More

    ಕರೊನಾ ವೈರಸ್​ ಅವಧಿಯಲ್ಲಿ ತುರ್ತು ಸೇವೆ ಒದಗಿಸಿದ ವಿಮಾನದ ಗಗನ ಸಖಿಯರ ದಿರಿಸು ನೋಡಿ ವಿದೇಶಿಗರು ಗೇಲಿ ಮಾಡಿದ್ದರಂತೆ

    ನವದೆಹಲಿ: ಕರೊನಾ ವೈರಸ್​ ಹರಡುತ್ತಿರುವ ಸಮಯದಲ್ಲಿ ತುರ್ತು ವಿಮಾನ ಸೇವೆ ಒದಗಿಸಿದ ನಮ್ಮ ದಿರಿಸು ನೋಡಿ ವಿದೇಶಿ ಪ್ರಯಾಣಿಕರು ಗೇಲಿ ಮಾಡಿದರು ಎಂದು ಗಗನ ಸಖಿಯರು ಅಳಲು ತೋಡಿಕೊಂಡಿದ್ದಾರೆ.

    ರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಇದ್ದ ವಿದೇಶಿ ಪ್ರಯಾಣಿಕರನ್ನು ಏರ್​ ಇಂಡಿಯಾ ವಿಮಾನದಲ್ಲಿ ಮುಂಬೈಗೆ ಕರೆತಂದು ನಂತರ ಅವರನ್ನು ಮತ್ತೊಂದು ವಿಮಾನದಲ್ಲಿ ಯುರೋಪ್​ಗೆ ಕಳುಹಿಸಲಾಯಿತು. ಏರ್​ ಇಂಡಿಯಾ ವಿಮಾನದಲ್ಲಿ ನಾನು ಗಗನ ಸಖಿಯಾಗಿ ಸೇವೆ ಸಲ್ಲಿಸುತ್ತಿದ್ದೆ. ಆ ವೇಳೆ ನಾವು ರಕ್ಷಣೆಗಾಗಿ ಹಜ್ಮತ್ ಸೂಟ್ ಧರಿಸಿದ್ದೇವು. ಅದನ್ನು ನೋಡಿ ಕೆಲವರು ನಮ್ಮನ್ನು ಗೇಲಿ ಮಾಡಿದರು ಎಂದು ಓರ್ವ ಗಗನ ಸಖಿ ಹೇಳಿಕೊಂಡಿದ್ದಾರೆ.

    ವಿದೇಶಿ ಪ್ರಜೆಗಳನ್ನು ಏರ್​ ಇಂಡಿಯಾ ವಿಮಾನದಲ್ಲಿ ಕರೆತಂದ ಹಾರಾಟ ಆಹ್ಲಾದಕರವಾಗಿರಲಿಲ್ಲ. ಬಹುತೇಕ ವಿದೇಶಿಗರು ಮಾಸ್ಕ್​ ಧರಿಸಿರಲಿಲ್ಲ. ಅಲ್ಲದೆ ಅವರು ಅಂತರವನ್ನು ಕಾಯ್ದುಕೊಂಡಿರಲಿಲ್ಲ. ಅಲ್ಲದೆ ಅವರನ್ನು ತಪಾಸಣೆಗೆ ಒಳಪಡಿಸಲಿಲ್ಲ. ಇದರಿಂದ ನಾವು ಅಪಾಯ ಎದುರಿಸಬೇಕಾಗಿದೆ.

    ವಿದೇಶಿಗರಿಗೆ ಈ ಸೇವೆ ತುರ್ತು ಎಂದು ತಿಳಿಸಿದ್ದರೂ ಅವರು ವಾಣಿಜ್ಯ ದರ್ಜೆಯ ವಿಮಾನದಲ್ಲಿ ನೀಡುತ್ತಿದ್ದ ಸೇವೆ ನೀಡುವಂತೆ ಕೋರಿದರು. ಎಲ್ಲರಿಗೂ ಲಘು ಪಾನೀಯ ವಿತರಿಸಲಾಯಿತು. ಹೀಗದ್ದರೂ ಇನ್ನಷ್ಟು ವಿತರಿಸುವಂತೆ ಕೋರಿದರು. ಚಹಾ ಹಾಗೂ ಕಾಫಿಗಾಗಿ ನಮ್ಮ ವಿಶ್ರಾಂತಿ ಪ್ರದೇಶಕ್ಕೆ ಬರುತ್ತಿದ್ದರು.

    ವಿಮಾನದಲ್ಲಿ ಅಂದಾಜು 25 ಮಂದಿ ಇದ್ದರು. ಎಷ್ಟೊತ್ತಿಗೆ ಹಾರಾಟ ಮುಗಿಯುತ್ತದೆ ಅನಿಸಿತ್ತು. ಹಾರಾಟ ಅಂತ್ಯಗೊಂಡಾಗ ನನಗೆ ಸಂತೋಷವಾಯಿತು ಎಂದು ಗಗನ ಸಖಿ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ವಿದೇಶಿಗರಿಂದ ನಮಗೆ ಕರೊನಾ ಸೋಂಕು ಉಂಟಾಗುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಇಲ್ಲದಿದ್ದರೂ ಗ್ರಾಮಸ್ಥರಿಂದ ಬಹಿಷ್ಕಾರಕ್ಕೆ ಒಳಗಾದ ವ್ಯಕ್ತಿ ಏನಾದ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts