More

    ಕರೊನಾ ಇಲ್ಲದಿದ್ದರೂ ಗ್ರಾಮಸ್ಥರಿಂದ ಬಹಿಷ್ಕಾರಕ್ಕೆ ಒಳಗಾದ ವ್ಯಕ್ತಿ ಏನಾದ?

    ಚೆನ್ನೈ: ಕೆಮ್ಮು ಮತ್ತು ಆಯಾಸದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಕರೊನಾ ವೈರಸ್​ ಹರಡಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಬಿಂಬಿಸಿ ಗ್ರಾಮದಿಂದ ಬಹಿಷ್ಕಾರ ಹಾಕಿದ ಹಿನ್ನೆಲೆಯಲ್ಲಿ ಆತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

    ಮಧುರೈ ಮತ್ತು ತಿರುಮಂಗಲಂ ನಡುವಿನ ಕಪ್ಪಲೂರು ಟೋಲ್ ಗೇಟ್​ನ ರೈಲು ಹಳಿ ಸಮೀಪ ವ್ಯಕ್ತಿಯ ಶವ ಪತ್ತೆಯಾಗಿದೆ. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಧುರೈ ಜಿಲ್ಲೆಯ ಗ್ರಾಮವೊಂದರ ವ್ಯಕ್ತಿ ಕೂಲಿಗಾಗಿ ಕೇರಳಕ್ಕೆ ತೆರಳಿದ್ದರು. ಇತ್ತೀಚೆಗೆ ಅವರು ಸ್ವಗ್ರಾಮಕ್ಕೆ ಮರಳಿದ್ದರು. ಕೆಮ್ಮು ಹಾಗೂ ಆಯಾಸದಿಂದ ಬಳಲುತ್ತಿದ್ದರು. ಗ್ರಾಮಸ್ಥರು ಅವರನ್ನು ಆಸ್ಪತ್ರೆಗೆ ಸಾಗಿಸಲು ಸರ್ಕಾರಿ ಆಂಬುಲೆನ್ಸ್​ಗೆ ಕರೆ ಮಾಡಿದ್ದರು.  ಬರುವುದು ತಡವಾದ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಂಬುಲೆನ್ಸ್​  ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ವ್ಯಕ್ತಿಗೆಯ ಫೋಟೋ ಹಾಕಿ ಅವರಿಗೆ ಸೋಂಕು ಹರಡಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಬಿಂಬಿಸಲಾಯಿತು.

    ಆಸ್ಪತ್ರೆಯಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಿದ ವೈದ್ಯರು  ಗಂಟಲು ದ್ರವ ಹಾಗೂ ರಕ್ತವನ್ನು ಪರೀಕ್ಷೆಗೆ ಕಳುಹಿಸಿದ್ದರು. ವರದಿಯಲ್ಲಿ  ವೈರಸ್​  ಹರಡಿಲ್ಲ ಎಂದು ದೃಢಪಟ್ಟ ನಂತರ  ಮರಳಿ ಗ್ರಾಮಕ್ಕೆ ಬಿಟ್ಟಿದ್ದರು.  ಗ್ರಾಮಕ್ಕೆ ಮರಳಿದ ಅವರನ್ನು ಗ್ರಾಮಸ್ಥರು ಬಹಿಷ್ಕಾರ ಹಾಕಿದರು. ಇದರಿಂದ ನೊಂದ ಅವರು ಊರು ಬಿಟ್ಟು ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಮಹಿಳಾ ಜನ್​ಧನ್​ ಖಾತೆಗೆ ಮಾಸಿಕ ತಲಾ 500 ರೂ. ಪಾವತಿಸುವ ಪ್ರಕ್ರಿಯೆ ನಾಳೆಯಿಂದ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts