More

    ಕರೊನಾದಿಂದಾಗಿ ಕೆಲಸ ಹೋಯ್ತು; ಈಗ ನರೇಗಾದಲ್ಲಿ ಕೂಲಿ ಮಾಡ್ತಿದಾನೆ ಈ ಇಂಜಿನಿಯರ್!

    ಗದಗ: ಆತ ಬಡತನದಲ್ಲಿ ನೊಂದು, ಬೆಂದು ಅರಳಿದ ಪ್ರತಿಭೆ. ಬಡತನದಲ್ಲಿಯೇ ಇಂಜಿನಿಯರಿಂಗ್ ಪದವಿ ಪೂರೈಸಿ ಹೆತ್ತವರ ಆಸೆ ಈಡೇರಿಸಲು ನೂರೆಂಟು ಕನಸುಗಳ ಮೂಟೆ ಹೊತ್ತು ಬೆಂಗಳೂರಿಗೆ ಕಾಲಿಟ್ಟಿದ್ದ. ನಿರೀಕ್ಷೆಯಂತೆ ಖಾಸಗಿ ಕಂಪನಿಯಲ್ಲಿ ಕೆಲಸವನ್ನೂ ಗಿಟ್ಟಿಸಿದ್ದ. ಇನ್ನೇನು ಬದುಕು ರೂಪಿಸಿಕೊಳ್ಳಬೇಕು ಎನ್ನುವ ಸಮಯಕ್ಕೆ ಕರೊನಾದಿಂದ ಕಂಪನಿಯೇ ಬಾಗಿಲು ಮುಚ್ಚಿತು. ಕೆಲಸ ಕಳೆದುಕೊಂಡು ಊರಿಗೆ ಮರಳಿದ ಇಂಜಿನಿಯರಿಂಗ್ ಪದವೀಧರ ಈಗ ಸ್ವಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದಾನೆ.

    ಇದನ್ನೂ ಓದಿ: ವಿದೇಶಿ ಕ್ರಿಕೆಟಿಗರಿಲ್ಲದ ಐಪಿಎಲ್‌ಗೆ ಕಿಂಗ್ಸ್ ಇಲೆವೆನ್‌ನಿಂದಲೂ ವಿರೋಧ

    ಗದಗ ತಾಲೂಕಿನ ಕದಡಿ ಗ್ರಾಮದ ಸದಾನಂದ ಕುರುಗೋಡಪ್ಪ ಮುಕ್ಕಣ್ಣವರ ಎಂಬ ಯುವ ಇಂಜಿನಿಯರ್‌ನ ಸದ್ಯದ ಸ್ಥಿತಿ ಇದು. ಮೂಲತಃ ರೈತ ಕುಟುಂಬದ ಸದಾನಂದನಿಗೆ ತಂದೆ-ತಾಯಿ ಮತ್ತು ಒಬ್ಬ ಸಹೋದರ ಇದ್ದಾರೆ. ಸಹೋದರ ಕೂಡ ಬಿಇ ಪದವೀಧರ. ಸದಾನಂದ 2015ರಲ್ಲಿ ಧಾರವಾಡದ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದ.

    ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮೆಂಟೇನನ್ಸ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ, ಲಾಕ್‌ಡೌನ್‌ನಿಂದಾಗಿ ಕಂಪನಿ ಬಾಗಿಲು ಮುಚ್ಚಿದೆ. ಬಡ ಕುಟುಂಬಕ್ಕೆ ಆಸರೆಯಾದ ಸದಾನಂದನ ಕೆಲಸವನ್ನು ಕರೊನಾ ಕಸಿದುಕೊಂಡಿದ್ದರಿಂದ ಆಕಾಶವೇ ಕಳಚಿ ಬಿದ್ದಂತಾಗಿದೆ.

    ಇದನ್ನೂ ಓದಿ: ಹರಿದ, ಮಾಸಿದ ಧ್ವಜ ಹಾರಿಸಿದ ಗ್ರಾಪಂ: ಬಚಾವ್ ಆಗಲು ಹೋಗಿ ಮತ್ತೊಂದು ಎಡವಟ್ಟು

    ಊರಿಗೆ ಬಂದು ಎರಡು ತಿಂಗಳಾಗಿದ್ದು, ಬಿಇ ಗ್ರಾೃಜುಯೇಟ್ ಎಂದುಕೊಂಡು ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ತಮ್ಮ ಜಮೀನಿನ ಕೆಲಸ ತಾವೇ ಮಾಡುತ್ತಿದ್ದಾನೆ. ಅಷ್ಟೇ ಅಲ್ಲ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಕೂಡ ಮಾಡುತ್ತಿದ್ದಾನೆ. ಗ್ರಾಮ ಪಂಚಾಯಿತಿ ವತಿಯಿಂದ ಜಮೀನುಗಳ ಬದುವು ನಿರ್ಮಾಣಕ್ಕೆ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ನಡೆದಿದೆ. ಈ ಕಾರ್ಯದಲ್ಲಿ ಬಿಇ ಓದಿರುವ ಇಂಜಿನಿಯರ್ ಸದಾನಂದ ಮತ್ತು ಅವರ ತಾಯಿ ಕೂಲಿ ಮಾಡುತ್ತಿದ್ದಾರೆ.

    ‘‘ಲಾಕ್‌ಡೌನ್ ಕಾರಣದಿಂದ ಕಂಪನಿ ಬಾಗಿಲು ಮುಚ್ಚಿತು. ಕೆಲಸ ಇಲ್ಲದೆ ಬೆಂಗಳೂರಿನಲ್ಲಿ ಬದುಕುವುದು ಕಷ್ಟ. ಹೀಗಾಗಿ ಲಾಕ್‌ಡೌನ್ ಘೋಷಣೆಯಾದ ಕೂಡಲೇ ಊರಿಗೆ ಮರಳಿದೆ. ಮನೆಯಲ್ಲಿ ಎಷ್ಟು ದಿನ ಖಾಲಿ ಕುಳಿತುಕೊಳ್ಳುವುದು. ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದೇನೆ. ಕಂಪನಿ ಮತ್ತೆ ಯಾವಾಗ ಕೆಲಸಕ್ಕೆ ಕರೆಯುತ್ತದೆಯೋ ಗೊತ್ತಿಲ್ಲ. ವರ್ಕ್ ಫ್ರಾಮ್ ಹೋಂ ಸೌಲಭ್ಯ ಕೂಡ ನೀಡಿಲ್ಲ’’ ಎನ್ನುತ್ತಾನೆ ಸದಾನಂದ.

    ಇದನ್ನೂ ಓದಿ: ಸ್ಟೀವ್​ ಸ್ಮಿತ್​ ಎದುರು ಹೀಗೇಕೆ ಮಾಡಿದೆ… ಕೊನೆಗೂ ಬಾಯ್ಬಿಟ್ರು ಇಶಾಂತ್…!​

    ಆದರೆ ಆತನ ತಾಯಿ ನೀಲಮ್ಮ ಅಂದುಕೊಂಡಿದ್ದೇ ಬೇರೆ. ‘‘ಮಗ ಕೂಲಿ ಕೆಲಸ ಮಾಡುವುದು ನನಗೆ ಸುತರಾಂ ಇಷ್ಟವಿಲ್ಲ. ಮಗ ಇಂಜಿನಿಯರ್ ಆಗಬೇಕು. ದೊಡ್ಡ ಸಾಹೇಬ ಆಗಬೇಕು ಎಂಬ ಆಸೆ ನನಗೆ. ಆದರೆ, ಏನು ಮಾಡುವುದು, ಕರೊನಾ ನನ್ನ ಮಗನಿಗೆ ಈ ಪರಿಸ್ಥಿತಿ ತಂದಿಟ್ಟಿದೆ ನೋಡ್ರಿ’’ ಎಂದು ಸಂಕಟ ಪಡುತ್ತಾರೆ.

    ಅದ್ಧೂರಿ ಜೀವನಕ್ಕಾಗಿ ಹುಡುಗಿ ಹೆಸರಲ್ಲಿ ವಂಚಿಸಲು ತಾಯಿಗೆ ಮಗನ ಸಾಥ್: ಇವರ ಕತೆ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts