More

    ಖರೀದಿಸಿದ ಬಾಳೆಹಣ್ಣುಗಳಲ್ಲಿ ಕಂಡ ಸಣ್ಣಸಣ್ಣ ರಂಧ್ರ: ಜನರಲ್ಲಿ ಅನುಮಾನ, ಆತಂಕ; ಪರೀಕ್ಷೆಗಾಗಿ ರವಾನೆ

    ಹಾವೇರಿ: ಬಾಳೆಹಣ್ಣಿನಲ್ಲಿ ಸಣ್ಣಸಣ್ಣ ರಂಧ್ರ ಕಂಡುಬಂದಿದ್ದರಿಂದ ಹಾಗೂ ಹಣ್ಣುಗಳನ್ನು ತೊಳೆದಾಗ ಬಣ್ಣ ಬಿಟ್ಟದ್ದರಿಂದ ಅನುಮಾನಗೊಂಡು ಅವುಗಳನ್ನು ಮಾರಿದ ವ್ಯಕ್ತಿಯನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿದರು.

    ಸ್ಥಳೀಯ ಶಿವಾಜಿನಗರದಲ್ಲಿ ಗುರುವಾರ ವ್ಯಕ್ತಿಯೊಬ್ಬ ತಂದಿದ್ದ ಬಾಳೆಹಣ್ಣುಗಳನ್ನು 3ನೇ ವಾರ್ಡ್‌ನ ನಗರಸಭೆ ಸದಸ್ಯೆ ಚನ್ನಮ್ಮ ಬ್ಯಾಡಗಿ ಹಾಗೂ ಸಾರ್ವಜನಿಕರು ಖರೀದಿಸಿದ್ದರು. ಆ ಬಾಳೆಹಣ್ಣುಗಳ ಸಿಪ್ಪೆ ಸುಲಿದಾಗ ಅದರಲ್ಲಿ ಸೂಜಿಯಿಂದ ಮಾಡಿದಂಥ ರಂಧ್ರಗಳು ಕಂಡುಬಂದಿದ್ದವು.

    ಅಲ್ಲದೆ, ಆ ಹಣ್ಣುಗಳನ್ನು ತೊಳೆದಾಗ ನೀರಿನಲ್ಲಿ ಬಣ್ಣ ಉಂಟಾಗಿತ್ತು. ಇದರಿಂದ ಆತಂಕಗೊಂಡ ನಿವಾಸಿಗಳು ಶುಕ್ರವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

    ಈ ಕುರಿತು ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಪ್ರದೀಪ, ಬಾಳೆಹಣ್ಣುಗಳಲ್ಲಿ ರಂಧ್ರ ಕಂಡುಬಂದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಜತೆೆ ಚರ್ಚಿಸಿ, ಹಣ್ಣನ್ನು ಪರೀಕ್ಷೆಗಾಗಿ ಶಿವಮೊಗ್ಗ ಲ್ಯಾಬ್‌ಗೆ ಕಳುಹಿಸಲಾಗುವುದು. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಭಾರತೀಯ ಸೇನೆಗೂ ನುಗ್ಗಿದ ಕರೊನಾ: ವೈದ್ಯರು, ನರ್ಸ್ ಸೇರಿ ಎಂಟು ಸಿಬ್ಬಂದಿಯಲ್ಲಿ ವೈರಸ್ ಪತ್ತೆ; ಒಬ್ಬ ಯೋಧ ಗುಣಮುಖ

    ಕರೊನಾ ತಾಂಡವಕ್ಕೆ ತತ್ತರಿಸಿ ಹೋದ ದೊಡ್ಡ ದೇಶಗಳು: ಅಮೆರಿಕದಲ್ಲಿ ಒಂದೇ ದಿನ ನಾಲ್ಕೂವರೆ ಸಾವಿರ ಜನರ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts