More

    ಬಿಜೆಪಿ ಪ್ರಶ್ನೆ, ಸಚಿವರ ಉತ್ತರ, ಜೆಡಿಎಸ್ ಧರಣಿ!; ಪರಿಷತ್ ಕಲಾಪ ಮುಂದೂಡಿಕೆ…

    ಬೆಂಗಳೂರು: ಪ್ರಶ್ನೆ ಕೇಳಿದ್ದು ಬಿಜೆಪಿಯ ಎನ್. ರವಿಕುಮಾರ್, ಉತ್ತರಿಸಿದ್ದು ಸಚಿವ ಡಾ. ಕೆ. ಸುಧಾಕರ್, ಪೀಠದ ಮುಂದೆ ಧರಣಿ ನಡೆಸಿದ್ದು ಜೆಡಿಎಸ್. ಪರಿಣಾಮ ಪರಿಷತ್ ಕಲಾಪ ಶುಕ್ರವಾರಕ್ಕೆ ಮುಂದೂಡಿಕೆ!
    2021-21ನೇ ಸಾಲಿನಲ್ಲಿ ಹೊಸದಾಗಿ 62 ನರ್ಸಿಂಗ್ ಮತ್ತು 40 ಅಲೈಡ್ ಹೆಲ್ತ್ ಸೈನ್ಸ್ ಕಾಲೇಜ್ ಆರಂಭಕ್ಕೆ ಅನುಮತಿ ನೀಡಲಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಎನ್. ರವಿಕುಮಾರ್ ಆರೋಪಿಸಿದರಲ್ಲದೆ ಸರ್ಕಾರದಿಂದ ಉತ್ತರ ಬಯಸಿದರು. ಇದಕ್ಕೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಟಾಸ್ಕ್ ಫೋರ್ಸ್ ಸೇರಿ ಇತರ ಕಮಿಟಿಗಳಿಂದ ಪರಿಶೀಲಿಸಿಯೇ ಅನುಮತಿ ನೀಡಲಾಗಿದೆ. ವಿವಿಧ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಮೂಲ ಸೌಲಭ್ಯ ಹೊಂದಿದ 47 ನರ್ಸಿಂಗ್ ಮತ್ತು 45 ಅಲೈಡ್ ಹೆಲ್ತ್ ಸೈನ್ಸ್ ಕಾಲೇಜ್‌ಗಳಿಗೆ ಮಂಜೂರಾತಿ ನೀಡಲು ಶಿಫಾರಸು ಮಾಡಲಾಗಿದೆ. ಮೂಲ ಸೌಲಭ್ಯ ಹೊಂದಿಲ್ಲದ ಪ್ರಸ್ತಾವನೆ ತಿರಸ್ಕರಿಸಲಾಗಿದೆ ಎಂದು ಉತ್ತರಿಸಿದರು.

    ಮಧ್ಯೆ ಪ್ರವೇಶಿಸಿದ ಜೆಡಿಎಸ್‌ನ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ ಇತರರು, ಇದರಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ. ಸದನ ಸಮಿತಿ ರಚಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಇದಕ್ಕೆ ಒಪ್ಪದ ಸಚಿವರು, ಉನ್ನತ ಮಟ್ಟದ ತನಿಖೆ ನಡೆಸಿ 3 ತಿಂಗಳಲ್ಲಿ ವರದಿ ತರಿಸಿಕೊಂಡು ಸದನದ ಮುಂದೆ ಒಪ್ಪಿಸಲಾಗುವುದು ಎಂದರು. ಇದಕ್ಕೆ ಒಪ್ಪದ ಜೆಡಿಎಸ್ ಸದಸ್ಯರು, ಪೀಠದ ಮುಂದೆ ತೆರಳಿ ಸದನ ಸಮಿತಿ ರಚಿಸುವಂತೆ ಪಟ್ಟುಹಿಡಿದರು.

    ಸಭಾಪತಿ ಬಸವರಾಜ ಹೊರಟ್ಟಿ, ಸಚಿವರು ಕೊಟ್ಟ ಉತ್ತರದಿಂದ ಎನ್. ರವಿಕುಮಾರ್ ಅವರಿಗೆ ತೃಪ್ತಿಯಾಗಿದೆ. ಮಧ್ಯೆ ನಿಮ್ಮದೇನು? ನೀವು ಮಾತನಾಡಿ ಎಂದದ್ದು ತಪ್ಪೇ? ಎಂದು ಪ್ರಶ್ನಿಸಿದರು. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು, ಸಚಿವರು ಪ್ರಾಮಾಣಿಕವಾಗಿ ತನಿಖೆ ನಡೆಸಿ ವರದಿ ಕೊಡುವುದಾಗಿ ಹೇಳಿದ್ದಾರೆ. ಪ್ರತಿಭಟನೆ ಕೈಬಿಡಿ ಎಂದು ಕೋರಿದರು. ಸರ್ಕಾರದಿಂದ ಸದನ ಸಮಿತಿ ರಚಿಸುವವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹಠ ಹಿಡಿದರು. ಸಚಿವರ ಸಿಡಿ ಮತ್ತು ನೈತಿಕತೆ ವಿಷಯವನ್ನು ಮುಂದಿಟ್ಟು ಕಾಂಗ್ರೆಸ್‌ನವರು ಇದ್ಯಾವುದೇ ವಿಷಯಕ್ಕೂ ಸಹಕರಿಸಲಿಲ್ಲ. ಪರಿಣಾಮ 10 ನಿಮಿಷ ಸಭೆ ಮುಂದೂಡಲಾಯಿತು. ಆಡಳಿತ ಮತ್ತು ಜೆಡಿಎಸ್ ಸದಸ್ಯರು ಸಭಾಪತಿ ಕೊಠಡಿಗೆ ತೆರಳಿ ಚರ್ಚಿಸಿ ಮರಳಿ ಸದನಕ್ಕೆ ಆಗಮಿಸಿದರು. ಜೆಡಿಎಸ್ ಸದಸ್ಯರು ಧರಣಿ ಕೈಬಿಡಿ ಎಂದು ಸಭಾಪತಿಗಳು ಹಾಗೂ ಆಡಳಿತ ಪಕ್ಷದವರು ವಿನಂತಿಸಿದರು. ಆದರೂ ಧರಣಿ ಮುಂದುವರಿಸಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.

    ಸಿಎಂ ಮನವೊಲಿಕೆಯಿಂದಾಗಿ ಪಟ್ಟು ಸಡಿಲಿಸಿದ ರೇವಣ್ಣ; ಯಡಿಯೂರಪ್ಪ ಮಾತಿಗೆ ಮೆತ್ತಗಾಗಿ ಧರಣಿ ಕೈಬಿಟ್ಟ ಜೆಡಿಎಸ್

    ‘ನಿನ್ನ ಮಾತನ್ನು ಕೇಳಿಯೇ ನಾನು ಈ ಪರಿಸ್ಥಿತಿಗೆ ಬಂದಿದ್ದು’ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ? ಯಾರ ಬಗ್ಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts