More

    ಭ್ರಷ್ಟರ ಹಣ ಬಡವರಿಗೆ! ಇದು ಮೋದಿ ಗ್ಯಾರಂಟಿ

    ನವದೆಹಲಿ: ಲೋಕಸಭೆ ಚುನಾವಣೆ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಹೊಸ ಸಂದೇಶ ರವಾನಿಸಿದ್ದಾರೆ. ಬಡವರಿಂದ ಲೂಟಿ ಮಾಡಿದ ಹಣ, ಭ್ರಷ್ಟರಿಂದ ಇ.ಡಿ. ವಶಪಡಿಸಿ ಕೊಂಡ ಆಸ್ತಿಯನ್ನು ಜನರಿಗೆ ಹಿಂದಿರುಗಿಸಲು ಇರುವ ಕಾನೂನು ಆಯ್ಕೆ ಹುಡುಕುತ್ತಿರು ವುದಾಗಿ ಮೋದಿ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದ ಕೃಷ್ಣಾ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತಾ ರಾಯ್ ಜತೆ ಬುಧವಾರ ದೂರವಾಣಿಯಲ್ಲಿ ರ್ಚಚಿಸಿದ ನಮೋ, ಜಾರಿ ನಿರ್ದೇಶನಾಲಯ ಉಲ್ಲೇಖಿಸಿರುವಂತೆ ಪಶ್ಚಿಮ ಬಂಗಾಳ ಸರ್ಕಾರ ಬಡವರಿಂದ ಲೂಟಿ ಮಾಡಿರುವ 3 ಸಾವಿರ ಕೋಟಿ ರೂ.ಗಳನ್ನು ಬಡವರಿಗೆ ಹಿಂದಿರುಗಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆಂದರು.

    ಜನತೆಗೆ ತಿಳಿಸಿ: ಪಶ್ಚಿಮ ಬಂಗಾಳ ಜನತೆ ಉದ್ಯೋಗಕ್ಕಾಗಿ 3 ಸಾವಿರ ಕೋಟಿ ರೂ.ಗಳನ್ನು ಲಂಚವಾಗಿ ನೀಡಿದ್ದಾರೆ. ಇದನ್ನು ವಾಪಸ್ ನೀಡುವುದಾಗಿ ಬಂಗಾಳದ ಜನತೆಗೆ ತಿಳಿಸಿ, ಶೀಘ್ರದಲ್ಲೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆ ಬಳಿಕ ಅಗತ್ಯವಿದ್ದಲ್ಲಿ ಕಾನೂನು ಮಾರ್ಗ ಕಂಡುಕೊಳ್ಳುವುದಾಗಿ ಮೋದಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ಹೊತ್ತಲ್ಲೇ ಮೋದಿ ನೀಡಿರುವ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

    ಕೇಂದ್ರಕ್ಕೆ ಅಧಿಕಾರ ಇದೆಯೇ?

    1. ದಾಖಲೆ ಇಲ್ಲದ ಹಣ ವಶಪಡಿಸಿಕೊಳ್ಳಬಹುದು

    2. ಹಣ ಮೂಲದ ವಿವರಣೆಗೆ ಅವಕಾಶ ನೀಡಿಕೆ

    3. ಉತ್ತರ ಸಮರ್ಪಕವಾಗಿದ್ದರೆ ತೊಂದರೆ ಇಲ್ಲ

    4.  ತಾಳೆ ಆಗದಿದ್ದರೆ ಅಕ್ರಮ ಹಣವಾಗಿ ಪರಿಗಣನೆ

    5. ಎಸ್​ಬಿಐ ಅಧಿಕಾರಿಗಳಿಂದ ಜಪ್ತಿ ಹಣ ಎಣಿಕೆ

    6.  ಎಣಿಕೆ ಮುಗಿದ ಬಳಿಕ ಇ.ಡಿ.ಮುಟ್ಟುಗೋಲು

    7.  ಮುಟ್ಟುಗೋಲು ಪಟ್ಟಿ ಸಿದ್ಧಗೊಳಿಸುವ ಇ.ಡಿ.

    8.  ಸ್ವತಂತ್ರ ಸಾಕ್ಷಿಗಳ ಎದುರು ಹಣ ಸೀಲ್ ಆಗಲಿದೆ

    9.  ಹಲವು ಪೆಟ್ಟಿಗೆಗಳಲ್ಲಿ ಹಣ ಸೀಲ್ ಆಗುತ್ತದೆ

    10. ಎಸ್​ಬಿಐನ ಇ.ಡಿ(ಪಿಡಿ)ಖಾತೆಯಲ್ಲಿ ಹಣ ಜಮೆ

    11.  ಅಂದರೆ ಕೇಂದ್ರದ ಖಜಾನೆಯಲ್ಲಿ ಜಪ್ತಿ ಹಣ ಜಮೆ

    ದೃಢೀಕರಣ ಪ್ರಕ್ರಿಯೆ ಹೇಗೆ?

    1. ಇ.ಡಿಯಿಂದ ತಾತ್ಕಾಲಿಕ ಮುಟ್ಟುಗೋಲು ಆದೇಶ

    2. ಸಂಬಂಧಿತ ಪ್ರಾಧಿಕಾರಗಳಿಗೆ 6 ತಿಂಗಳ ಅವಕಾಶ

    3. 6 ತಿಂಗಳಲ್ಲಿ ಮುಟ್ಟುಗೋಲು ದೃಢಪಡಿಸಬೇಕು

    4. ಆರೋಪಿ ಜಪ್ತಿ ಹಣ ಪ್ರಯೋಜನ ತಡೆ ಉದ್ದೇಶ

    5. ಒಮ್ಮೆ ಮುಟ್ಟುಗೋಲಾದರೆ ಹಣ ಖಾತೆಯಲ್ಲಿ ಭದ್ರ

    6. ತನಿಖೆ ಅಂತ್ಯದವರೆಗೆ ಬ್ಯಾಂಕ್​ನಲ್ಲೇ ಹಣ ಸೇಫ್

    7. ಆರೋಪಿಗೆ ಶಿಕ್ಷೆಯಾದರೆ ಹಣ ಕೇಂದ್ರದ ಸ್ವತ್ತು

    8. ಆರೋಪಿ ಖುಲಾಸೆಯಾದರಷ್ಟೇ ಹಣ ವಾಪಸ್

    ಬಂಗಾಳದಲ್ಲಿ ಆಪರೇಷನ್ ಇ.ಡಿ.

    1. ಕಳೆದ 4-5 ತಿಂಗಳಲ್ಲಿ ಬಂಗಾಳದಲ್ಲಿ ಭರ್ಜರಿ ಬೇಟೆ

    2. ಮೊಬೈಲ್ ಗೇಮಿಂಗ್ ಆಪ್ ಸಂಬಂಧ ಇ.ಡಿ. ದಾಳಿ

    3. ಕೋಲ್ಕತ ಉದ್ಯಮಿ ಮನೆಯಲ್ಲಿ -ಠಿ;17 ಕೋಟಿ ಜಪ್ತಿ

    4. ಬಂಗಾಳ ಶಿಕ್ಷಕರ ನೇಮಕಾತಿ ಹಗರಣದಡಿ ದಾಳಿ

    5. ಸಚಿವ ಪಾರ್ಥ ಚಟರ್ಜಿ, ಅರ್ಪಿತಾಗೆ ದಾಳಿ ಶಾಕ್

    6.ಇಬ್ಬರ ಮನೆಯಿಂದ 50 ಕೋಟಿ ನಗದು ವಶ

    7. ಜಾರ್ಖಂಡ್ ಗಣಿ ಹಗರಣದಡಿ ಕಾರ್ಯಾಚರಣೆ

    8. ಬಂಗಾಳದ ವಿವಿಧೆಡೆ 20 ಕೋಟಿ ರೂ. ಹಣ ಜಪ್ತಿ

    ಮಹುವಾ ಅಮೃತಾ: ಟಿಎಂಸಿಯ ಮಹುವಾ ಮೊಯಿತ್ರಾ ವಿರುದ್ಧ ಕೃಷ್ಣಾನಗರ ಲೋಕಸಭೆ ಕ್ಷೇತ್ರದಲ್ಲಿ ಅಮೃತಾ ರಾಯ್ ಸ್ಪರ್ಧಿಸುತ್ತಿದ್ದಾರೆ. ರಾಜಮನೆತನದ ಅಮೃತಾ ಪಶ್ಚಿಮ ಬಂಗಾಳ ದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದಾರೆ.

    ಎರಡನೇ ಇನ್ನಿಂಗ್ಸ್​ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್​ನಲ್ಲಿ ಬಿಸಿ ಬಿಸಿ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts