More

    ಭಾವ ಸತ್ತ ದಿನವೂ ಕರ್ತವ್ಯಕ್ಕೆ ಹಾಜರಾದ ಕರೊನಾ ವಾರಿಯರ್ !

    ನವದೆಹಲಿ : ಅನೇಕ ಜನರು ಕರೊನಾದಿಂದ ಬಚಾವಾಗಲು ಮನೆಯೊಳಗೇ ಇರುವ ಅನುಕೂಲ ಹೊಂದಿರುತ್ತಾರೆ. ಆದರೆ, ಕರೊನಾ ಸೇವೆಗೇ ಮುಡಿಪಾಗಿರುವ ಮುಂಚೂಣಿ ಕಾರ್ಯಕರ್ತರು ಈಗ ದೇಶದೆಲ್ಲೆಡೆ ಹೆಚ್ಚಿನ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಕರೊನಾದಿಂದಾಗಿ ತಮ್ಮ ಆಪ್ತ ಸಂಬಂಧಿಕರೊಬ್ಬರು ತೀರಿಕೊಂಡ ದಿನವೂ ಡ್ಯೂಟಿಗೆ ಹಾಜರಾದ ಕರೊನಾ ವಾರಿಯರ್ ಲಕ್ಷಯ್ ಪಾಂಡೆ ಒಬ್ಬರು.

    ದಕ್ಷಿಣ ದೆಹಲಿಯ ಛತರ್​ಪುರದಲ್ಲಿ ರಾಧಾ ಸೊಮಿ ಸತ್ಸಂಗ್ ಬೆಯಸ್ ಕೋವಿಡ್ ಕೇರ್​ ಸೌಲಭ್ಯವನ್ನು ಸ್ಥಾಪಿಸುವ ಜವಾಬ್ದಾರಿ ಹೊತ್ತಿರುವ ಅಧಿಕಾರಿ ಎಸಿಪಿ ಲಕ್ಷಯ್ ಪಾಂಡೆ. ಕಳೆದ ದಿನಗಳಲ್ಲಿ ಅವರ ಭಾವ ಕರೊನಾ ಗುಣಲಕ್ಷಣಗಳು ಕಾಣಿಸಿಕೊಂಡು ಉಸಿರಾಡಲು ಕಷ್ಟವಾಗಿ ಜಿಟಿಬಿ ಆಸ್ಪತ್ರೆಯ ಐಸಿಯು ಸೇರಿದ್ದರು. ನಿನ್ನೆ ಬೆಳಗಿನ ಜಾವ 2.30 ಕ್ಕೆ ಹೃದಯಾಘಾತವಾಗಿ ಸಾವಪ್ಪಿದರು. ಅವರ ಅಂತ್ಯಕ್ರಿಯೆ ಮಾಡಲು ಪಾಂಡೆ ಅವರು ಘಾಜಿಪುರದಲ್ಲಿ ಸರದಿಯಲ್ಲಿ ಕಾಯುತ್ತಿರುವಾಗ ಇಲಾಖೆಯಿಂದ ಕರೆಬಂತು. ಆ ದುಃಖದ ಕ್ಷಣಗಳಲ್ಲೂ ಕರ್ತವ್ಯದ ಕರೆಗೆ ಓಗೊಟ್ಟು ಮಧ್ಯಾಹ್ನದ ಹೊತ್ತಿಗೆ ಕರೊನಾ ಆರೈಕೆ ಕೇಂದ್ರದ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಲು ಆರಂಭಿಸಿದರು ಪಾಂಡೆ.

    ಇದನ್ನೂ ಓದಿ: ಎಲ್ಲಾ ನಿವಾಸಿಗಳಿಗೆ ಉಚಿತ ಕರೊನಾ ಲಸಿಕೆ : ಮಹಾರಾಷ್ಟ್ರ ಸಚಿವ

    “ನಾವು ನಮ್ಮ ಸರತಿಗೆ ಕಾಯುತ್ತಿದ್ದೆವು. ಆದರೆ ನನಗೆ ರಾಧಾ ಸೋಮಿ ಕೋವಿಡ್ ಕೇರ್​ ಸೌಲಭ್ಯದ ಸಿದ್ಧತೆಗಳ ಬಗ್ಗೆ ಮತ್ತು ನಮ್ಮ ಪ್ರದೇಶದ ಕರ್ಫ್ಯೂ ಪಾಲನೆ ಬಗ್ಗೆ ಕಛೇರಿಯಿಂದ ಕರೆಗಳು ಬರುತ್ತಿದ್ದವು. ಆದ್ದರಿಂದ ನಾನು ನನ್ನ ಕುಟುಂಬವನ್ನು ಬಿಟ್ಟು, ಕಛೇರಿಗೆ ಧಾವಿಸಿದೆ. ಅದು ನನಗೆ ಮತ್ತು ನನ್ನ ಕುಟುಂಬಕ್ಕೆ ಸಂಕಷ್ಟದ ಸಮಯ. ಆದರೆ ನಾನು ನನ್ನ ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ” ಎಂದು ಪಾಟ್ರೋಲಿಂಗ್ ಮಾಡುತ್ತಲೇ ಸುದ್ದಿಗಾರರಿಗೆ ಲಕ್ಷಯ್ ಪಾಂಡೆ ಹೇಳಿದ್ದಾರೆ.

    ಪಾಂಡೆ ಅವರು 2018 ಬ್ಯಾಚ್​ನ ಡಿಎಎನ್​ಐಪಿಎಸ್​ ಅಧಿಕಾರಿಯಾಗಿದ್ದು, ಮೆಹ್ರೌಲಿ ಉಪವಿಭಾಗದ ಎಸಿಪಿಯಾಗಿ ಟ್ರೈನಿಂಗ್​​ನಲ್ಲಿದ್ದಾರೆ. ಇವರಂತೆ ಸಾವಿರಾರು ಪೊಲೀಸ್ ಸಿಬ್ಬಂದಿಯು, ಕರೊನಾದಿಂದ ತತ್ತರಿಸುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತು ದೇಶಾದ್ಯಂತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)

    ಕರೊನಾದಿಂದ ಬೇಗ ಗುಣಮುಖವಾಗಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟ

    ಎಲ್ಲರನ್ನೂ ಆಕ್ಸಿಜನ್ ಕೇಳುತ್ತಿರುವ ದೆಹಲಿ ಸರ್ಕಾರ ಮಂಜೂರಾದ ಪ್ಲ್ಯಾಂಟ್​ಗಳನ್ನು ಇನ್ನೂ ಸ್ಥಾಪಿಸಿಲ್ಲ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts