More

    ಮುಂದಿನ ವರ್ಷದವರೆಗೂ ಇರುತ್ತೆ ಕರೊನಾ: ಡಿಸಿಎಂ ಅಶ್ವತ್ಥನಾರಾಯಣ

    ಬೆಂಗಳೂರು: ಮುಂದಿನ ವರ್ಷ ಜನವರಿ-ಫೆಬ್ರವರಿವರೆಗೂ ಕರೊನಾ ಹಾವಳಿ ಇರುತ್ತದೆ ಎಂಬ ಅಭಿಪ್ರಾಯ ಸ್ವತಃ ವೈದ್ಯರೂ ಆಗಿರುವ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರಿಂದ ವ್ಯಕ್ತವಾಗಿದೆ.

    ನಮ್ಮಲ್ಲಿ ಬಂದಿರುವ ವೈರಸ್ ಇಲ್ಲೇ ಇರುತ್ತೆ, ಎಲ್ಲೂ ಹೋಗಲ್ಲ. ಇನ್ನೂ ನಾಲ್ಕಾರು ತಿಂಗಳು ಕರೊನಾ ಸೋಂಕು ನಮ್ಮ ಜತೆಗೆ ಇದ್ದೇ ಇರುತ್ತದೆ. ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ತೀವ್ರ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಸುಮಾರು 12 ಸಾವಿರದಷ್ಟು ಸೋಂಕಿತರಿದ್ದಾರೆ. ಇದು 1 ಲಕ್ಷದವರೆಗೂ ಹೋಗಬಹುದು. ಆದ್ದರಿಂದ ದೊಡ್ಡ ಮಟ್ಟದಲ್ಲಿ ಬಲಶಾಲಿಯಾದ ಆರೋಗ್ಯ ವ್ಯವಸ್ಥೆ ಕಲ್ಪಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಾಲಿವುಡ್​ಗೂ ಅಂಟಿದ ಕಳ್ಳಸಾಗಾಣೆ ನಂಟು: ನಟಿ ಶಾಮ್ನಾ ಪ್ರಕರಣದಲ್ಲೂ ಕೇಳಿಬಂತು ಚಿನ್ನದ ರಾಣಿ ಹೆಸರು!

    ಕರೊನಾ ಬೆಂಗಳೂರಿನಲ್ಲಿ ಯಾವ ಪ್ರಮಾಣದಲ್ಲಿ ಏರಿಕೆ ಆಗುತ್ತದೆ ಎಂಬುದನ್ನು ಅಂದಾಜು ಮಾಡುವುದರಲ್ಲಿ ನಾವು ಎಡವಿದ್ದು ನಿಜ. ಇಷ್ಟು ಏರುತ್ತದೆ ಎಂಬುದನ್ನು ಊಹಿಸಿರಲಿಲ್ಲ. ಜಾಸ್ತಿಯಾದಾಗ ತಕ್ಷಣ ಸ್ಪಂದಿಸುವಲ್ಲಿ ನಮ್ಮ ವ್ಯವಸ್ಥೆ ವಿಫಲವಾಗಿದ್ದು ನಿಜ. ಈಗ ಎಲ್ಲವೂ ಸರಿಯಾಗಿದೆ. ಸ್ಯಾಂಪಲ್‌ಗಳ ಸಂಗ್ರಹ ನಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಬಂದಿದ್ದರಿಂದ ಎಲ್ಲವನ್ನೂ ಟೆಸ್ಟ್ ಮಾಡಲಾಗಿಲ್ಲ. ಹಾಗಾಗಿ ಅವು ಅಲ್ಲೇ ಉಳಿದಿವೆ. ಇನ್ನು ಮುಂದೆ ಹಗಲೂರಾತ್ರಿ ಕೆಲಸ ಮಾಡಿ ಅವುಗಳನ್ನೆಲ್ಲ ಟೆಸ್ಟ್ ಮಾಡಿ ಪೂರೈಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೂಡ ಪ್ರತ್ಯೇಕವಾಗಿ ಮಾತನಾಡಿ, ‘‘ಲಾಕ್‌ಡೌನ್ ನಂತರ ಏರಿಕೆಯಾಗುತ್ತದೆ ಎಂಬುದು ಗೊತ್ತಿತ್ತು. ಆದರೆ ಈ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂಬುದು ಗೊತ್ತಿರಲಿಲ್ಲ. ಜುಲೈ ಅಂತ್ಯಕ್ಕೆ ಈ ಪ್ರಮಾಣ ಉಂಟಾಗುತ್ತದೆ ಎಂಬ ಅನುಮಾನ ಇತ್ತು. ಆದರೆ ಆ ಸಂಖ್ಯೆ ಜುಲೈ ಆರಂಭದಲ್ಲೇ ಬಂದುಬಿಟ್ಟಿದೆ. ಆದರೂ ಜನರು ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ವ್ಯವಸ್ಥೆಯಲ್ಲಿ ಸಣ್ಣಪುಟ್ಟ ತೊಂದರೆ ಇರಬಹುದು, ಸರಿ ಮಾಡ್ತೀವಿ’’ ಎಂದು ಹೇಳಿದ್ದಾರೆ.

    ಹೆಬ್ಬಾಳ್ಕರ್ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯಾ?: ರಮೇಶ್​ ಜಾರಕಿಹೊಳಿ ಟಾಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts