More

    ಕೊರೊನಾ ವೈರಸ್​ ದಾಳಿಯಿಂದ ರಾಷ್ಟ್ರದ ಆರ್ಥಿಕತೆ ಮೇಲೆ ಅಲ್ಪ ಪರಿಣಾಮ: ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ್​

    ನವದೆಹಲಿ: ಕೊರೊನಾ ವೈರಸ್​ ಸೋಂಕು ಭಾರತದ ಆರ್ಥಿಕತೆ ಮೇಲೆ ಸೀಮಿತ ಪರಿಣಾಮ ಮಾತ್ರ ಬೀರಿದೆ ಎಂದು ರಿಸರ್ವ್​ಬ್ಯಾಂಕ್​ ಗವರ್ನರ್​ ಶಕ್ತಿಕಾಂತ ದಾಸ್​ ಹೇಳಿದ್ದಾರೆ.

    ವೈರಸ್​ ಭಾರತದ ಮೇಲೆ ಅಲ್ಪ ಪರಿಣಾಮ ಬೀರಿದರೂ, ಜಾಗತಿಕ ಮಟ್ಟದಲ್ಲಿ ಅದರ ಪರಿಣಾಮ ತೀವ್ರವಾಗಿದೆ. ಭಾರತದ ಔಷಧಿ ಹಾಗೂ ಎಲೆಕ್ಟ್ರಾನಿಕ್​ ಉದ್ಯಮ ಕ್ಷೇತ್ರಗಳು ಚೀನಾದಿಂದ ಬರುವ ಕಚ್ಚಾ ವಸ್ತುಗಳನ್ನು ಅವಲಂಬಿಸಿವೆ. ಹೀಗಾಗಿ ಈ ಕ್ಷೇತ್ರದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು.

    ರಾಷ್ಟ್ರದ ಬೃಹತ್​ ಔಷಧಿ ಕಂಪನಿಗಳ ಬಳಿ ಇನ್ನು 3ರಿಂದ 4 ತಿಂಗಳಿಗೆ ಆಗುವಷ್ಟ ಕಚ್ಚಾ ಸಾಮಗ್ರಿ ಇವೆ. ಹೀಗಾಗಿ ಸಮಸ್ಯೆ ಎದುರಾಗುವುದಿಲ್ಲ. ಚೀನಾದಿಂದ ಆಮದು ಮಾಡಿಕೊಳ್ಳುವ ಔಷಧಿ ಕಚ್ಚಾ ಸಾಮಗ್ರಿಗಳಿಗೆ ವೈರಸ್​ ಸೋಂಕು ಹರಡಿರುವ ಅಪಾಯ ಇದೆ. ವಿಶ್ವದ ವ್ಯಾಪಾರದಲ್ಲಿ ಚೀನಾದ ಪಾಲು ಅಧಿಕ. ಹೀಗಾಗಿ ಕೊರೊನಾ ವೈರಸ್​ ಸೋಂಕು ವಿಶ್ವದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಬಹುದು. ರಾಷ್ಟ್ರದಲ್ಲಿ ದೀರ್ಘಾವಧಿಯಲ್ಲಿ ಪರಿಣಾಮ ವ್ಯಕ್ತವಾಗಬಹುದು ಎಂದು ಅವರು ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts