More

    ಸೆಪ್ಟೆಂಬರ್​ ವೇಳೆಗೆ ಸಜ್ಜಾಗುತ್ತೆ ಕರೊನಾಗೆ ಲಸಿಕೆ: ಆಕ್ಸ್​ಫರ್ಡ್​ ವಿವಿ ಸಂಶೋಧನಾ ತಂಡದ ವಿಶ್ವಾಸ

    ಲಂಡನ್​: ವಿಶ್ವಾದ್ಯಂತ ಕರೊನಾ ಕಬಂಧ ಬಾಹು ಬಿಗಿಯಾಗುತ್ತಿದೆ. ಸಾವಿನ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಜಗತ್ತಿನಲ್ಲಿ ಮೃತರ ಸಂಖ್ಯೆ ಒಂದು ಲಕ್ಷವನ್ನು ಮೀರಿದೆ.

    ಇದರ ನಡುವೆಯೇ ಹಲವು ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿವೆ. ಅಮೆರಿಕದಲ್ಲಿ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ಆರಂಭವಾಗಿದೆ ಎಂದು ಕೆಲ ದಿನಗಳ ಹಿಂದಷ್ಟೇ ಸುದ್ದಿಯಾಗಿತ್ತು. ಇದೀಗ ಅಂಥದ್ದೇ ಸುದ್ದಿ ಬ್ರಿಟನ್​ನಿಂದಲೂ ವರದಿಯಾಗಿದೆ.
    ಲಸಿಕೆ ತಯಾರಿಕೆಯಲ್ಲಿ ತೊಡಗಿರುವ ಸಂಶೋಧನಾ ತಂಡವನ್ನು ಮುನ್ನಡೆಸುತ್ತಿರುವ ಆಕ್ಸ್​ಫರ್ಡ್​ ವಿವಿ ಪ್ರಾಧ್ಯಾಪಕಿ ಸಾರಾ ಗಿಲ್ಬರ್ಟ್​ ಸೆಪ್ಟೆಂಬರ್​ ವೇಳೆಗೆ ಕರೊನಾ ಲಸಿಕೆ ಸಜ್ಜಾಗಲಿದೆ ಎಂದು ತಿಳಿಸಿದ್ದಾರೆ. ಈ ಮೊದಲು 2020ರ ವರ್ಷಾಂತ್ಯಕ್ಕೆ ಲಸಿಕೆ ಸಿದ್ಧವಾಗುವ ವಿಶ್ವಾಸವಿತ್ತು. ಆದರೆ ಲಸಿಕೆ ತಯಾರಿಸುವ ಎಲ್ಲ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತಿವೆ. ಹೀಗಾಗಿ ಸೆಪ್ಟಂಬರ್​ ಹೊತ್ತಿಗಾಗಲೇ ಅದು ಸಿದ್ಧವಾಗುವ ಭರವಸೆ ನೀಡಿದ್ದಾರೆ.

    ಕೆಲ ದಿನಗಳಲ್ಲಿ ಲಸಿಕೆ ಕ್ಲಿನಿಕಲ್​ ಟ್ರಯಲ್​ ಆರಂಭವಾಗಲಿದೆ. ಬ್ರಿಟನ್​ ಸರ್ಕಾರ ಲಸಿಕೆ ತಯಾರಿಕೆಗೆ ಕೋಟ್ಯಂತರ ರೂ. ಬಂಡವಾಳ ಒದಗಿಸುವುದಾಗಿ ಈಗಾಗಲೇ ಹೇಳಿದೆ. ಆದ್ದರಿಂದ ಲಸಿಕೆ ಉತ್ಪಾದನೆ ಅಂದುಕೊಂಡದ್ದಕಿಂತ ಮೊದಲೇ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಈ ಲಸಿಕೆ ತಯಾರಿಸಲು ಹೊಸದಾಗಿ ಕಾರ್ಖಾನೆ ಅಥವಾ ವ್ಯವಸ್ಥೆ ಸಿದ್ಧಪಡಿಸಿಕೊಳ್ಳಬೇಕಿಲ್ಲ. ಈಗಾಗಲೇ ಲಭ್ಯವಿರುವ ವ್ಯವಸ್ಥೆಗಳನ್ನೇ ಇದಕ್ಕೆ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ದಿನ ಕಳೆದಂತೆಲ್ಲ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿದೆ. ಈ ಹಿಂದೆ ಇದೇ ಪ್ರಕಾರದ ಲಸಿಕೆ ತಯಾರಿಸಿದ ಅನುಭವದ ಆಧಾರದಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಲಸಿಕೆಯ ಫಲಿತಾಂಶವನ್ನು ತ್ವರಿತವಾಗಿ ತಿಳಿದುಕೊಳ್ಳಲು ಹೆಚ್ಚು ವ್ಯಾಪಿಸಿರುವ ದೇಶಗಳಲ್ಲಿ ಇದನ್ನು ಮೊದಲು ಪ್ರಯೋಗಿಸಲಾಗುತ್ತದೆ ಎಂದು ಸಂಶೋಧನಾ ತಂಡ ತಿಳಿಸಿದೆ.

    ಕರೊನಾ ವೈರಸ್​ ಎಂಟು ವಿಧದಲ್ಲಿ ಜಗತ್ತನ್ನು ಆವರಿಸಿದೆ. ಚೀನಾದಲ್ಲಿ ಹಾಗೂ ಯುರೋಪ್​ ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ವೈರಸ್​ಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ ಅಥವಾ ರೂಪಾಂತರಗೊಂಡಿಲ್ಲ. ಈ ಲಸಿಕೆಯು ಮೂಲ ವೈರಸ್​ ಹಾಗೂ ರೂಪಾಂತರಗೊಂಡ ವೈರಸ್​ ಎರಡಕ್ಕೂ ಚಿಕಿತ್ಸೆ ನೀಡಲಿದೆ ಎಂದು ಸಾರಾ ಹೇಳಿದ್ದಾರೆ. ಅಧ್ಯಯನದಲ್ಲಿ ಕಂಡುಬಂದ ಇನ್ನೊಂದು ಸಂಗತಿ ಎಂದರೆ, ಕರೊನಾ ಉಳಿದ ವೈರಸ್​ಗೆ ಹೋಲಿಸಿದಲ್ಲಿ ಹೆಚ್ಚು ಮಾರಕವಲ್ಲ. ಇನ್ನುಳಿದ ವೈರಸ್​ಗಳಷ್ಟು ಸಾಂಕ್ರಾಮಿಕವಲ್ಲ ಎನ್ನುತ್ತಾರೆ ಸಂಶೋಧಕರು.
    ವಿಶ್ವಾದ್ಯಂತ ಹಲವು ಸಂಸ್ಥೆಗಳು ಕರೊನಾ ನಿವಾರಣೆಗೆ ಲಸಿಕೆ ತಯಾರಿಕೆಯಲ್ಲಿ ತೊಡಗಿವೆ. ಹಲವು ಭಾರತೀಯರು ಕೂಡ ಈ ಸಂಶೋಧನಾ ತಂಡಗಳ ಭಾಗವಾಗಿದ್ದಾರೆ. (ಏಜೆನ್ಸೀಸ್)

    ಕ್ವಾರಂಟೈನ್ ನಿಯಮ ಪಾಲಿಸದವರಿಗೆ ಮಧ್ಯಪ್ರದೇಶ ಪೊಲೀಸರೊಂದು ಪಾಠ ಕಲಿಸಿದ್ರು: ಅದು ದೇಶಕ್ಕೇ ಮಾದರಿಯಾಗದಿದ್ದರೆ ಸಾಕು- ಅನ್ನಬಹುದೇನೋ ನಿಯಮ ಉಲ್ಲಂಘಕರು!

    ಮೊಬೈಲ್ ಸ್ಯಾನಿಟೈಸರ್ ಬಸ್ – ಇದು “ಸಾರಿಗೆ ಸಂಜೀವಿನಿ” !

    ಸಹಕಾರ ಸಚಿವರೇ, ಜನಪ್ರತಿನಿಧಿಗಳೇ… ಸೋಷಿಯಲ್ ಡಿಸ್ಟೆನ್ಸಿಂಗ್ ಪಾಲನೆ ಬಗ್ಗೆ ಇಷ್ಟೇಕೆ ನಿರ್ಲಕ್ಷ್ಯ ಹೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts