More

    ವಿಶ್ವದಲ್ಲಿ ಕರೊನಾ ಸೋಂಕಿಗೆ 88 ಸಾವಿರ ಬಲಿ: ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆ ನಡೆಸಲು ಮುಂದಾದ ಶಕ್ತಿಶಾಲಿ ರಾಷ್ಟ್ರಗಳು

    ನವದೆಹಲಿ: ವಿಶ್ವದಲ್ಲಿ ಕರೊನಾ ವೈರಸ್​ಗೆ 88 ಸಾವಿರ ಮಂದಿ ಬಲಿಯಾಗಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆ ನಡೆಸಲು ವಿಶ್ವದ ಪ್ರಮುಖ ರಾಷ್ಟ್ರಗಳು ಮುಂದಾಗಿದೆ.

    ಕರೊನಾ ವೈರಸ್​ ವಿಶ್ವದಲ್ಲಿ ನಿಯಂತ್ರಣ ತಪ್ಪಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕರೊನಾ ವೈರಸ್​ ಸೋಂಕು ನಿಯಂತ್ರಣದ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ.

    ಅಮೆರಿಕಾದಲ್ಲಿ 2ನೇ ದಿನವೂ ಕರೊನಾ ವೈರಸ್​ ಸೋಂಕಿಗೆ 24 ತಾಸಿನಲ್ಲಿ 2 ಸಾವಿರ ಮಂದಿ ಮೃತಪಟ್ಟಿದ್ದಾರೆ.

    ಇದರಿಂದ ಅಮೆರಿಕಾ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳಲ್ಲಿ ಭೀತಿ ಎದುರಾಗಿದೆ. ಹೀಗಾಗಿ ಸಭೆ ನಡೆಸಿ ಸೋಂಕು ನಿಯಂತ್ರಣಕ್ಕಾಗಿ ಕೈಗೊಳ್ಳುವ ಕ್ರಮಗಳ ಬಗ್ಗೆ ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿರುವ ಪ್ರಮುಖ ರಾಷ್ಟ್ರಗಳು ಚರ್ಚೆ ನಡೆಸಲಿವೆ ಎಂದು ತಿಳಿದು ಬಂದಿದೆ.

    ಬ್ರಿಟನ್​ ಹಾಗೂ ಅಮೆರಿಕಾದಲ್ಲಿ ಕರೊನಾ ವೈರಸ್​ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕಾಗಿ ತಯಾರಿಸಿರುವ ಹೈಡ್ರಾಕ್ಸಿಕ್ಲೋರೊಕ್ವಿನ್‌ ಮಾತ್ರೆ ಬಳಸುವಂತೆ ವೈದ್ಯರು ಸೂಚಿಸಿರುವುದರಿಂದ ಅಮೆರಿಕಾ ಮಾತ್ರೆ ರಫ್ತು ಮಾಡುವಂತೆ ಭಾರತದ ಮೇಲೆ ಒತ್ತಡ ಹೇರುತ್ತಿದೆ. (ಏಜೆನ್ಸೀಸ್​)

    ರಾಮಾಯಣದ ‘ಸುಗ್ರೀವ’ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts