More

    ಕೊರೊನಾ ವೈರಸ್​ನಿಂದ ಕಾಪಾಡೋ ನೆಪದಲ್ಲಿ ಮೊಬೈಲ್​ ಹ್ಯಾಕ್​ ಆದೀತು ಎಚ್ಚರ…!

    ವಾಷಿಂಗ್ಟನ್​: ಕೊರೊನಾ ವೈರಸ್​ನಿಂದಾಗಿ ಪ್ರಪಂಚದ ಜನ ಕಂಗಾಲಾಗಿದ್ದಾರೆ. ಆದರೆ ಈ ಅಸಹಾಯಕತೆಯನ್ನೇ ದುರುಪಯೋಗ ಮಾಡಿಕೊಂಡಿರುವ ಹ್ಯಾಕರ್​ಗಳು ಕೊರೊನಾ ಬಗ್ಗೆ ಮಾಹಿತಿ ನೀಡುವ ನೆಪದಲ್ಲಿ ನಿಮ್ಮ ಮೊಬೈಲ್​, ಲ್ಯಾಪ್​ಟಾಪ್​ಗಳಿಗೆ ವೈರಸ್​ ನುಸುಳಿಸುವ ಕೆಲಸವನ್ನು ಆರಂಭಿಸಿದ್ದಾರೆ.

    ಪ್ರಪಂಚದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್​ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಸಲುವಾಗಿ ಜನರು ಗೂಗಲ್​ನ ಮೊರೆ ಹೋಗಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಹ್ಯಾಕರ್​ಗಳು ನಿಮ್ಮ ಮೊಬೈಲ್​ ಅಥವಾ ಲ್ಯಾಪ್​ಟಾಪ್​ಗಳಿಗೆ ಕೊರೊನಾ ಮಾಹಿತಿ ಎನ್ನುವ ಸುಳ್ಳು ವೆಬ್​ಸೈಟ್​ಗಳ ಲಿಂಕ್​ಗಳನ್ನು ಇ-ಮೇಲ್​ ಅಥವಾ ಮೆಸೇಜ್​ ಮೂಲಕ ಕಳುಹಿಸುತ್ತಾರೆ. ಒಮ್ಮೆ ನೀವು ಅಂತಹ ಲಿಂಕ್​ಗಳನ್ನು ತೆರೆದು ನೊಡಿದರೆ, ಅದರಿಂದ ಸುಲಭವಾಗಿ ನಿಮ್ಮ ಮೊಬೈಲ್​/ಲ್ಯಾಪ್​ಟಾಪ್​ ಅನ್ನು ಹ್ಯಾಕ್​ ಮಾಡಲಾಗುತ್ತದೆ. ವಿಡಿಯೋಗಳನ್ನು ಕಳುಹಿಸುವ ಮೂಲಕವೂ ಹ್ಯಾಕ್​ ಮಾಡಲಾಗುತ್ತಿದೆ ಎಂದು ಸೈಬರ್​ ಸುರಕ್ಷತಾ ಸಂಸ್ಥೆಯಾಗಿರುವ ಕಾಸ್ಪರ್ಸ್ಕಿ ತಿಳಿಸಿದೆ.

    ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್​ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಜಗತ್ತಿನಾದ್ಯಂತ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗುತ್ತಿದ್ದು, ಗೂಗಲ್​ ಎಸ್​ಒಎಸ್​ ಅಲರ್ಟ್ ಜಾರಿ ಮಾಡುವ ಮೂಲಕ ಜನರಿಗೆ ಮಾಹಿತಿ ನೀಡಲಾರಂಭಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts