More

    ಉಡುಪಿ ಮತ್ತೆ 22 ಮಂದಿಗೆ ಸೋಂಕು, 50 ಜನರ ಮರುಪರೀಕ್ಷಾ ವರದಿ ನೆಗೆಟಿವ್

    ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 22 ಕರೊನಾ ಪಾಸಿಟಿವ್ ಪತ್ತೆಯಾಗಿದೆ. 14 ಪುರುಷರು, 8 ಮಹಿಳೆಯರು ಸೋಂಕಿತರು. ಇವರಲ್ಲಿ ಮೂವರು ಮಕ್ಕಳೂ ಸೇರಿದ್ದಾರೆ. 20 ಮಂದಿ ಕುಂದಾಪುರ ವ್ಯಾಪ್ತಿಯವರಾಗಿದ್ದು, ಇಬ್ಬರು ಉಡುಪಿಯವರು. ಶುಕ್ರವಾರ ಸೋಂಕು ಬಂದವರಲ್ಲಿ ಮಹಾರಾಷ್ಟ್ರದಿಂದ ಬಂದವರು 21, ಒಬ್ಬರು ಸ್ಥಳೀಯರು.

    ಶುಕ್ರವಾರದವರೆಗೆ ಒಟ್ಟು 658 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಶುಕ್ರವಾರ ಮತ್ತೆ 50 ಮಂದಿ ಸೋಂಕಿತರ ಮರುಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಜಿಲ್ಲೆಯಲ್ಲೀಗ ಒಟ್ಟು 708 ಮಂದಿ ಸೋಂಕು ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 990ಕ್ಕೆ ಏರಿಕೆಯಾಗಿದ್ದು, ಸಾವಿರ ದಾಟಲು ಸನೀಹದಲ್ಲಿದೆ.

    26 ಮಂದಿ ನೆಗೆಟಿವ್: ಶುಕ್ರವಾರ 26 ಮಂದಿಯ ವರದಿ ನೆಗೆಟಿವ್ ಬಂದಿದೆ. ಇಲ್‌ನೆಸ್ 24, ಹಾಸ್‌ಸ್ಪಾಟ್ ಪ್ರದೇಶದಿಂದ ಬಂದವರು 46, ಸೋಂಕಿತರ ಸಂಪರ್ಕ ಹೊಂದಿದವರು ಇಬ್ಬರು ಸೇರಿ ಒಟ್ಟು 72 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. 72 ಮಂದಿಯ ವರದಿ ಬರಲು ಬಾಕಿ ಇದೆ. ಐಸೊಲೇಶನ್ ವಾರ್ಡ್‌ನಿಂದ 12 ಮಂದಿ ಡಿಸ್ಚಾರ್ಜ್ ಆಗಿದ್ದು, 14 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸ್ಥಳೀಯವಾಗಿ ಹಬ್ಬುವ ಆತಂಕ: ವಾರದ ಹಿಂದೆ ಖಾಸಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಶೀಯನ್ ಒಬ್ಬರಿಗೆ ಸೋಂಕು ಪತ್ತೆಯಾಗಿತ್ತು. ಒಂದು ದಿನ ಬಳಿಕ ಅವರ ಮಗುವಿಗೆ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿರುವ ಹಿರಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಶುಕ್ರವಾರದ ವರದಿಯಲ್ಲಿ 75 ವರ್ಷದ ಹಿರಿಯರೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸ್ಥಳೀಯವಾಗಿ ಹಬ್ಬುತ್ತಿರುವ ಈ ಪ್ರಕರಣ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಇವರ ಸಂಪರ್ಕದಲ್ಲಿದ್ದ ಎಲ್ಲರನ್ನು ಹೋಂ ಕ್ವಾರಂಟೈನ್ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts