More

    ಗುಜರಾತ್​ಗೆ ಹೋಗಿ ಬಂದ 14 ತಬ್ಲಿಘಿ ಸೇರಿ 15 ಜನರಲ್ಲಿ ಸೋಂಕು, ಬೆಚ್ಚಿಬಿದ್ದ ಮುಧೋಳ

    ಬಾಗಲಕೋಟೆ: ಡಿಸಿಎಂ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಕರೊನಾ ಅಟ್ಟಹಾಸ ಮೆರಯುತ್ತಿದೆ. ಧಾರ್ಮಿಕ ಕಾರ್ಯಕ್ರಮಕ್ಕೆಂದು ಗುಜರಾತ್​ಗೆ ಹೋಗಿ ಬಂದಿದ್ದ ಮುಧೋಳದ 17 ತಬ್ಲಿಘಿಗಳ ಪೈಕಿ 14 ಮಂದಿಗೆ ಸೋಂಕು ಧೃಡಪಟ್ಟಿದ್ದು, ಇಡೀ ಜಿಲ್ಲೆ ಬೆಚ್ಚಿಬಿದ್ದಿದೆ. ಮುಧೋಳ ನಗರದಲ್ಲಿ ಮಂಗಳವಾರ ಒಂದೇ ದಿನ 15 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 68 ಕ್ಕೇರಿದೆ.

    ಇದನ್ನೂ ಓದಿ ಕರೊನಾ ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆಯ ಸಾವು; ಊರಲ್ಲಿ ಆತಂಕ

    ಮಂಗಳವಾರ ಪತ್ತೆಯಾದ 15 ಸೋಂಕಿತರ ಪೈಕಿ 14 ಮಂದಿಗೆ ಗುಜರಾತ್​ ನಂಟಿದೆ. ಮತ್ತೊಬ್ಬ ಸೋಂಕಿತನ  (Influenza Like Illness) ಹೊರ ಸಂಪರ್ಕ ತಿಳಿದುಬಂದಿಲ್ಲ. ಮಾ. 3ರಂದು ಮುಧೋಳದಿಂದ ತೆರಳಿದ್ದ ತಂಡ ಅಹಮದಾಬಾದ್​ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದಲ್ಲಿ ಭಾಗವಹಿಸಿತ್ತು. ಅಲ್ಲಿಂದ ಮೇ 8ರಂದು ಮುಧೋಳ‌ ನಗರಕ್ಕೆ 17 ಜನರ ತಂಡ ವಾಪಸ್ ಬಂದಿತ್ತು. ಅವರೆಲ್ಲರನ್ನೂ ಇಲ್ಲಿ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಮೇ 10ರಂದು 17 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಈ ಪೈಕಿ 14 ಜನರ ವರದಿ ಕರೊನಾ ಪಾಸಿಟಿವ್, ಮೂವರ ವರದಿ ನೆಗೆಟಿವ್ ಬಂದಿದೆ. ಪಾಸಿಟಿವ್ ಬಂದವರ ವರದಿ ಮೊದಲು ನೆಗೆಟಿವ್ ಬಂದಿತ್ತಂತೆ!

    ಇದನ್ನೂ ಓದಿ ಎಟಿಎಂ ಒಳಗೆ ಹಾವಿದೆ… ಜೋಕೆ!

    ಈ 17 ಜನರ ತಂಡವನ್ನೂ ಅಹಮದಾಬಾದ್​ನಲ್ಲೇ ಕ್ವಾರಂಟೈನ್ ಮಾಡಿ ಸ್ವಾಬ್ ಟೆಸ್ಟ್ ಮಾಡಲಾಗಿತ್ತಂತೆ. ನಮ್ಮ ವರದಿ ನೆಗೆಟಿವ್ ಬಂದಿತ್ತು ಎಂದು ಅವರು ಹೇಳಿದ್ದರು. ಈಗ ಮತ್ತೊಮ್ಮೆ ಇಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದ್ದು, ಗುಜರಾತ್​ ನಂಟಿನ ಕಂಟಕ ಬಾಗಲಕೋಟೆ ಜಿಲ್ಲೆಯನ್ನು ತೀವ್ರವಾಗಿ ಕಾಡುತ್ತಿದೆ.

    ಈ ಮೊದಲು ಮುಧೋಳ ತಾಲೂಕಿನಲ್ಲಿ ಒಟ್ಟು ಒಂಭತ್ತು ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇಂದು ಮತ್ತೆ 15 ಜನರಲ್ಲಿ ಪತ್ತೆಯಾಗಿದ್ದು, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 24ಕ್ಕೇರಿದೆ.

    ಇದನ್ನೂ ಓದಿ 900ರ ಗಡಿ ದಾಟಿತು COVID19 ಪ್ರಕರಣಗಳ ಸಂಖ್ಯೆ- ಹೊಸದಾಗಿ 42 ಕೋವಿಡ್​ ಪ್ರಕರಣ ದೃಢ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts