More

    397 ಮಂದಿ ಡಿಸ್ಚಾರ್ಜ್

    ಮಂಗಳೂರು/ಉಡುಪಿ: ದ.ಕ.ಜಿಲ್ಲೆಯಲ್ಲಿ ಸೋಮವಾರ 6 ಸಾವು ಸಹಿತ 201 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿ ವೆ. ಇದರಲ್ಲಿ 128 ಲಕ್ಷಣ ರಹಿತ ಹಾಗೂ 73 ರೋಗ ಲಕ್ಷಣಗಳಿರುವ ಪ್ರಕರಣಗಳು. 144 ಪ್ರಕರಣಗಳೂ ಮಂಗಳೂರಿನಿಂದ ಬಂದರೆ 22 ಬಂಟ್ವಾಳ, ಸುಳ್ಯ ಹಾಗೂ ಪುತ್ತೂರು ತಲಾ 5, ಬೆಳ್ತಂಗಡಿ 7 ತಾಲೂಕುಗಳಿಂದ ವರದಿಯಾಗಿವೆ. 18 ಪ್ರಕರಣಗಳು ಇತರ ಜಿಲ್ಲೆಗೆ ಸೇರಿವೆ.

    ಒಟ್ಟು ಪ್ರಕರಣಗಳ ಸಂಖ್ಯೆ 10,531ಕ್ಕೆ ಏರಿಕೆಯಾಗಿದ್ದರೆ, ಸಕ್ರಿಯ ಪ್ರಕರಣಗಳು 2297. ಒಟ್ಟು ಸಾವಿನ ಸಂಖ್ಯೆ 316 ತಲುಪಿದೆ. ಸೋಮವಾರ ಹೋಮ್ ಐಸೊಲೇಶನ್‌ನಲ್ಲಿದ್ದ 180, ಆಸ್ಪತ್ರೆಗಳಲ್ಲಿದ್ದ 58 ಕೋವಿಡ್ ಕೇರ್ ಕೇಂದ್ರಗಳಲ್ಲಿದ್ದ ಮೂವರು ಗುಣ ಹೊಂದಿದ್ದಾರೆ. ಈ ಮೂಲಕ ಒಟ್ಟು ಕೋವಿಡ್‌ನಿಂದ ಮುಕ್ತರಾದವರ ಸಂಖ್ಯೆ 7,918 ತಲಪಿದೆ.

    103 ಮಂದಿಗೆ ಸೋಂಕು: ಉಡುಪಿ ಜಿಲ್ಲೆಯಲ್ಲಿ ಸೋಮವಾರ 103 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 10,229ಕ್ಕೆ ಏರಿಕೆಯಾಗಿದೆ. ಐವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 89ಕ್ಕೆ ಏರಿದೆ. 156 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ. ಈವರೆಗೆ 7,557 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ. ಸೋಮವಾರ 414 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 957 ಮಂದಿಯ ವರದಿ ಬರಲು ಬಾಕಿ ಇದೆ. 2590 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆರೋಗ್ಯ ಸುರಕ್ಷೆ ದೃಷ್ಟಿಯಿಂದ ಕಳೆದ ಆರು ದಿನಗಳಿಂದ ಹೋಂ ಕ್ವಾರಂಟೈನ್‌ನಲ್ಲಿದ್ದೇನೆ. ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕರೊನಾ ದಂಧೆಯಾಗುತ್ತಿದೆ ಎಂಬ ವಿಚಾರ ಹರಡುತ್ತಿದ್ದು, ಇದು ಸತ್ಯಕ್ಕೆ ದೂರವಾದುದು. ಆಧಾರವಿಲ್ಲದ ಆರೋಪ. ಭ್ರಷ್ಟಾಚಾರ ನಡೆದಿದ್ದರೆ ಸೂಕ್ತ ದಾಖಲೆಗಳನ್ನು ನೀಡಿ, ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಕಾಸರಗೋಡಿನಲ್ಲಿ 118 ಮಂದಿಗೆ ಕರೊನಾ
    ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 118 ಮಂದಿಯಲ್ಲಿ ಕರೊನಾ ಸೋಂಕು ಕಂಡುಬಂದಿದೆ. 103 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 3 ಮಂದಿ ವಿದೇಶದಿಂದ, 12 ಮಂದಿ ಇತರ ರಾಜ್ಯಗಳಿಂದ ಬಂದವರು. ಜಿಲ್ಲೆಯಲ್ಲಿ ಕೋವಿಡ್ ಸೋಂಕು ಖಚಿತಗೊಂಡವರಲ್ಲಿ 4 ಮಂದಿ ಆರೋಗ್ಯ ಕಾರ್ಯಕರ್ತರೂ ಇದ್ದಾರೆ. 4 ಮಂದಿ ಪೊಲೀಸ್ ಸಿಬ್ಬಂದಿ ಒಳಗೊಂಡಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದವರಲ್ಲಿ ಸೋಮವಾರ 91 ಮಂದಿ ಗುಣವಾಗಿದ್ದಾರೆ.

    ವೆನ್ಲಾಕ್ ಲ್ಯಾಬ್‌ಗೆ ಸಿಬ್ಬಂದಿ, ಡಿಸಿ ಭರವಸೆ
    ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೋಮವಾರ ವೆನ್ಲಾಕ್ ಆಸ್ಪತ್ರೆ ಕೋವಿಡ್ ವಿಭಾಗದ ವೈರಾಣು ಪ್ರಯೋಗ ಶಾಲೆಗೆ ಹಾಗೂ ಹೊರರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಹೆಚ್ಚುವರಿ ವೆಂಟಿಲೇಟರ್ ಅಳವಡಿಸಲು ಬೇಕಾಗುವ ಸಾಧನಗಳನ್ನು ಅಗತ್ಯ ನೆಲೆಯಲ್ಲಿ ಒದಗಿಸುವುದಾಗಿ ಅವರು ತಿಳಿಸಿದರು. ಶುಶ್ರೂಷಕ ಸಿಬ್ಬಂದಿ ಹಾಗೂ ವೈದ್ಯ ಸಿಬ್ಬಂದಿ ಕೊರತೆಗೆ ಆಯ್ಕೆ ಪ್ರಕ್ರಿಯೆ ನಡೆಸಿ, ಕರ್ತವ್ಯಕ್ಕೆ ಹಾಜರಾಗಲು ಆದೇಶಿಸುವಂತೆ ಸೂಚಿಸಿದರು. ಗಂಟಲು ದ್ರವ ಪರೀಕ್ಷೆಗೆ ವೈರಾಣು ಪ್ರಯೋಗ ಶಾಲೆಗೆ ಹೆಚ್ಚುವರಿ ಸಿಬ್ಬಂದಿ ಒದಗಿಸಿಕೊಡುವ ಭರವಸೆ ನೀಡಿದರು.

    ದಮ್ಮಾಮ್‌ನಿಂದ 175 ಮಂದಿ ಮಂಗಳೂರಿಗೆ
    ಕರೊನಾ ಕಾರಣದಿಂದ ಸೌದಿ ಅರೇಬಿಯಾದಲ್ಲಿ ಸಿಲುಕಿದ್ದ 175 ಮಂದಿಯನ್ನು ಚಾರ್ಟರ್ ವಿಮಾನದ ಮೂಲಕ ಮಂಗಳೂರಿಗೆ ಕರೆತರಲಾಯಿತು. ದಮ್ಮಾಮ್‌ನಲ್ಲಿ ಹಲವಾರು ಕನ್ನಡಿಗರು ಸಿಲುಕಿದ್ದು, ಅವರನ್ನು ತರಲು ಉದ್ಯಮಿ ತೌಸಿಫ್ ಅಹಮದ್ ಮತ್ತು ಅಮೀರ್ ಹುಸೈನ್ ಅವರ ನೆರವಿನಲ್ಲಿ ಈ ವಿಮಾನ ವ್ಯವಸ್ಥೆ ಮಾಡಲಾಯಿತು. ಕೆಲಸ ಕಳೆದುಕೊಂಡವರು, ರೋಗಿಗಳು, ಹಿರಿಯ ನಾಗರಿಕರು, ಮಕ್ಕಳಿಗೆ ಆದ್ಯತೆ ನೀಡಲಾಗಿತ್ತು. 12 ಶಿಶುಗಳು, 32 ಮಕ್ಕಳು, 38 ಗರ್ಭಿಣಿಯರು, ಇಬ್ಬರು ಕ್ಯಾನ್ಸರ್ ರೋಗಿಗಳು ಇದ್ದರು. ಸುರತ್ಕಲ್ ಕೃಷ್ಣಾಪುರ ಮೂಲದ ಯುವಕರು ಈ ವಿಮಾನ ವ್ಯವಸ್ಥೆಗೆ ನೆರವಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts