More

    ವಾಹನ ಸವಾರರೇ, ರಸ್ತೆಗಿಳಿಯಬೇಡಿ; ನಿಯಮ ಉಲ್ಲಂಘನೆ ಸಾಬೀತಾದರೆ 6 ತಿಂಗಳು ಜೈಲಿಗೆ ಹೋಗಬೇಕಾದೀತು!

    ಬೆಂಗಳೂರು: ಕರೊನಾ ಭೀತಿ ಲೆಕ್ಕಿಸದೆ ಲಾಕ್‌ಡೌನ್ ನಿಯಮ ಉಲ್ಲಂಸಿ ರಸ್ತೆಗೆ ಇಳಿಯುವ ವಾಹನ ಸವಾರರ ವಿರುದ್ಧ ಪೊಲೀಸರು ಎಫ್​ಐರ್​ ದಾಖಲಿಸುತ್ತಿದ್ದಾರೆ. ದಿನಸಿ ಸಾಮಗ್ರಿ, ಔಷಧ ಖರೀದಿ ನೆಪದಲ್ಲಿ ಎಲ್ಲೆಂದರಲ್ಲಿ ವಾಹನದಲ್ಲಿ ಸಂಚರಿಸುತ್ತಿದ್ದಾರೆ. ಜನಸಂಚಾರ ನಿಯಂತ್ರಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಮಾ.25ರಿಂದ ಈವರೆಗೂ 33,534 ವಾಹನ ಜಪ್ತಿ ಮಾಡಿ ಲಾಕ್‌ಡೌನ್ ಉಲ್ಲಂಸುವರಿಗೆ ಬಿಸಿ ಮುಟ್ಟಿಸಿದ್ದಾರೆ.

    ಇಷ್ಟಾದರೂ ಕೂಡ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಐಪಿಸಿ, ಸಿಆರ್‌ಪಿಸಿ ಹಾಗೂ ವಿಪತ್ತು ನಿರ್ವಹಣಾ ತಡೆ ಕಾಯ್ದೆ ಉಲ್ಲಂಘನೆ ಅಡಿ ಎಫ್​ಐಆರ್ ದಾಖಲಿಸಿ ಬಿಸಿ ಮುಟ್ಟಿಸುತ್ತಿದ್ದಾರೆ.

    11 ಮಂದಿ ವಿರುದ್ಧ ಕೇಸ್:
    ಕೆಎಸ್‌ಪಿ ಕ್ಲಿಯರ್ ವಾಹನ ಪಾಸ್ ಇಲ್ಲದೆ ರಸ್ತೆಗೆ ಇಳಿದು ಪೊಲೀಸರಿಗೆ ನೆಪ ಹೇಳಿ ಬಚಾವ್ ಆಗಲು ಮುಂದಾಗಿದ್ದ 11 ಮಂದಿ ವಿರುದ್ಧ ಸಿಆರ್‌ಪಿಸಿ 102 ಹಾಗೂ ಐಪಿಸಿನ 188 ಅಡಿ ಮೊಕದ್ದಮೆ ದಾಖಲಿಸಲಾಗಿದೆ. ಕನ್ನಮಂಗಲ ನಾಕಾ ಪಾಯಿಂಟ್ ಹಾಗೂ ಕಾಟೇರಮ್ಮ ದೇವಸ್ಥಾನ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಅನಗತ್ಯವಾಗಿ ಸಂಚರಿಸುತ್ತಿರುವುದು ಕಂಡುಬಂದಿತ್ತು. ಹೀಗಾಗಿ, 11 ವಾಹನಗಳನ್ನು ಜಪ್ತಿ ಮಾಡಿ ವಾಹನ ಮತ್ತು ಸವಾರರ ವಿರುದ್ಧ ಎ್ಐಆರ್ ದಾಖಲಿಸಲಾಗಿದೆ ಎಂದು ಕಾಡುಗೋಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಈವರೆಗೂ ಜಪ್ತಿ ಮಾಡಿದ ವಾಹನಗಳಿಗೆ ಪ್ರಾಪರ್ಟಿ ಫಾರ್ಮ್ ಹಾಕಿ ಕೋರ್ಟ್‌ಗೆ ಕಳುಹಿಸಲಾಗುತ್ತಿದೆ. ಕೋರ್ಟ್ ಸೂಚನೆ ಮೇರೆಗೆ ವಾಹನ ಮಾಲೀಕರು, ನಿಯಮ ಉಲ್ಲಂಸುವುದಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟು ವಾಹನ ಬಿಡಿಸಿಕೊಳ್ಳಬೇಕು. ವಿಪತ್ತು ನಿರ್ವಹಣಾ ತಡೆ ಕಾಯ್ದೆ ಹಾಗೂ ಸಿಆರ್‌ಪಿಸಿ ಉಲ್ಲಂಘನೆ ಅಡಿ ಎಫ್​ಐಆರ್ ದಾಖಲಾದರೆ ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ. ನಿಯಮ ಉಲ್ಲಂಸಿರುವುದು ಸಾಬೀತಾದರೆ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಸಾಧ್ಯತೆ ಇದೆ. ಹೀಗಾಗಿ ಲಾಕ್‌ಡೌನ್ ಉಲ್ಲಂಸಿ ಯಾವುದೇ ಕಾರಣಕ್ಕೂ ರಸ್ತೆಗೆ ಇಳಿಯಬೇಡಿ ಎಂದು ಪೊಲೀಸರು ಸೂಚಿಸಿದ್ದಾರೆ.

    ಖರೀದಿಸಿದ ಬಾಳೆಹಣ್ಣುಗಳಲ್ಲಿ ಕಂಡ ಸಣ್ಣಸಣ್ಣ ರಂಧ್ರ: ಜನರಲ್ಲಿ ಅನುಮಾನ, ಆತಂಕ; ಪರೀಕ್ಷೆಗಾಗಿ ರವಾನೆ

    ಗೆಳತಿ ಮಾಡಿದ ಎಡವಟ್ಟು, ಬ್ಯಾಂಕ್​ ಮ್ಯಾನೇಜರ್​ ಕ್ರೆಡಿಟ್​ಕಾರ್ಡ್​ಗೆ ಬಿತ್ತು ಕನ್ನ; ಹಾಗಾದರೆ ಗೆಳತಿ ಮಾಡಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts