More

    ತಮಿಳುನಾಡಿನಲ್ಲಿ ಮತ್ತೊಬ್ಬರಿಗೆ ಕೊರೊನಾ ವೈರಸ್​ ಸೋಂಕು: 2ಕ್ಕೆ ಏರಿದ ಸೋಂಕು ಪೀಡಿತರ ಸಂಖ್ಯೆ

    ಚೆನ್ನೈ: ಕೊರೊನಾ ವೈರಸ್​ ರಾಷ್ಟ್ರದಲ್ಲಿ ತೀವ್ರವಾಗಿ ಹರಡುತ್ತಿದ್ದು, ತಮಿಳುನಾಡು ರಾಜ್ಯದಲ್ಲಿ ಮತ್ತೊಬ್ಬರಿಗೆ ವೈರಸ್​ ಸೋಂಕು ಹರಡಿರುವುದು ದೃಢಪಟ್ಟಿದೆ.

    ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ಹರಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡಿನಲ್ಲಿ ಇಬ್ಬರಿಗೆ ಸೋಂಕು ಹರಡಿದೆ.

    ತಮಿಳುನಾಡಿನಲ್ಲಿ ಸೋಂಕು ಹರಡಿದ್ದ ಮೊದಲ ವ್ಯಕ್ತಿ ಒಮನ್​ಗೆ ಭೇಟಿ ನೀಡಿದ್ದರು ಎಂದು ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್​ ಹೇಳಿದ್ದಾರೆ.

    ಫೆಬ್ರವರಿ 28 ರಂದು ಚೈನ್ನೈ ವಿಮಾನ ನಿಲ್ದಾಣಕ್ಕೆ ಓಮನ್​ನಿಂದ ಆಗಮಿಸಿದ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಸೋಂಕು ಇರುವುದು ಪತ್ತೆಯಾಯಿತು. ಕೂಡಲೇ ಇವರನ್ನು ಚೆನ್ನೈನ ರಾಜೀವ್​ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಿಗಾ ವಹಿಸಲಾಗಿದೆ.
    ಕೊರೋನವೈರಸ್ ಪತ್ತೆಯಾದ ಮೊದಲ ವ್ಯಕ್ತಿ ಇಲ್ಲಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು, ಅಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಲಾಯಿತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಪಿಟಿಐ ಉಲ್ಲೇಖಿಸಿ ವಿಜಯಬಾಸ್ಕರ್ ಹೇಳಿದ್ದಾರೆ.

    ರಾಷ್ಟ್ರದಲ್ಲಿ ವೈರಸ್​ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಸೋಂಕು ಪತ್ತೆಯಾಗಿರುವ 14 ಮಂದಿ ಇಟಲಿ ಪ್ರವಾಸಿಗರು ದೆಹಲಿಯ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ದಾಖಲಾಗಿದ್ದಾರೆ. (ಏಜೆನ್ಸೀಸ್​)

    ಇಟಲಿಯಿಂದ ಕೇರಳಕ್ಕೆ ಬಂದು ಸಂಬಂಧಿಕರನ್ನು ಭೇಟಿಯಾದ ದಂಪತಿ; ಈಗ ಎಲ್ಲರೂ ಕೊರೊನಾ ವೈರಸ್​ ಪೀಡಿತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts