More

    ಲಾಕ್​ಡೌನ್​: ಕಾಲ್ನಡಿಗೆಯಲ್ಲಿ ತವರಿಗೆ ಮರಳಲು 500 ಕಿ.ಮೀ ಕ್ರಮಿಸಿದ್ದ ಯುವಕ ಮಾರ್ಗಮಧ್ಯೆಯೇ ಸಾವು

    ಹೈದರಾಬಾದ್​: ಲಾಕ್​ಡೌನ್ ಹಿನ್ನೆಲೆಯಲ್ಲಿ ತವರಿಗೆ ಮರಳಲು ಮಹಾರಾಷ್ಟ್ರದ ನಾಗ್ಪುರದಿಂದ ಸುಮಾರು 500 ಕಿ.ಮೀ ಕ್ರಮಿಸಿದ್ದ ತಮಿಳುನಾಡು ಮೂಲದ ಯುವಕ ಮಾರ್ಗ ಮಧ್ಯೆ ಆಶ್ರಯ ತಾಣದಲ್ಲಿ ವಿಶ್ರಾಂತಿ ಪಡೆಯುವಾಗ ಕುಸಿದುಬಿದ್ದು ಸಾವಿಗೀಡಾಗಿರುವ ಘಟನೆ ಸಿಕಂದರಬಾದ್​ನಲ್ಲಿ ಬುಧವಾರ ರಾತ್ರಿ ನಡೆದಿದೆ.

    ಲೋಕೇಶ್ ಬಾಲಸುಬ್ರಮಣಿ ​(23) ಮೃತ ಯುವಕ. ಮಹಾರಾಷ್ಟ್ರದ ನಾಗ್ಪುರದಿಂದ ತಮಿಳುನಾಡಿನ ನಮಕ್ಕಲ್​ಗೆ ತೆರಳುತ್ತಿದ್ದ. ಕರೊನಾ ವೈರಸ್​ ಸೋಂಕು ತಡೆಗಟ್ಟಲು ಕರೆ ನೀಡಲಾಗಿರುವ 21 ದಿನಗಳ ಲಾಕ್​ಡೌನ್​ನಿಂದ ಆಹಾರ, ಆಶ್ರಯ ಮತ್ತು ಆದಾಯದ ಮೇಲೆ ಪರಿಣಾಮ ಬೀರಿರುವುದರಿಂದ ಮಹಾನಗರಗಳಲ್ಲಿರುವ ಲಕ್ಷಾಂತರ ಮಂದಿ ದಿನಗೂಲಿ ನೌಕರರು ತವರಿಗೆ ಮರಳುವ ಅನಿವಾರ್ಯತೆ ಎದುರಾಗಿದೆ.

    ಅದರಂತೆಯೇ ತಮಿಳುನಾಡಿನ ವಿವಿಧ ಭಾಗದ 26 ಮಂದಿಯ ಗುಂಪು ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ಹೊರಟಿದ್ದರು. ಇವರಲ್ಲಿ ಲೋಕೇಶ್​ ಕೂಡ ಒಬ್ಬನಾಗಿದ್ದ. ಹೈದರಾಬಾದ್​ನ ಸಿಕಂದರಬಾದ್​ನ ಆಶ್ರಯ ತಾಣದಲ್ಲಿ ವಿಶ್ರಾಂತಿ ಪಡೆಯುವಾಗ ಕುಸಿದುಬಿದ್ದು ಮೃತಪಟ್ಟಿದ್ದಾನೆ.

    ಕಳೆದ ಮೂರು ದಿನಗಳಿಂದ ನಡೆಯಲು ಆರಂಭಿಸಿದ್ದೇವೆ. ಯಾವುದೇ ಸಂಚಾರ ವ್ಯವಸ್ಥೆ ಇಲ್ಲ. ಅಪರಿಚಿತರು ಮಾರ್ಗ ಮಧ್ಯೆ ನಮಗೆ ಆಹಾರ ನೆರವು ನೀಡಿದರು. ಇದರ ಮಧ್ಯೆ ನಮಗೆ ಡ್ರಾಪ್​ ನೀಡಲು ಮುಂದಾಗುವ ಟ್ರಕ್​ ಚಾಲಕರನ್ನು ಪೊಲೀಸರು ಥಳಿಸಿದರು ಎಂದು 26 ಮಂದಿಯ ಗುಂಪಿನಲ್ಲಿ ಒಬ್ಬರಾದ ಸತ್ಯ ನೋವು ಹಂಚಿಕೊಂಡರು.

    ನಾಗ್ಪುರ ಮತ್ತು ತೆಲಂಗಾಣ ವಲಯದಲ್ಲಿ ಕಳೆದ ಮೂರು ದಿನಗಳಿಂದ 38 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶವಿದೆ. ಅಲ್ಲದೆ, ಕಾಲ್ನಡಿಗೆಯಲ್ಲಿ ಸಾಗುತ್ತಿರುವವರು ತಮ್ಮ ಬ್ಯಾಗ್​ ಮತ್ತಿತ್ತರ ವಸ್ತುಗಳನ್ನು ಸಹ ಹೊತ್ತೊಯ್ಯುತ್ತಿದ್ದಾರೆ. ಸಿಕಂದರಬಾದ್​ ತಂಗುದಾಣದಲ್ಲಿ ತಂಗಿದ್ದ ಗುಂಪು ಗುರುವಾರ ಬೆಳಗ್ಗೆ ಎಚ್ಚರಗೊಂಡಾಗ ಲೋಕೇಶ್​ ಕುಸಿದುಬಿದ್ದಿರುವುದನ್ನು ನೋಡಿತು. ತಕ್ಷಣ ವೈದ್ಯರನ್ನು ಸಂಪರ್ಕಿಸಿದಾಗ ಘಟನಾ ಸ್ಥಳಕ್ಕೆ ಬಂದು ವೈದ್ಯರು ಲೋಕೇಶ್​ ಮೃತಪಟ್ಟಿರುವುದಾಗಿ ಘೋಷಿಸಿದರು.

    ಇತ್ತ ಕಣ್ಣೆದುರೇ ಲೋಕೇಶ್​ ಮೃತಪಟ್ಟಿದ್ದರೆ, ಆತನಿಗಾದ ಗತಿಯೇ ಇನ್ನೊಬ್ಬರಿಗೂ ಆಗಬಹುದಾದ ಆತಂಕವು ಎದುರಾಗಿದೆ. ಹೀಗಾಗಿ ವಾಹನ ವ್ಯವಸ್ಥೆ ಮಾಡಿಕೊಂಡಿ ಹೇಗಾದರೂ ನಮ್ಮು ಊರನ್ನು ಸೇರಿಕೊಳ್ಳುತ್ತೇವೆ ಎಂದು ಅಂಗಾಲಾಚಿದ್ದಾರೆ. ಲೋಕೇಶ್​ ಮೃತದೇಹವನ್ನು ಆತನ ಸ್ನೇಹಿತರೊಬ್ಬರು ಹೈದರಾಬಾದ್​ನಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. (ಏಜೆನ್ಸೀಸ್​)

    ಕ್ವಾರಂಟೈನ್‌ ಉಲ್ಲಂಘಿಸಿದರೆ ಕಂಡಲ್ಲಿ ಗುಂಡಿಕ್ಕಿ ಎಂದ ಫಿಲಿಪ್ಪೀನ್ಸ್‌ ಅಧ್ಯಕ್ಷ…!

    ಕರೊನಾ ವೈರಸ್​ ವಿಚಾರದಲ್ಲಿ ಕಾಂಗ್ರೆಸ್​ ಚಿಲ್ಲರೆ ರಾಜಕಾರಣ ಮಾಡುತ್ತಿದೆ: ಅಮಿತ್​ ಷಾ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts