More

    ಕರೊನಾ ವೈರಸ್​ ಆರಂಭವಷ್ಟೇ, ಭವಿಷ್ಯದ ಬಗ್ಗೆ ವಿಜ್ಞಾನಿಗಳ ಖಡಕ್​ ಎಚ್ಚರಿಕೆ: ಎಚ್ಚೆತ್ತುಕೊಳ್ಳದಿದ್ದರೆ ಮನುಕುಲ ನಾಶ ಖಂಡಿತ

    ನವದೆಹಲಿ: ಕರೊನಾ ವೈರಸ್​ ಆರಂಭವಷ್ಟೇ. ಭವಿಷ್ಯದಲ್ಲಿ ಕರೊನಾದಂತಹ ಇನ್ನು ಹೆಚ್ಚಿನ ಕಾಯಿಲೆಗಳು ಇಡೀ ಜಗತ್ತನ್ನು ಬಾಧಿಸಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದು, ಈಗಿನಿಂದಲೇ ಸಿದ್ಧತೆ ನಡೆಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.

    ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಜನಸಂಖ್ಯೆಯು ನಮ್ಮನ್ನು ವನ್ಯಜೀವಿಗಳಿಗೆ ಇನ್ನಷ್ಟು ಹತ್ತಿರವಾಗಿಸುತ್ತಿದೆ. ಇದರಿಂದ ಹೊಸ ಹೊಸ ವೈರಸ್​ಗಳು ನಮ್ಮನ್ನು ತೊಂದರೆಗಳಿಗೆ ಒಡ್ಡುತ್ತವೆ ಎಂದು ಪರಿಸರವಾದಿಗಳು ಮತ್ತು ವಿಜ್ಞಾನಿಗಳು ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

    ದಿ ನ್ಯಾಷನಲ್​ ಜಿಯೋಗ್ರಫಿಕ್ಸ್​ ಕ್ಯಾಂಪೇನ್​ ಫಾರ್​ ನೇಚರ್​ ಹೇಳುವ ಪ್ರಕಾರ ಕೋವಿಡ್​-19ನಂತಹ ಹೆಚ್ಚಿನ ರೋಗಗಳು ನಮ್ಮ ಕಾಡಲಿವೆ. ಅದಕ್ಕೆ ಕಾರಣ ಅರಣ್ಯನಾಶ ಮತ್ತು ವನ್ಯಜೀವಿಗಳನ್ನು ಸಾಕುಪ್ರಾಣಿಗಳಂತೆ ಬಳಸುತ್ತಿರುವುದಲ್ಲದೆ, ಅದರ ಮಾಂಸಾಹಾರ ಮತ್ತು ಔಷಧಗಳಿಗೆ ಬಳಸುತ್ತಿರುವುದಾಗಿದೆ.

    ಕಾಂಪೇನ್​ನ ಸಮುದ್ರ ಪರಿಸರ ವಿಜ್ಞಾನಿ ಎನ್ರಿಕ್​ ಸಲಾ ಹೇಳುವ ಪ್ರಕಾರ ಸಾಂಕ್ರಾಮಿಕ ರೋಗಗಳು ಮತ್ತು ನೈಸರ್ಗಿಕ ಪ್ರಪಂಚದ ನಡುವಿನ ಸಂಬಂಧವನ್ನು ನಿರ್ಲಕ್ಷಿಸುವುದನ್ನು ನಾವು ಮೊದಲು ನಿಲ್ಲಿಸಬೇಕಿದೆ. 2050ರ ಹೊತ್ತಿಗೆ ವಿಶ್ವದ ಜನಸಂಖ್ಯೆ 2 ಬಿಲಿಯನ್​ನಿಂದ 9.7 ಬಿಲಿಯನ್​ಗೆ ತಲುಪಲಿದೆ. ಇದು ಆಹಾರದ ಕೊರತೆಯನ್ನು ಉಂಟು ಮಾಡುತ್ತದೆ. ಇದರಿಂದ ಮಾನವನು ವನ್ಯಜೀವಿಯೊಂದಿಗೆ ನಿಟಕಸಂಪರ್ಕ ಹೊಂದುವಂತೆ ಮಾಡುತ್ತದೆ ಎಂದು ವಿವರಿಸಿದ್ದಾರೆ.

    ಪ್ಲ್ಯಾನೆಟರಿ ಹೆಲ್ತ್​ ಅಲಯನ್ಸ್​ ಡಾ. ಸಾಮ್ಯುಯೆಲ್​ ಮೈರ್ಸ್​ ಹೇಳುವಂತೆ ವನ್ಯಜೀವಿಗಳ ಮೇಲಿನ ಮಾನವನ ಆಕ್ರಮಣ ಹಾಗೂ ಹವ್ಯಾಸವು ವಿಶ್ವದ ಜನತೆಯನ್ನು ವನ್ಯಜೀವಿಯೊಂದಿಗೆ ಹತ್ತಿರದಲ್ಲಿಟ್ಟಿದೆ. ಇತರೆ ಪ್ರಾಣಿಗಳು ರೋಗಕಾರಕಗಳ ಅಗಾಧವಾದ ಮೂಲಗಳು ಎಂದು ನಮಗೆ ತಿಳಿದಿವೆ. ಅದರಲ್ಲಿ ಅನೇಕ ಪ್ರಾಣಿಗಳಲ್ಲಿ ಈಗಲೂ ಯಾವುದೇ ವೈರಸ್​ ಬಹಿರಂಗವಾಗಿಲ್ಲ. ಒಂದು ವೇಳೆ ಬಹಿರಂಗವಾದಲ್ಲಿ ಮನುಕುಲ ನಾಶ ಖಂಡಿತ ಎಂದು ಎಚ್ಚರಿಸಿದರು.

    ಸಾಂಕ್ರಮಿಕ ರೋಗಗಳ ಪರಿಣಿತ ಡೇವಿಡ್​ ಖಮ್ಮೆನ್​ ಹೇಳುವ ಹಾಗೆ ನಮ್ಮ ಪರಿಸರ ವ್ಯವಸ್ಥೆಯಲ್ಲಿ ವಿವಿಧ ರೀತಿಯ ಅನೇಕ ವನ್ಯಜೀವಿಗಳು, ಸಸ್ಯಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಇವೆ. ಅವುಗಳಲ್ಲಿಯೇ ಪ್ರತಿಯೊಂದರಲ್ಲಿ ಮತ್ತು ನಮ್ಮ ವ್ಯವಸ್ಥೆಯಲ್ಲಿನ ವೈವಿಧ್ಯತೆಯಿಂದಾಗಿ ಸಾಕಷ್ಟು ವೈರಸ್​ಗಳು ಕೋವಿಡ್​-19 ರೀತಿ ಮಾನವನಿಗೆ ವರ್ಗಾವಣೆ ಆಗಬಹುದು ಎಂದು ಎಚ್ಚರಿಸಿದರು.

    ಕೋವಿಡ್​-19 ನಿಯಂತ್ರಣಕ್ಕೆ ಬಂದಲ್ಲಿ, ಮುಂದಿನದ್ದರ ಬಗ್ಗೆ ನಾವೆಲ್ಲರೂ ಚಿಂತಿಸಬೇಕಾಗಿದೆ. ಆರೋಗ್ಯ ಮತ್ತು ಸಂರಕ್ಷಣೆಯ ಬಗ್ಗೆ ಸರಿವು ಮೂಡಿಸಲೇಬೇಕಿದೆ. ಜಾಗತೀಕರಣ ಹೆಸರಿನಲ್ಲಿ ವಿಶ್ವವನ್ನು ನಾಶಪಡಿಸುವುದನ್ನು ಮುಂದುವರಿಸಿದರೆ, ಭವಿಷ್ಯದಲ್ಲಿ ಕರೊನಾದಂತಹ ಇನ್ನು ಹೆಚ್ಚಿನ ರೋಗಗಳು ಬರುವದಂತೂ ಖಂಡಿತ ಎಂದು ಹೇಳಿದ್ದಾರೆ.

    ಅಂದಹಾಗೆ ಕರೊನಾ ವೈರಸ್​ ಚೀನಾದ ವುಹಾನ್​ನಲ್ಲಿ ಜೀವಂತ ಪ್ರಾಣಿ ಮಾರುಕಟ್ಟೆಯಲ್ಲಿ ಸ್ಪೋಟಗೊಂಡಿದೆ ಎಂದು ಹೇಳಲಾಗಿದೆ. ಇಂದು ಜಗತ್ತಿಗೆ ಹರಡಿ ಈಗಾಗಲೇ ಸಾವಿರಾರು ಮಂದಿಯನ್ನು ಬಲಿಪಡೆದುಕೊಂಡಿದ್ದು, ಸಾರ್ವಜನಿಕ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಈಗಲಾದರೂ ಪರಿಸರ ಕಾಳಜಿಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಮನುಕುಲದ ನಾಶ ದೂರ ಉಳಿದಿಲ್ಲ. (ಏಜೆನ್ಸೀಸ್​)

    30 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲೂ ಸಂಪೂರ್ಣ ಲಾಕ್​ಡೌನ್: ಜಗತ್ತಿನಾದ್ಯಂತ 14,510 ಕರೋನಾ ಕಂಟಕಕ್ಕೆ ಬಲಿಯಾದವರು, 3.33 ಲಕ್ಷ ಜನರಿಗೆ ಸೋಂಕು

    Covid19 ಹರಡುವ ಟೈಮ್ ಬಾಂಬ್ ಆಗಲಿದೆ ಚೀನಾ: 2007ರಲ್ಲೇ ಎಚ್ಚರಿಸಿದ್ದ ಸೈಂಟಿಸ್ಟ್​ಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts