More

    ಸಾವಿರದತ್ತ ದಾಪುಗಾಲು ಇಡುತ್ತಿರೋ ಕರೊನಾ ಸೋಂಕಿತರ ಸಂಖ್ಯೆ: ಇಂದು ಹೊಸದಾಗಿ ಪತ್ತೆಯಾದ ಪ್ರಕರಣಗಳೆಷ್ಟು?

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ಪೀಡಿತರ ಸಂಖ್ಯೆ ಸಾವಿರದತ್ತ ದಾಪುಗಾಲು ಇಡುತ್ತಿದ್ದು, ಬುಧವಾರ ಹೊಸದಾಗಿ 34 ಪ್ರಕರಣಗಳು ದೃಢವಾಗಿದ್ದು, ಒಟ್ಟು ಸಂಚಿತ ಖಚಿತ ಪ್ರಕರಣಗಳ ಸಂಖ್ಯೆ 959ಕ್ಕೆ ಏರಿಕೆಯಾಗಿದೆ. ಇವುಗಳ ಪೈಕಿ 33 ಪ್ರಕರಣಗಳಲ್ಲಿ ರೋಗಿಗಳು ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಕೇವಲ 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ​ ಪೇದೆಯ ಅಕಾಲಿಕ ಮರಣದಿಂದ ಮುಗಿಲು ಮುಟ್ಟಿದ ಆಕ್ರಂದನ

    ಇದಲ್ಲದೆ, ಒಂದು ಸಾವು ಕೋವಿಡ್​ 19 ರ ಹೊರತಾದ ಕಾರಣಕ್ಕೆ ಸಂಭವಿಸಿದೆ. 451 ಪ್ರಕರಣಗಳಲ್ಲಿ ರೋಗಿಗಳು ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೊಸ ಪ್ರಕರಣಗಳು ನಿನ್ನೆ ಸಂಜೆ 5ಗಂಟೆಯಿಂದ ಇಂದು ಸಂಜೆ 12 ಗಂಟೆಯವರೆಗೆ ದೃಢಪಟ್ಟಿರುವುದಾಗಿದೆ.

    ಇಂದು ದೃಢಪಟ್ಟಿರುವ 34 ಪ್ರಕರಣಗಳ ಪೈಕಿ 12 ಪ್ರಕರಣ ಬೀದರ್​ನಲ್ಲಿ, ಕಲಬುರಗಿಯಲ್ಲಿ 8, ಹಾಸನದಲ್ಲಿ 4 ಹಾಗೂ ಬೆಂಗಳೂರು ನಗರ, ವಿಜಯಪುರ, ಉತ್ತರ ಕನ್ನಡ ಮತ್ತು ದಾವಣಗೆರೆಯಲ್ಲಿ ತಲಾ ಎರಡು ಪ್ರಕರಣಗಳು ಹಾಗೂ ಬಳ್ಳಾರಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ. ಉಳಿದ ವಿವರಗಳಿಗಾಗಿ ಪಟ್ಟಿಯನ್ನು ಗಮನಿಸಿ..

    ಇದನ್ನೂ ಓದಿ: ಸಮುದಾಯ ಭವನದ ಕೀ ಕೇಳಿದ್ದೇ ತಪ್ಪಾ? ಪೊಲೀಸ್​ ಎಂದು ನೋಡದೆ ಶಿಕ್ಷಕ ಹೀಗೆ ಮಾಡ್ಬೋದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts