More

    ಕೊರೊನಾ ವೈರಸ್​ ಹರಡಿದರೆ ಏನು ಮಾಡಬೇಕು? ಏನು ಮಾಡಬಾರದು? : ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪಾಠ

    ವಾರಣಾಸಿ: ಕೊರೊನಾ ವೈರಸ್​ ಎಂದರೆ ಜನರು ಬೆಚ್ಚಿಬೀಳುವ ಸಂದರ್ಭದಲ್ಲಿ ವಾರಾಣಸಿಯ ಖಾಸಗಿ ಶಾಲೆಯೊಂದು ಮಕ್ಕಳಿಗೆ ವೈರಸ್​ ಹೇಗೆ ಹರಡುತ್ತದೆ. ನಿಯಂತ್ರಣ ಮಾಡುವುದು ಹೇಗೆ ಎಂಬುದು ಸೇರಿದಂತೆ ಹಲವು ಉಪಯುಕ್ತ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ.

    ಶಾಲೆಯ ಶಿಕ್ಷಕರು ಮಕ್ಕಳಿಗೆ ಪ್ರತಿ ದಿನ ವೈರಸ್​ ಬಗ್ಗೆ ತರಗತಿಯಲ್ಲಿ ಮಾಹಿತಿ ನೀಡುತ್ತಿದ್ದಾರೆ. ಶನಿವಾರದಿಂದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ. ಕೊರೊನಾ ವೈರಸ್​ ಅಂದರೆ ಏನು? ಅದು ಹೇಗೆ ಹರಡುತ್ತದೆ. ಹರಡುವುದನ್ನು ತಪ್ಪಿಸುವುದು ಹೇಗೆ, ವೈರಸ್​ ಪತ್ತೆಯಾದರೆ ಯಾವ ರೀತಿ ಕ್ರಮ ಅನುಸರಿಸಬೇಕು. ರೋಗದ ಲಕ್ಷಣಗಳು ಏನು ಎಂಬುದರ ಬಗ್ಗೆ ಪಟ್ಟಿ ತಯಾರಿಸಿ ಮಾಹಿತಿ ನೀಡಲಾಗುತ್ತಿದೆ ಎಂದು ಶಿಕ್ಷಕಿ ಜಯಶ್ರೀ ಗುಪ್ತಾ ಹೇಳಿದರು.

    ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ಮಾಹಿತಿಯನ್ನು ನೀಡಲಾಗುತ್ತಿದೆ. ಹೀಗಾಗಿ ಅವರು ವೈರಸ್​ ಬಗ್ಗೆ ಮುಂಜಾಗ್ರತೆ ವಹಿಸುತ್ತಿದ್ದಾರೆ ಎಂದರು.
    ಪರಸ್ವರ ಒಬ್ಬರೊಬ್ಬರನ್ನು ಆಲಂಗಿಸಬಾರದು. ಕೈಕುಲುಕಬಾರದು, ನೀರಿನ ಬಾಟಲಿ, ಆಹಾರ, ಕರವಸ್ತ್ರ, ಟವೆಲ್​ಗಳನ್ನು ಹಂಚಿಕೊಳ್ಳಬಾರದು. ಸೋಪಿನಿಂದ ಕೈತೊಳೆದುಕೊಳ್ಳುತ್ತಿರಬೇಕು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.

    ವಾರಾಣಸಿಗೆ ಪ್ರವಾಸಿಗರು ಅಧಿಕವಾಗಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶಿಕ್ಷಕಿ ಜಯಶ್ರೀ ಗುಪ್ತಾ ಹೇಳಿದರು. (ಏಜೆನ್ಸೀಸ್​)

    ತಮಿಳುನಾಡಿನಲ್ಲಿ ಮತ್ತೊಬ್ಬರಿಗೆ ಕೊರೊನಾ ವೈರಸ್​ ಸೋಂಕು: 2ಕ್ಕೆ ಏರಿದ ಸೋಂಕು ಪೀಡಿತರ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts