More

    ಹೆಚ್ಚುತ್ತಿದೆ ಕರೊನಾ ತ್ಯಾಜ್ಯ: ದೇಶದಲ್ಲಿ ಕಳೆದ ಏಳು ತಿಂಗಳಲ್ಲಿ 33 ಸಾವಿರ ಟನ್ ಕಸ ಉತ್ಪತ್ತಿ

    ನವದೆಹಲಿ: ಭಾರತದಲ್ಲಿ ಕಳೆದ ಏಳು ತಿಂಗಳಲ್ಲಿ ಸುಮಾರು 33,000 ಟನ್ ಕೋವಿಡ್-19 ಜೈವಿಕ ವೈದ್ಯಕೀಯ (ಬಯೋಮೆಡಿಕಲ್) ತ್ಯಾಜ್ಯ ಸೃಷ್ಟಿಯಾಗಿದೆ. ಇದರಲ್ಲಿ ಮಹಾರಾಷ್ಟ್ರದ ಪಾಲು (5,367 ಟನ್) ಗರಿಷ್ಠವಾದುದು ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ. 2020ರ ಅಕ್ಟೋಬರ್ ಒಂದರಲ್ಲೇ ದೇಶಾದ್ಯಂತ 5,500 ಟನ್ ತ್ಯಾಜ್ಯ ಉತ್ಪಾದನೆಯಾಗಿದ್ದು, ಇದು ಮಾಸಿಕ ಗರಿಷ್ಠವಾಗಿದೆ. ಕರ್ನಾಟಕದಲ್ಲಿ 2,026 ಟನ್ ತ್ಯಾಜ್ಯ ಸೃಷ್ಟಿಯಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಸಂಗ್ರಹಿಸಿರುವ ಮಾಹಿತಿ ಪ್ರಕಾರ, 2020 ಜೂನ್​ನಿಂದ ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19ಗೆ ಸಂಬಂಧಿಸಿದ 32,994 ಟನ್ ತ್ಯಾಜ್ಯ ಸೃಷ್ಟಿಯಾಗಿದೆ. ಅವುಗಳನ್ನು 198 ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ ಕೇಂದ್ರಗಳಲ್ಲಿ ಸಂಗ್ರಹಿಸಿ, ಸಂಸ್ಕರಿಸಿ, ವಿಲೇವಾರಿ ಮಾಡಲಾಗಿದೆ.

    ಹೆಚ್ಚುತ್ತಿದೆ ಕರೊನಾ ತ್ಯಾಜ್ಯ: ದೇಶದಲ್ಲಿ ಕಳೆದ ಏಳು ತಿಂಗಳಲ್ಲಿ 33 ಸಾವಿರ ಟನ್ ಕಸ ಉತ್ಪತ್ತಿಯಾವ್ಯಾವ ತ್ಯಾಜ್ಯ?: ಪಿಪಿಇ ಕಿಟ್, ಮಾಸ್ಕ್, ಶೂ ಕವರ್, ಕೈಗವಸು, ಮಾನವ ಅಂಗಾಂಶಗಳು, ರಕ್ತ, ದೇಹದ ದ್ರವಗಳಿಂದ ಕೂಡಿದ ಡ್ರೆಸಿಂಗ್ಸ್, ಪ್ಲಾಸ್ಟರ್ ಕ್ಲಾಸ್ಟ್ ್ಸ ಕಾಟನ್ ಸ್ವಾಬ್​ಗಳು, ರಕ್ತದ ಚೀಲಗಳು, ಸೂಜಿಗಳು, ಸಿರಿಂಜ್​ಗಳು, ರಕ್ತ ಅಥವಾ ದೇಹದ್ರವ ಗಳಿಂದ ಕೂಡಿದ ಬೆಡ್​ಗಳು ಮುಂತಾದವುಗಳು.

    ಕರೊನಾ ಸಾವಿನ ದರ ಇಳಿಕೆ

    ಭಾರತದಲ್ಲಿ ಭಾನುವಾರ 136 ಮಂದಿ ಕೋವಿಡ್-19ಗೆ ಬಲಿಯಾಗಿದ್ದು, ದೇಶದ ಒಟ್ಟಾರೆ ಸಾವಿನ ದರ ಶೇಕಡ 1.44ಕ್ಕೆ ಕುಸಿದಿದೆ. ಕಳೆದ 16 ದಿನಗಳಲ್ಲಿ ಇದು ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮೃತರ ಒಟ್ಟು ಸಂಖ್ಯೆ 1,51,184ಕ್ಕೆ ತಲುಪಿದೆ. ಈ ಅವಧಿಯಲ್ಲಿ 15,199 ಹೊಸ ಪ್ರಕರಣ ವರದಿಯಾಗಿದ್ದು ಸೋಂಕಿತರ ಒಟ್ಟು ಸಂಖ್ಯೆ 1,04,66,545ಕ್ಕೆ ಏರಿದೆ. ಇದುವರೆಗೆ 1,00,90,658 ಜನರು ಚೇತರಿಸಿಕೊಂಡಿದ್ದಾರೆ. ಚೇತರಿಕೆ ದರ ಶೇ. 96.42 ಆಗಿದೆ. ದೇಶದಲ್ಲಿ ಒಟ್ಟು 2,20,388 ಸಕ್ರಿಯ ಪ್ರಕರಣಗಳಿದ್ದು ಒಟ್ಟು ಸೋಂಕಿತರ ಶೇ. 2.14 ಆಗಿದೆ ಎಂದು ಸಚಿವಾಲಯ ವಿವರಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ದೇಶದಲ್ಲಿ ಇದುವರೆಗೆ ಒಟ್ಟು 18,10,96,622 ಸ್ಯಾಂಪಲ್​ಗಳ ಪರೀಕ್ಷೆ ನಡೆಸಲಾಗಿದೆ.

    ತ್ಯಾಜ್ಯದ ಮೇಲೆ ನಿಗಾಕ್ಕೆ ಆಪ್ ಅಭಿವೃದ್ಧಿ

    ಕರೊನಾ ವೈರಸ್ ಸಂಬಂಧಿತ ಬಯೋಮೆಡಿಕಲ್ ತ್ಯಾಜ್ಯದ ಮೇಲೆ ನಿಗಾ ವಹಿಸಲು ಸಿಪಿಸಿಬಿ 2020ರ ಮೇ ತಿಂಗಳಲ್ಲಿ ‘ಕೋವಿಡ್19ಬಿಡಬ್ಲ್ಯುಎಂ’ ಮೊಬೈಲ್ ಆಪ್ ಅಭಿವೃದ್ಧಿಪಡಿಸಿತ್ತು. ಇಲೆಕ್ಟ್ರಾನಿಕ್ ಮ್ಯಾನಿಫೆಸ್ಟ್ ವ್ಯವಸ್ಥೆ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತದೆ.

    ಚೀನಾದಲ್ಲಿ ಹೊಸ ಕೇಸ್

    ಚೀನಾದ ಹುಬೆ ಪ್ರಾಂತ್ಯದಲ್ಲಿ 380ಕ್ಕೂ ಹೆಚ್ಚು ಹೊಸ ಕರೊನಾ ಪ್ರಕರಣಗಳು ಭಾನುವಾರ ವರದಿಯಾಗಿವೆ. ಭಾನುವಾರ ಬೆಳಗ್ಗೆ 40 ಪ್ರಕರಣಗಳು ದೃಢಪಟ್ಟಿದ್ದು ಹೊಸ ಪ್ರಕರಣದ ಸಂಖ್ಯೆ 223ಕ್ಕೆ ಏರಿದೆ. ಇನ್ನೂ 161 ಜನರ ವರದಿ ಪಾಸಿಟಿವ್ ಬಂದಿದೆಯಾದರೂ ಅವರಲ್ಲಿ ಕರೊನಾದ ಲಕ್ಷಣವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾದಲ್ಲಿ ಲಕ್ಷಣರಹಿತ ಸೋಂಕಿತರನ್ನು ಅಧಿಕೃತ ಅಂಕಿಸಂಖ್ಯೆಯಲ್ಲಿ ಸೇರಿಸುವುದಿಲ್ಲ.

    ಉಚಿತ ಲಸಿಕೆ, ಮಮತಾ ಹೇಳಿಕೆಗೆ ಬಿಜೆಪಿ ಆಕ್ಷೇಪ

    ರಾಜ್ಯದ ಪ್ರತಿಯೊಬ್ಬರಿಗೂ ಉಚಿತವಾಗಿ ಕರೊನಾ ಲಸಿಕೆ ನಿಡಲಾಗುವುದೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದು ಇದರಿಂದ ಬಿಜೆಪಿಗೆ ಇರಿಸುಮುರಿಸಾಗಿದೆ. ‘ಜನರಿಗೆ ಉಚಿತವಾಗಿ ಲಸಿಕೆ ನೀಡಲು ರಾಜ್ಯ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಕಟಿಸಲು ನನಗೆ ಸಂತೋಷವಾಗುತ್ತಿದೆ’ ಎಂಬ ಒಕ್ಕಣೆಯಿರುವ ಪತ್ರವನ್ನು ಬ್ಯಾನರ್ಜಿ ವೈದ್ಯರು ಮತ್ತು ಪೊಲೀಸರಿಗೆ ಬರೆದಿದ್ದು ಅದು ವ್ಯಾಪಕವಾಗಿ ವೈರಲ್ ಆಗಿದೆ. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ದೇಶಾದ್ಯಂತ 3 ಕೋಟಿ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ. ಈಗ ಉಚಿತ ಲಸಿಕೆ ನೀಡುವುದಾಗಿ ಹೇಳುವ ಮೂಲಕ ಮಮತಾ ಬ್ಯಾನರ್ಜಿ ಇದರ ಶ್ರೇಯವನ್ನು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.

    ನೆಗೆಟಿವ್ ವರದಿ ಕಡ್ಡಾಯ ಅಲ್ಲವೆಂದ ಪುರಿ ಮಂದಿರ

    ಪುರಿಯ ಐತಿಹಾಸಿಕ ಶ್ರೀ ಜಗನ್ನಾಥ ದೇವಸ್ಥಾನಕ್ಕೆ ಬರುವ ಭಕ್ತರು ಕೋವಿಡ್-19 ನೆಗೆಟಿವ್ ವರದಿ ಹಾಜರಿಪಡಿಸುವುದು ಇನ್ನು ಮುಂದೆ ಕಡ್ಡಾಯವಲ್ಲ ಎಂದು ದೇವಳದ ಆಡಳಿತ ಮಂಡಳಿ ಭಾನುವಾರ ತಿಳಿಸಿದೆ. ಸದ್ಯಕ್ಕೆ ನೆಗೆಟಿವ್ ವರದಿ ಕಡ್ಡಾಯ ನಿಯಮ ಜಾರಿಯಲ್ಲಿದ್ದು, ಜನವರಿ 21ರಿಂದ ಅದರ ಅಗತ್ಯವಿಲ್ಲ ಎಂದು ಆಡಳಿತ ಮಂಡಳಿ ಸಭೆ ನಿರ್ಧರಿಸಿದೆ. ಈ ಆದೇಶ ಫೆಬ್ರವರಿ 21ರ ವರೆಗೆ ಜಾರಿಯಲ್ಲಿರುತ್ತದೆ. ಆದರೆ ಕಡ್ಡಾಯ ಮಾಸ್ಕ್, ವೈಯಕ್ತಿಕ ಅಂತರ ಮೊದಲಾದ ಇತರ ಕರೊನಾ ಮುನ್ನೆಚ್ಚರಿಕೆ ಕ್ರಮಗಳು ಯಥಾವತ್ತಾಗಿ ಮುಂದುವರಿಯುತ್ತವೆ. ಒಂಬತ್ತು ತಿಂಗಳು ಮುಚ್ಚಿದ್ದ ದೇವಸ್ಥಾನವನ್ನು ಜನವರಿ 3ರಂದು ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ.

    ಶಾಲೆಗೆ ತಡವಾಗುತ್ತೆ ಎಂದು ಬಾಲಕನೊಬ್ಬ ಹೇಳಿದ್ದಕ್ಕೆ ಬದಲಾಗೇ ಬಿಡ್ತು ಬಸ್​ ಟೈಮಿಂಗ್!

    ವಾಟ್ಸ್​ಆ್ಯಪ್​ಗೆ ಬಾಯ್​ ಬಾಯ್​, ಟೆಲಿಗ್ರಾಮ್​ಗೆ ಹಾಯ್​ ಹಾಯ್​: ಯಾಕೆ, ಏನಾಯಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts