More

    ಅಧಿಕ ದರಕ್ಕೆ ಮಾಸ್ಕ್​ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ದಾಳಿ: 3 ಸಾವಿರಕ್ಕೂ ಅಧಿಕ ಮಾಸ್ಕ್​ ವಶ

    ವಿಜಯಪುರ: ಅಧಿಕ ದರಕ್ಕೆ ಮಾಸ್ಕ್​ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ತಹಸೀಲ್ದಾರ್​ ನೇತೃತ್ವದ ತಂಡ ಸೋಮವಾರ ದಾಳಿ ನಡೆಸಿದೆ.

    ಮೀನಾಕ್ಷಿ ಚೌಕ್‌ನಲ್ಲಿರುವ ವೈದ್ಯಕೀಯ ಉಪಕರಣಗಳ ಸರಬರಾಜು ಪರಾವನಗಿ ಪಡೆದಿರುವ ಪಿಎಂ ಏಜೆನ್ಸಿ ಮಳಿಗೆ ಮೇಲೆ ತಹಸೀಲ್ದಾರ್​ ಮೋಹನ ಕುಮಾರಿ ನೇತೃತ್ವದ ತಂಡ ದಾಳಿ ನಡೆಸಿ 3 ಸಾವಿರಕ್ಕೂ ಅಧಿಕ ಮಾಸ್ಕ್​ಗಳನ್ನು ವಶಪಡಿಸಿಕೊಂಡಿದೆ.

    ಕರೊನಾ ಭೀತಿ ಆವರಿಸಿರುವುದನ್ನು ಬಂಡವಾಳ ಮಾಡಿಕೊಂಡ ಪಿಎಂ ಏಜೆನ್ಸಿ ನಿಗದಿಪಡಿಸಿರುವ ದರಕ್ಕಿಂತ ಅಧಿಕ ಬೆಲೆಗೆ ಮಾಸ್ಕ್​ಗಳನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ತಂಡ ದಾಳಿ ನಡೆಸಿದೆ.

    ಅಂಗಡಿ ಬಳಿ ತೆರಳಿದ ಅಧಿಕಾರಿಗಳ ತಂಡಕ್ಕೆ ತಮ್ಮ ಬಳಿ ಮಾಸ್ಕ್​ಗಳು ಇಲ್ಲ ಎಂದು ಮಾಲೀಕ ಉತ್ತರ ನೀಡಿದ. ಅನುಮಾನ ಬಂದ ಅಧಿಕಾರಿಗಳು ಮಳಿಗೆ ಶೋಧಿಸಿದಾಗ ಮಾಸ್ಕ್​ಗಳ ಬಾಕ್ಸ್​ಗಳು ಪತ್ತೆಯಾದವು. ಅಂಗಡಿ ಮಾಲೀಕ ಪ್ರಥಮೇಶ ಮಿರ್ಜಿ ವಿರುದ್ಧ ಕೇಸು ದಾಖಲಿಸಿದ್ದಾರೆ.

    ದಾಳಿ ನಡೆಸಿದ ತಂಡದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ, ಕಾನೂನು ಮಾಪನ ನಿರೀಕ್ಷಕ ಎಣ.ಎಸ್​.ಪಾಟೀಲ, ಆಹಾರ ನಿರೀಕ್ಷಕಿ ಪ್ರಭಾವತಿ ಭಾವಿಕಟ್ಟಿ ಹಾಗೂ ಇತರ ಅಧಿಕಾರಿಗಳು ಇದ್ದರು.

    ಕರೊನಾ ವೈರಸ್​ ಹರಡದಂತೆ ತಡೆಯಲು ನಾಳೆಯಿಂದ ದೇಶಿಯ ಎಲ್ಲ ವಿಮಾನಗಳ ಹಾರಾಟ ತಾತ್ಕಾಲಿಕ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts