More

    ಭ್ರಷ್ಟಾಚಾರ ಪ್ರಕರಣದ ತನಿಖೆಯಾಗಲಿ

    ಬೈಲಹೊಂಗಲ: ರೈತ ವಿರೋಧಿ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ, ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ನೇಸರಗಿ ಕಾಂಗ್ರೆಸ್ ಬ್ಲಾಕ್ ಘಟಕ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ಅವರ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

    ಶಾಸಕ ಮಹಾಂತೇಶ ಕೌಜಲಗಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ಕಾರ್ಯಕರ್ತರು ರಾಜ್ಯದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸುವಲ್ಲಿ ವಿಫಲರಾಗಿರುವ ಸರ್ಕಾರದ ನಿಲುವನ್ನು ಖಂಡಿಸಿದರು. ಕರೊನಾ ನಿಯಂತ್ರಣ ಕಾರ್ಯದಲ್ಲಿ ನಡೆದ ವ್ಯಾಪಾಕ ಭ್ರಷ್ಟಾಚಾರದ ವಿಷಯದಲ್ಲಿ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದರು.

    ಕಾರ್ತಿಕಗೌಡ ಪಾಟೀಲ, ತಾಪಂ ಸದಸ್ಯ ಶ್ರೀಕಾಂತ ಸುಂಕದ, ಮುರಗೋಡ ಬ್ಲಾಕ್ ಅಧ್ಯಕ್ಷ ಶಂಕರಗೌಡ ಪಾಟೀಲ, ನೇಸರಗಿ ಬ್ಲಾಕ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ, ಈಶ್ವರ ಉಳ್ಳೇಗಡ್ಡಿ, ಉಮೇಶ ಬೋಳೆತ್ತಿನ, ರಮೇಶ ಪರಂಡಿ, ರಾಮನಗೌಡ ಪಾಟೀಲ, ಶಂಕರಗೌಡ ಪಾಟೀಲ, ಮಡಿವಾಳಪ್ಪ ಅಕ್ಕಿಸಾಗರ, ಈರಣ್ಣ ಉಗರಖೋಡ, ಮಲ್ಲಪ್ಪ ಕಲಬಾಂವಿ, ರಾಯಪ್ಪ ಉಗರಖೋಡ, ಮಲ್ಲಪ್ಪ ಕಲಬಾಂವಿ, ಈರಣ್ಣ ವನ್ನೂರ, ಪ್ರಕಾಶ ಸಂಗೊಳ್ಳಿ, ಮಹಾಂತೇಶ ಶಿವನಾಯ್ಕರ, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts