More

    ಈ ಟೈಮ್​​ನಲ್ಲಿ ಆಸ್ಪತ್ರೆ ಬಾಗಿಲು ಹಾಕಿ, ಮನೇಲಿ ಕುಳಿತುಕೊಳ್ಳುವ ಖಾಸಗಿ ವೈದ್ಯರ ಪರವಾನಗಿ ರದ್ದು; ಸಚಿವ ಬಿ.ಸಿ.ಪಾಟೀಲ್​ರಿಂದ ವಾರ್ನ್​

    ಹಾವೇರಿ: ಕರೊನಾ ವೈರಸ್​ನಂತಹ ಮಾರಕ ರೋಗ ಹರಡಿರುವ ಈ ಸಂದರ್ಭದಲ್ಲಿ ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಗಳನ್ನು ಬಂದ್​ ಮಾಡಬಾರದು. ಹಾಗೇ ಮೆಡಿಕಲ್​ ಶಾಪ್​ಗಳೂ ಕೂಡ ಬಾಗಿಲು ಮುಚ್ಚಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಆಯಾ ಜಿಲ್ಲೆಯ ಎಲ್ಲ ಖಾಸಗಿ ವೈದ್ಯರು, ಔಷಧ ಅಂಗಡಿಗಳ ಮಾಲೀಕರಿಗೆ ಸರ್ಕಾರ ನೋಟಿಸ್​ ನೀಡಿದೆ.

    ಸರ್ಕಾರದ ಈ ನೋಟಿಸ್​ಗೆ ಬೆಲೆ ನೀಡದೆ, ಯಾರಾದರೂ ಆಸ್ಪತ್ರೆಯ ಬಾಗಿಲು ಮುಚ್ಚಿದರೆ ಅಂತಹ ವೈದ್ಯರ ಪರವಾನಗಿ ರದ್ದು ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಖಡಕ್​ ಎಚ್ಚರಿಕೆ ನೀಡಿದ್ದಾರೆ.
    ಸೋಮವಾರ ಜಿಲ್ಲೆಯ ಹಿರೇಕೆರೂರು ನಗರ,‌ ರಾಣೆಬೆನ್ನೂರು,‌ ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆ, ಹಾವೇರಿ ಎಪಿಎಂಸಿ ಸೇರಿದಂತೆ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊರೊನಾ ಬಗ್ಗೆ ಜನತೆಗೆ ಜಾಗೃತಿ ಮೂಡಿಸಿದ ಸಚಿವರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಜನರು ಸ್ವಯಂ ಜಾಗೃತಿ ವಹಿಸಬೇಕು. ತಮ್ಮ ಮನೆಗಳಲ್ಲಿಯೇ ಅಂತರ ಕಾಯ್ದುಕೊಳ್ಳಬೇಕು. ನಮಗೆ ನಾವೇ ದಿಗ್ಬಂಧನ ಹಾಕಿಕೊಳ್ಳಬೇಕು ಎಂದಿದ್ದಾರೆ.

    ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಆರೋಗ್ಯ ಕಾಪಾಡಲು ಕಟಿಬದ್ಧರಾಗಿದ್ದು ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಬೇಕು. ಅನವಶ್ಯಕವಾಗಿ ಮನೆಯಿಂದ ಹೊರಬರಬಾರದು ಎಂದು ಮನವಿ ಮಾಡಿದರು.
    ಅತ್ಯಗತ್ಯ ವಸ್ತುಗಳಾದ ದಿನಸಿ, ತರಕಾರಿ, ಹಣ್ಣುಗಳನ್ನು ಪ್ರತಿವಾರ್ಡ್​ಗೂ ತಳ್ಳುಗಾಡಿಯ ಮೂಲಕ ಒದಗಿಸಲಾಗುತ್ತಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts