More

    VIDEO| ಕೊರೊನಾ ವೈರಸ್​ ಪೀಡಿತ ಟೆಕ್ಕಿ ಸಂಪರ್ಕಕ್ಕೆ ಬಂದವರ ತಪಾಸಣೆ: ರಾಜೀವ್​ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಬೆಂಗಳೂರು: ಕೊರೊನಾ ವೈರಸ್​ ಸೋಂಕಿತ ಟೆಕ್ಕಿ ಸಂಪರ್ಕಕ್ಕೆ ಬಂದವರನ್ನು ಕೂಡ ತಪಾಸಣೆಗೆ ಒಳಪಡಿಸಲಾಗಿದೆ ಎಂದು ರಾಜೀವ್​ ಗಾಂಧಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ದುಬೈನಿಂದ ಬೆಂಗಳೂರಿಗೆ ಆಗಮಿಸಿದ ಟೆಕ್ಕಿಯೊಬ್ಬರಿಗೆ ಸೋಂಕು ಇರುವುದು ಪತ್ತೆಯಾಗುತ್ತಲೇ ಅವರ ಸ್ನೇಹಿತರು, ಪತ್ನಿ ಹಾಗೂ ಮಗಳ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    ಸೋಂಕು ಪೀಡಿತ ವ್ಯಕ್ತಿ, ನ್ಯೂಯಾರ್ಕ್​ ಮೂಲಕ ದುಬೈಗೆ ಬಂದು ಮಾ.1ರಂದು ಬೆಂಗಳೂರಿಗೆ ಆಗಮಿಸಿದ್ದರು. ವೈಟ್​ಪೀಲ್ಡ್​ನಲ್ಲಿ ಟೆಕ್ಕಿ ವಾಸವಾಗಿದ್ದರು. ಮಾ.4ರಂದು ಅವರಿಗೆ ಜ್ವರ ಬಂದು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ವೇಳೆ ವೈದ್ಯರು ಕೊರೊನಾ ವೈರಸ್​ ಸೋಂಕಿನ ಲಕ್ಷಣಗಳಿದ್ದು ಕೂಡಲೇ ರಾಜೀವ್​ಗಾಂಧಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದರು. ಕೂಡಲೇ ಅವರು ರಾಜೀವ್​ಗಾಂಧಿ ಆಸ್ಪತ್ರೆಗೆ ದಾಖಲಾದರು. ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆಗೆ ಕಳುಹಿಸಲಾಗಿದೆ. ಅಲ್ಲದೆ ಟೆಕ್ಕಿಯ ಸ್ನೇಹಿತ, ಪತ್ನಿ, ಮಗಳು ಹಾಗೂ ಅವರ ಸಂಪರ್ಕ ಬಂದವರನ್ನು ಕೂಡ ಪತ್ತೆ ಮಾಡಿ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ರಾಜೀವ್​ಗಾಂಧಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್​ ಪೀಡಿತರ ಚಿಕಿತ್ಸೆಗೆ 17 ಹಾಸಿಗೆಗಳ ಪ್ರತ್ಯೇಕ ವಾರ್ಡ್​ ರಚನೆ ಮಾಡಲಾಗಿದೆ. ಸದ್ಯ 5 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    VIDEO| ಶಾಲೆಗೆ ರಜೆ ನೀಡುವಂತೆ ಪತ್ರ ಬರೆದ ಕೊರೊನಾ ವೈರಸ್​ ಪೀಡಿತನ ಪತ್ನಿ: ರಜೆ ಘೋಷಿಸಿದ ಆಡಳಿ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts