More

    ಕರೊನಾ ಮಹಾಮಾರಿ ಬಗ್ಗೆ ನಿಮ್ಮಲ್ಲಿ ಮೂಡಬಹುದಾದ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ…

    ಕರೊನಾ ವೈರಸ್​ ಕುರಿತಂತೆ ಇಲ್ಲ ಸಲ್ಲದ ವದಂತಿಗಳು ಹಬ್ಬುತ್ತಿವೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಹಲವಾರು ಸಂಶಯಗಳು, ಪ್ರಶ್ನೆಗಳಿವೆ. ಈ ಮಹಾಮಾರಿ ಕುರಿತಂತೆ ಸಾರ್ವಜನಿಕರಲ್ಲಿ ಮೂಡಬಹುದಾದ ಕೆಲವೊಂದು ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲಾಗಿದೆ.

    # ಕರೊನಾ ವೈರಸ್​ ಹರಡದಂತೆ ನಾನೇನು ಮಾಡಬಹುದು?
    ಶುಭಾಶಯ ಕೋರುವಾಗ ಶೇಕ್​ಹ್ಯಾಂಡ್​ ಮಾಡುವುದು, ಅಪ್ಪಿಕೊಳ್ಳುವುದು ಇತ್ಯಾದಿ ದೈಹಿಕ ಸಂಪರ್ಕ ಬೇಡ. ನಮಸ್ತೆ ಎನ್ನುವ ಮೂಲಕ, ಸ್ಮೈಲ್​ ಮಾಡುವ ಮೂಲಕ ಇಲ್ಲವೇ ತಲೆ ಬಾಗಿಸುವ ಮೂಲಕ ಪರಸ್ಪರ ಶುಭಾಶಯ ಕೋರಬಹುದು.

    # ಶೇಕ್​ ಹ್ಯಾಂಡ್​ ಮಾಡಿದರೆ ವೈರಸ್​ ಹೇಗೆ ಹರಡುತ್ತದೆ?
    ಶೇಕ್​ ಹ್ಯಾಂಡ್​ ಮಾಡಿದಾಗ ನಿಮ್ಮ ದೇಹದಲ್ಲಿರುವ ವೈರಸ್ ಇನ್ನೊಬ್ಬರ ಕೈಗೆ ಅಂಟಿಕೊಳ್ಳುತ್ತದೆ. ಆಗ ಅವರು ಕೈ, ಕಣ್ಣು ಇಲ್ಲವೇ ಬಾಯಿಯನ್ನು ಮುಟ್ಟಿಕೊಂಡಾಗ ಇದು ಅದರ ಮೂಲಕ ಅವರ ದೇಹದೊಖಳಕ್ಕೆ ಪ್ರವೇಶಿಸುತ್ತದೆ.

    # ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ರಬ್ಬರ್​ ಗ್ಲೌಸ್​ ಹಾಕಿಕೊಂಡರೆ ಇನ್​ಫೆಕ್ಷನ್​ ಆಗುವುದನ್ನು ತಡೆಗಟ್ಟಬಹುದೆ?
    ಇಲ್ಲ. ಬರಿಯಕೈಯನ್ನು ಆಗಾಗ್ಗೆ ತೊಳೆಯುವುದರಿಂದ ಮಾತ್ರ ವೈರಸ್​ ಸೋಂಕು ತಗುಲದಂತೆ ತಡೆಗಟ್ಟಹುದು. ರಬ್ಬರ್​ ಗ್ಲೌಸ್​ ಹಾಕಿಕೊಂಡರೆ ಅದರಿಂದಲೇ ನೀವು ನಿಮ್ಮ ಕಣ್ಣು, ಮೂಗು, ಬಾಯಿಯನ್ನು ಮುಟ್ಟಿಕೊಳ್ಳುವ ಸಾದ್ಯತೆ ಇರುವ ಕಾರಣ, ಅದರಿಂದ ಯಾವುದೇ ಪ್ರಯೋಜನವಿಲ್ಲ.

    # ನಾನೇಕೆ ಸೋಪಿನಿಂದ ಕೈತೊಳೆಯಬೇಕು?
    ಕೈಯಿಂದಲೇ ಹೆಚ್ಚಾಗಿ ಕರೊನಾ ವೈರಸ್​ ಹರಡುವ ಸಾಧ್ಯತೆ ಇರುವ ಕಾರಣ, ಆಲ್ಕೋಬಾಲ್​ ಅಂಶವಿರುವ ಸೋಪಿನಿಂದ ಕೈಯನ್ನು ತೊಳೆದರೆ ಅದರಲ್ಲಿರುವ ವೈರಸ್​ ನಾಶವಾಗುವ ಸಾಧ್ಯತೆ ಇದೆ.

    #ಕೆಮ್ಮುವ ಅಥವಾ ಸೀನುವ ವ್ಯಕ್ತಿಯಿಂದ ನಾನೆಷ್ಟು ದೂರದಲ್ಲಿ ಇರಬೇಕು? ಏಕೆ?
    ಒಂದು ಮೀಟರ್​ ಅಂದರೆ ಮೂರು ಅಡಿ ದೂರದಲ್ಲಿ ಇರಬೇಕು. ಏಕೆಂದರೆ, ಸೀನುವಾಗ ಅಥವಾ ಕೆಮ್ಮುವಾಗ ಅವರ ಬಾಯಿಯಿಂದ ಇಲ್ಲವೇ ಮೂಗಿನಿಂದ ಬಿಂದು ರೂಪದಲ್ಲಿ ದ್ರವವು ಹೊರಕ್ಕೆ ಬರುತ್ತದೆ. ಅದರಲ್ಲಿ ವೈರಸ್​ ಇರುವ ಸಾಧ್ಯತೆ ಇದೆ. ಒಂದು ವೇಳೆ ನೀವು ಸಮೀಪದಲ್ಲಿ ಇದ್ದರೆ, ಆ ದ್ರವವನ್ನು ನೀವು ಉಸಿರಾಡುವ ಸಾಧ್ಯತೆ ಇದೆ. ಇದರಿಂದ ಅದು ನಿಮ್ಮ ದೇಹದೊಳಕ್ಕೂ ಪ್ರವೇಶ ಮಾಡಬಲ್ಲುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts