವೆಂಬರ್ 1,2023 ಅರ್ಹತಾ ದಿನವಾಗಿದೆ.

    ಅರ್ಜಿ ಸ್ವೀಕೃತಿಗೆ ಕೊನೆಯ ದಿನ: ನ.6,2023
    ಕರಡು ಮತದಾರರ ಪಟ್ಟಿ ಮುದ್ರಣ: ನ.20,2023
    ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನ: ನ.23,2023 ರಿಂದ ಡಿ.9,2023
    ಆಕ್ಷೇಪಣೆ ವಿಲೇವಾರಿಗೆ ಕೊನೆಯ ದಿನ: ಡಿ.25,2023
    ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ: ಡಿ.30,2023
    ——————–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts