More

    ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ, ಕಡಿಮೆಯಾಗುತ್ತಾ?: ವಿಜಯವಾಣಿ ಫೋನ್​ಇನ್​ನಲ್ಲಿ ಆರೋಗ್ಯ ಇಲಾಖೆ ಜಂಟಿ ನಿರ್ದೇಶಕರ ಉಪಯುಕ್ತ ಮಾಹಿತಿ

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ ಜಾಗತಿಕವಾಗಿ ಅಟ್ಟಹಾಸ ಮೆರೆಯುತ್ತಿದ್ದು ಎಲ್ಲೆಡೆ ಜನರು ಭಯಭೀತಗೊಂಡಿದ್ದಾರೆ. ಆರೋಗ್ಯ ಬಿಕ್ಕಟ್ಟಿನಂತಹ ಸಂದಿಗ್ಧ ಸಮಯದಲ್ಲಿ ರಾಜ್ಯದ ಜನರಿಗೆ ಸಾಂಕ್ರಮಿಕ ರೋಗದ ಬಗ್ಗೆ ಅರಿವು ಮೂಡಿಸಲು ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಫೋನ್​ಇನ್​ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ(ಸಾಂಕ್ರಾಮಿಕ ರೋಗಿಗಳ ವಿಭಾಗ) ಜಂಟಿ ನಿರ್ದೇಶಕ , ಕೋವಿಡ್​ 19 ನೋಡಲ್​ ಅಧಿಕಾರಿ ಡಾ.ಬಿ.ಜಿ. ಪ್ರಕಾಶ್​ ಕುಮಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಷರೀಫ್ ಅವರು​ ಭಾಗವಹಿಸಿ ಜನರ ಗೊಂದಲಗಳನ್ನು ಪರಿಹರಿಸಿದರು.

    ಪಾಸಿಟಿವ್​ ಕೇಸ್​ ಬಂದ ಏರಿಯಾವನ್ನು ಕಂಟೈನ್ಮೆಂಟ್​ ಝೋನ್​ ಎಂದು ಘೋಷಿಸಿ ಸಂಪೂರ್ಣ ಲಾಕ್​ಡೌನ್​ ಮಾಡುತ್ತೇವೆ. ಅಲ್ಲಿ ಪ್ರವೇಶ ಮತ್ತು ನಿರ್ಗಮನ​ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಪೊಲೀಸ್​ ಮತ್ತು ಆರೋಗ್ಯ ಇಲಾಖೆಯವರು ಒಳಹೋಗುವವರನ್ನು ಪರೀಕ್ಷಿಸಿ, ಪರಿಶೀಲಿಸಿಯೇ ಒಳಬಿಡುತ್ತಾರೆ ಎನ್ನವ ಮೂಲಕ ಕರೆದಾರರೊಬ್ಬರ ಗೊಂದಲಕ್ಕೆ ಪ್ರಕಾಶ್​ ಕುಮಾರ್ ತೆರೆ ಎಳೆದರು. ಇದೇ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ ಎಂದರು.

    ಹೀಗೆ ಸಾಕಷ್ಟು ಮಂದಿ ಫೋನ್ ಇನ್​ ಕಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಗೊಂದಲಗಳನ್ನು ಬಗೆಹರಿಸಿಕೊಂಡರು. ಇದರೊಂದಿಗೆ ರಾಜ್ಯದಲ್ಲಿ ಕರೊನಾ ಪರಿಸ್ಥಿತಿ ಹೇಗಿದೆ? ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ? ಹಾಗೂ ಸೋಂಕು ನಿಂಯತ್ರಂಣಕ್ಕೆ ಆರೋಗ್ಯ ಇಲಾಖೆ ಯಾವೆಲ್ಲಾ ಕ್ರಮಕೈಗೊಂಡಿದೆ? ಜನರು ಏನೇನು ಮಾಡಬೇಕು? ಎಂಬುದರ ಬಗ್ಗೆ ಪ್ರಕಾಶ್​ ಕುಮಾರ್ ಅವರು ವಿವರಣೆ ನೀಡಿದ್ದು, ಈ ಎಲ್ಲಾ ಉಪಯುಕ್ತ ಮಾಹಿತಿ ನಾಳಿನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಲಿದೆ.

    ವಿಜಯವಾಣಿ ಫೋನ್​ಇನ್​ನಲ್ಲಿ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರಿಂದ ಉಪಯುಕ್ತ ಮಾಹಿತಿ

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ ಜಾಗತಿಕವಾಗಿ ಅಟ್ಟಹಾಸ ಮೆರೆಯುತ್ತಿದ್ದು ಎಲ್ಲೆಡೆ ಜನರು ಭಯಭೀತಗೊಂಡಿದ್ದಾರೆ. ಆರೋಗ್ಯ ಬಿಕ್ಕಟ್ಟಿನಂತಹ ಸಂದಿಗ್ಧ ಸಮಯದಲ್ಲಿ ರಾಜ್ಯದ ಜನರಿಗೆ ಸಾಂಕ್ರಮಿಕ ರೋಗದ ಬಗ್ಗೆ ಅರಿವು ಮೂಡಿಸಲು ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಫೋನ್​ಇನ್​ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ(ಸಾಂಕ್ರಾಮಿಕ ರೋಗಿಗಳ ವಿಭಾಗ) ಜಂಟಿ ನಿರ್ದೇಶಕ , ಕೋವಿಡ್​ 19 ನೋಡಲ್​ ಅಧಿಕಾರಿ ಡಾ.ಬಿ.ಜಿ. ಪ್ರಕಾಶ್​ ಕುಮಾರ್ ಭಾಗವಹಿಸಿ ಜನರ ಗೊಂದಲಗಳನ್ನು ಪರಿಹರಿಸಿದರು.ಕಾರ್ಯಕ್ರಮದ ಸಮಗ್ರ ಮಾಹಿತಿ ನಾಳಿನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಲಿದೆ#Coronavirus #Covid19 #HealthDept #BGPrakashKumar #PhoneInPragram #Vijayavani

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಏಪ್ರಿಲ್ 25, 2020

    ರಾಜ್ಯದಲ್ಲಿ 489ಕ್ಕೇರಿದ ಕರೊನಾ ಸೋಂಕಿತರ ಸಂಖ್ಯೆ: ಬೆಂಗಳೂರಿನಲ್ಲಿ, ಬೆಳಗಾವಿಯ ಹೀರೆಬಾಗೇವಾಡಿಯಲ್ಲಿ ತಲಾ 6 ಹೊಸ ಪ್ರಕರಣಗಳು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts