More

    ಭಾರತದಲ್ಲಿ ಜೂನ್​-ಜುಲೈನಲ್ಲಿ ಕರೊನಾ ಪ್ರಸರಣದ ಪ್ರಮಾಣ ಹೆಚ್ಚಳ ಆಗಬಹುದು…! ಮುಖ್ಯಮಂತ್ರಿಗಳನ್ನು ಎಚ್ಚರಿಸಿದ ಪ್ರಧಾನಮಂತ್ರಿ ಮೋದಿ

    ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆಯಾ ರಾಜ್ಯಗಳಲ್ಲಿನ ಕರೊನಾ ಪರಿಸ್ಥಿತಿ, ಮೇ 3ರ ನಂತರ ಲಾಕ್​ ಡೌನ್​ ಅವಧಿ ವಿಸ್ತರಣೆ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

    ಈ ಸಭೆಯಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಮೇ 3ರ ನಂತರ ಲಾಕ್​ಡೌನ್ ವಿಸ್ತರಣೆ ಮಾಡಿ ಎಂದು ಹೇಳುವುದರ ಜತೆಗೆ, ಕರೊನಾ ಇಲ್ಲದ ಗ್ರೀನ್​ ಝೋನ್​ಗಳಲ್ಲಿ ಲಾಕ್​ಡೌನ್​ ಇನ್ನಷ್ಟು ಸಡಿಲಿಕೆ ಮಾಡಬೇಕು. ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

    ಆದರೆ ಪ್ರಧಾನಿ ಮೋದಿಯವರು, ಈ ರೀತಿ ಒಮ್ಮೆಲೆ ಸಡಿಲಿಕೆ ಮಾಡಿದರೆ ಜೂನ್​, ಜುಲೈನಲ್ಲಿ ಭಾರತದಲ್ಲಿ ಕರೊನಾ ವೈರಸ್​ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು. ಹಾಗಾಗಿ ಯೋಜನಾಬದ್ಧವಾಗಿ, ಅನುಕ್ರಮವಾಗಿ ಚಟುವಟಿಕೆಗಳನ್ನು ಪ್ರಾರಂಭಿಸಬೇಕು. ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದ್ದಾರೆಂದು ಛತ್ತೀಸ್​ಗಡದ ಆರೋಗ್ಯ ಸಚಿವ ಟಿ.ಎಸ್​. ಸಿಂಗ್​ ಡಿಯೋ ತಿಳಿಸಿದ್ದಾರೆ.

    ಹಾಗೇ ಕಳೆದ ಬಾರಿ ಏಪ್ರಿಲ್​ನಲ್ಲಿ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಿದ್ದರು. ಆಗ ಏ.14ರ ನಂತರ ಲಾಕ್​ಡೌನ್​ನಲ್ಲಿ ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಿ ಎಂದು ಕೋರಿಕೊಂಡಾಗ, ಹಾಗೆ ಮಾಡಿದರೆ ಮೇನಲ್ಲಿ ಕರೊನಾ ವೈರಸ್ ಪ್ರಮಾಣ ಮಿತಿಮೀರಬಹುದು ಎಂದು ಮೋದಿಯವರು ಆತಂಕ ವ್ಯಕ್ತಪಡಿಸಿದ್ದರು ಎಂದು ಡಿಯೋ ತಿಳಿಸಿದ್ದಾರೆ.

    ವಿಡಿಯೋ ಕಾನ್ಫರೆನ್ಸ್​ ಮುಗಿದ ಬಳಿಕ ಪ್ರಧಾನಿ ಕಚೇರಿಯು ಒಂದು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮೋದಿಯವರು ಮುಖ್ಯಮಂತ್ರಿಗಳೊಂದಿಗೆ ಏನು ಚರ್ಚೆ ಮಾಡಿದ್ದಾರೆ ಎಂಬುದನ್ನು ತಿಳಿಸಿದೆ.
    ನಾವು ಕೊವಿಡ್​-19ರ ವಿರುದ್ಧ ಹೋರಾಡುತ್ತ, ಆರ್ಥಿಕತೆಯ ಅಭಿವೃದ್ಧಿಗೂ ಒತ್ತು ಕೊಡಬೇಕು ಎಂದು ಎಲ್ಲ ಮುಖ್ಯಮಂತ್ರಿಗಳಿಗೆ ಪಿಎಂ ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts