More

    ಕರೊನಾ ಲಾಕ್​ಡೌನ್​ ನಡುವೆಯೂ ಕಾನೂನಿನ ಅಂಜಿಕೆ ಇಲ್ಲದೇ ಬಯಲಿನಲ್ಲಿಯೇ ಗೋಹತ್ಯೆ?

    ವಿಜಯಪುರ: ಕರೊನಾ ಮಹಾಮಾರಿಗೆ ಮನುಕುಲವೇ ತತ್ತರಿಸಿದ್ದರೆ ಇತ್ತ ಅದೇ ಮನುಷ್ಯ ಬಟಾಬಯಲಿನಲ್ಲೇ ಗೋವಿನ ದೇಹ ಬಗೆಯುತ್ತಿದ್ದಾನೆ !

    ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಹೊರವಲಯದಲ್ಲಿ ಭಾನುವಾರ ಗೋವು ಕಡಿದಿದ್ದು ಅದರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹಾಡಹಗಲೇ ಹಳ್ಳದಲ್ಲಿ ಗೋವಿನ ಚರ್ಮ ಸುಲಿಯುತ್ತಿರುವ ದೃಶ್ಯ ಕರಳು ಚುರ್ ಎನ್ನುವಂತಿದೆ.

    ಘಟನೆ ವಿವರ:
    ಗ್ರಾಮದ ಸಿದ್ದಪ್ಪ ಮಾದರ ಎಂಬುವರು ತಮ್ಮ ಆಕಳನ್ನು ಅಮಾನುಷವಾಗಿ ಕತ್ತರಿಸುತ್ತಿರುವ ದೃಶ್ಯ ಸೆರೆಸಿಕ್ಕಿದೆ. ಆಕಳಿಗೆ ಅನಾರೋಗ್ಯದ ಕಾರಣವೂ ನೀಡಿದ್ದು ಒಂದು ಕಾಲು ಮುರಿದಿತ್ತೆಂದು ತಿಳಿಸಿದ್ದಾರೆ. ಆದರೆ, ಆಕಳು ಮೊದಲೇ ಸತ್ತಿತ್ತಾ ಅಥವಾ ಅನಾರೋಗ್ಯದ ನೆಪವೊಡ್ಡಿ ಕೊಂದಿದ್ದಾರಾ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಅದೇನೇ ಇರಲಿ ಆಕಳನ್ನು ಬಯಲಿನಲ್ಲಿ ಕಡಿಯದೇ ಕಸಾಯಿ ಖಾನೆಗೆ ನೀಡಬೇಕೆಂಬ ನಿಯಮ ಗಾಳಿಗೆ ತೂರಲಾಗಿದೆ. ಅಲ್ಲದೇ, ಆಕಳು ಕಡಿಯಲು ಪರವಾನಿಗೆ ಸಹ ಬೇಕು. ಅದೂ ಅಲ್ಲದೇ ಲಾಕ್‌ಡೌನ್ ಸಮಯದಲ್ಲಿ ನಾಲ್ಕಾರು ಜನ ಸೇರಿ ಆಕಳು ಕಡಿಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಉದ್ಭವಿಸಿದೆ.

    ತಹಸೀಲ್ದಾರ್-ಪೊಲೀಸ್‌ಗೆ ಮಾಹಿತಿ:
    ಗ್ರಾಮದ ಕೆಲ ಯುವಕರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುತ್ತಿದ್ದಂತೆ ಶ್ರೀರಾಮ ಸೇನೆ ಜಿಲ್ಲಾ ಸಂಚಾಲಕ ರಾಕೇಶ ಮಠ ಕೂಡಲೇ ಸಿಂದಗಿ ತಹಸೀಲ್ದಾರ್ ಹಾಗೂ ಪೊಲೀಸ್ ಠಾಣೆಗೆ ಮೌಖಿಕವಾಗಿ ದೂರು ನೀಡಿದ್ದಾರೆ. ಸ್ಥಳಕ್ಕೆ ಸಿಂದಗಿ ಪೊಲೀಸ್ ದೌಡಾಯಿಸಿದ್ದು ಗೋಹತ್ಯೆ ಮಾಡುತ್ತಿದ್ದವರನ್ನು ವಿಚಾರಣೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಪಿಎಸ್‌ಐ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಬೆಳಗ್ಗೆ ಆಕಳು ಕಡಿಯುತ್ತಿದ್ದ ದೃಶ್ಯಗಳು ಗಮನಕ್ಕೆ ಬಂದವು. ಗ್ರಾಮದ ಕೆಲವರು ಮಾಹಿತಿ ನೀಡಿದರು. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ದೂರು ನೀಡಲು ಈಗ ಅವಕಾಶ ಇಲ್ಲದ ಕಾರಣ ಸುಮ್ಮನಿದ್ದೇವೆ. ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕು.

    | ರಾಕೇಶ ಮಠ, ಶ್ರೀರಾಮ ಸೇನೆ ಜಿಲ್ಲಾ ಸಂಚಾಲಕ

    ಬಿಂದಿಗೆ ಹೊತ್ತು ಬರುತ್ತಿದ್ದ ಮಹಿಳೆಯರನ್ನು ತಡೆದ ಪೊಲೀಸರಿಗೆ ಸಿಕ್ಕಿದ್ದೇನು?

    ಅಡ್ಡಾದಿಡ್ಡಿ ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ ಇನ್‌ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿಸಲು ಯತ್ನಿಸಿ ಯುವತಿಯರಿಬ್ಬರು ಪರಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts