More

    ಕರೊನಾ ವದಂತಿ ನಿಯಂತ್ರಣಕ್ಕೆ ಬಂತು ರಾಜ್ಯ ಪೊಲೀಸರ ‘ಕೋವಿಡ್ 19 ಫ್ಯಾಕ್ಟ್ ಚೆಕ್’ ವೆಬ್‌ಸೈಟ್

    ಬೆಂಗಳೂರು: ಕರೊನಾ ವೈರಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹರಿಬಿಡುತ್ತಿರುವ ಸುಳ್ಳು ಮಾಹಿತಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.

    ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ‘ಕೋವಿಡ್ 19 ಫ್ಯಾಕ್ಟ್​ಚೆಕ್’ ವೆಬ್‌ಸೈಟ್ ಅಭಿವೃದ್ಧಿ ಪಡಿಸಿದೆ. ಇದನ್ನು ಬಳಸುವಂತೆ ಜನರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಟ್ವಿಟರ್‌ನಲ್ಲಿ ಕರೆ ಕೊಟ್ಟಿದ್ದಾರೆ.

    ಫೇಸ್‌ಬುಕ್, ವಾಟ್ಸ್ ಆ್ಯಪ್, ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಸೇರಿ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಜನರಲ್ಲಿ ಆತಂಕ ಸೃಷ್ಟಿಸುವಂತಹ ವಿಡಿಯೋ, ಫೋಟೋ, ಬರಹವಿದ್ದ ಪೋಸ್ಟ್‌ಗಳನ್ನು ಹರಿಬಿಡಲಾಗುತ್ತಿದೆ. ಇಂತಹ ಪೋಸ್ಟ್‌ಗಳು ಕರೊನಾ ಭೀತಿ ಜತೆಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿದೆ.

    ಇದು ಹೀಗೆ ಮುಂದುವರಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯೂ ಇದೆ. ಈ ಕುರಿತು ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ‘ಕೋವಿಡ್ 19 ಫ್ಯಾಕ್ಟ್ ಚೆಕ್’ ವೆಬ್‌ಸೈಟ್ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಗುವ ಅನುಮಾನ ಮೂಡಿಸುವಂತಹ ವಿಡಿಯೋ, ಫೋಟೋ ಹಾಗೂ ಕಿಡಿಗೇಡಿಗಳ ಆನ್‌ಲೈನ್ ಲಿಂಕ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಅದನ್ನು ಪರಿಶೀಲಿಸಿ ವದಂತಿ ಅಥವಾ ಸತ್ಯ ಎಂಬುದನ್ನು ಪರಿಶೀಲಿಸಲಾಗುತ್ತದೆ. ವದಂತಿ ಎಂಬುದು ಕಂಡು ಬಂದರೆ ಅದನ್ನು ನಾಶಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮೌಲಾನಾ ಸಾದ್‌ ಒಂದು ಕೋಟಿ ರೂ. ದೇಣಿಗೆ ಸುದ್ದಿ ಹಿಂದಿನ ಅಸಲಿಯತ್ತು ಫ್ಯಾಕ್ಟ್‌ ಚೆಕ್‌ನಿಂದ ಬಹಿರಂಗ

    ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್​​ ಸಾವಿನ ಸುದ್ದಿ ಪ್ರಕಟಿಸಿ ತೀವ್ರ ಮುಜುಗರಕ್ಕೀಡಾದ ಪಾಕ್​ ಮುಂಚೂಣಿ ಮಾಧ್ಯಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts