More

    ಕೋವಿಡ್​ ಭೀಕರತೆಗೆ ಸಾಕ್ಷಿಯಾದ ಆಸ್ಪತ್ರೆ: ಕರೊನಾ ಮೃತದೇಹಗಳ ಎದುರೇ ರೋಗಿಗಳಿಗೆ ಚಿಕಿತ್ಸೆ

    ಬ್ರಾಸಿಲಿಯಾ: ಕರೊನಾ ವೈರಸ್​ ವಿರುದ್ಧ ಹೋರಾಡುತ್ತಿದ್ದ ರೋಗಿಗಳ ಎದುರೇ ಕೋವಿಡ್​ನಿಂದ ಸಾವಿಗೀಡಾದವರ ಮೃತದೇಹಗಳನ್ನು ಇಟ್ಟಿದ್ದಂತಹ ಶಾಕಿಂಗ್​ ವಿಡಿಯೋವನ್ನು ಬ್ರೆಜಿಲ್​ನ ಆಸ್ಪತ್ರೆಯಲ್ಲಿ ಸೆರೆಹಿಡಿಯಲಾಗಿದ್ದು, ಕರೊನಾ ಭೀಕರತೆಗೆ ಸಾಕ್ಷಿಯಾಗಿದೆ.

    ರೋಗಿಗಳ ಎದುರೇ ಕರೊನಾದಿಂದ ಜೀವ ಕಳೆದುಕೊಂಡ 14 ಮಂದಿಯ ಮೃತದೇಹಗಳನ್ನು ಇಡಲಾಗಿತ್ತು. ರೋಗಿಗಳ ಮನಸ್ಸನ್ನು ಘಾಸಿಗೊಳಿಸುವ ದೃಶ್ಯ ಕಂಡುಬಂದಿದ್ದು, ಉತ್ತರ ಬ್ರೆಜಿಲ್​ನ ಅಮೆಜಾನಾಸ್​ ​ ರಾಜ್ಯದ ಮಾನೌಸ್​ ನಗರದ ಜಾವೋ ಲುಸಿಯೋ ಆಸ್ಪತ್ರೆಯಲ್ಲಿ.

    ಆಸ್ಪತ್ರೆಯ ನರ್ಸ್​ ಒಬ್ಬರು ಭೀಕರ ದೃಶ್ಯವನ್ನು ಸೆರೆಹಿಡಿದಿದ್ದಾರೆ. ರೋಗಿಗಳಿದ್ದ ವಾರ್ಡ್​ನಲ್ಲಿ ಮೃತದೇಹಗಳನ್ನು ಬ್ಲಾಂಕೆಟ್​ನಿಂದ​ ಮುಚ್ಚಿ ಇರಿಸಿದ್ದ ದೃಶ್ಯ ವಿಡಿಯೋದಲ್ಲಿದೆ.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಮೆಜಾನಾಸ್​ ರಾಜ್ಯ ಆರೋಗ್ಯ ಕಾರ್ಯದರ್ಶಿ, ಸಂತ್ರಸ್ತರು ಏಪ್ರಿಲ್​ 15 ರಾತ್ರಿ ಮರಣ ಹೊಂದಿದ್ದರು. ಏಪ್ರಿಲ್​ 16ರ ಬೆಳಗ್ಗೆ 5 ಮೃತದೇಗಳನ್ನು ಹೊರತೆಗೆಯಲಾಯಿತು. ಇನ್ನು ಒಂಬತ್ತು ದೇಹಗಳು ಆಸ್ಪತ್ರೆಯಲ್ಲಿ ಉಳಿದುಕೊಂಡವು. ಮರಣ ಪ್ರಮಾಣ ಪತ್ರದೊಂದಿಗೆ ಕುಟುಂಬ ಸದಸ್ಯರಿಗೆ ಎದುರು ನೋಡುತ್ತಿದ್ದೆವು ಎಂದಿದ್ದಾರೆ.

    ಇದೀಗ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್​ 19 ಎಂದು ಪರಿಗಣಿಸಲಾಗಿದೆ. ಮತ್ತಷ್ಟು ಬೆಡ್​ಗಳನ್ನು ಹೆಚ್ಚಿಸಲಾಗುತ್ತಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಅಮೆಜಾನಾಸ್​ ರಾಜ್ಯವೊಂದರಲ್ಲೇ ಕೋವಿಡ್​ ಪ್ರಕರಣಗಳು 1,719ಕ್ಕೇರಿದ್ದು, 124 ಮಂದಿ ಈವರೆಗೂ ಸಾವಿಗೀಡಾಗಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಬ್ರೆಜಿಲ್​ನಲ್ಲಿ 30,891 ಪ್ರಕರಣಗಳಿದ್ದು, 1,952 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

    ಇದ್ದಕ್ಕಿದಂತೆ ಚೀನಾ ಕರೊನಾ ಸಾವಿನ ಸಂಖ್ಯೆಯನ್ನು ಹೆಚ್ಚಿಸಿದ್ದೇಕೆ?: ಅನುಮಾನ ಮೂಡಿಸಿದ ಸರ್ಕಾರದ ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts