More

    ಕೋಲ್ಕತಾಕ್ಕೆ ಬಂತು ಬಾಯಲ್ಲಿ ನೀರೂರಿಸುವ ‘ಕರೊನಾ!’

    ಕೋಲ್ಕತಾ: ಕರೊನಾ ಎಂಬ ಹೆಸರು ಕೇಳಿದರೇನೇ ಇಡೀ ವಿಶ್ವವೂ ಬೆಚ್ಚಿ ಬೀಳುವ ಸ್ಥಿತಿಯಲ್ಲಿದೆ. ತಾವು ಹೇಳಿದಂತೆ ಕೆಲವು ದಿನಗಳವರೆಗೆ ಕೇಳಿದರೆ ವೈರಸ್‌ ನಿಮ್ಮ ಬಳಿ ಸುಳಿಯುವುದಿಲ್ಲ ಎಂದು ಸರ್ಕಾರಗಳು ಸಮಾಧಾನ ಪಡಿಸುತ್ತಲೇ ಇವೆ.

    ಈ ನಡುವೆಯೇ, ಕರೊನಾ ವೈರಸ್‌ನಿಂದ ಭೀತಿಗೆ ಒಳಗಾಗಬೇಡಿ ಎನ್ನುವ ಸಂದೇಶವನ್ನು ಡಿಫರೆಂಟ್‌ ರೀತಿಯಲ್ಲಿ ಸಾರುತ್ತಿದ್ದಾರೆ ಕೋಲ್ಕತಾದ ಸ್ವೀಟ್‌ ಅಂಗಡಿಯ ಓರ್ವ ಮಾಲೀಕ. ಬಗೆಬಗೆಯ ಸ್ವೀಟ್‌ಗಳನ್ನು ತಯಾರಿಸುವಲ್ಲಿ ಇವರು ಸಿದ್ಧಹಸ್ತರು. ಇದೀಗ ಕರೊನಾ ವೈರಸ್‌ ಹೋಲುವ ಬಗೆಬಗೆಯ ಸ್ವೀಟ್‌ಗಳನ್ನು ರೆಡಿ ಮಾಡಿರುವ ಅವರು ’ಕರೊನಾ ಸಂದೇಶ್‌’ ಎಂಬ ಹೆಸರು ನೀಡಿದ್ದಾರೆ.

    ‘ಕರೊನಾ ಸೋಂಕನ್ನು ಧೈರ್ಯದಿಂದ ಗೆಲ್ಲುವುದು ಇಂದಿನ ಅವಶ್ಯಕತೆ ಆಗಿದೆ. ಆದ್ದರಿಂದ ಸ್ವೀಟ್‌ ನೀಡುವ ಮೂಲಕ ಚಿಕ್ಕದೊಂದು ಸೇವೆ ಮಾಡುತ್ತಿದ್ದೇನೆ’ ಎಂದು ಹೇಳುತ್ತಿರುವ ಮಾಲೀಕ, ಅದನ್ನು ಗ್ರಾಹಕರಿಗೆ ಉಚಿತವಾಗಿ ನೀಡುತ್ತಿರುವುದು ವಿಶೇಷ. ಆದರೂ ಇದನ್ನು ತಿನ್ನಲು ತುಂಬಾ ಮಂದಿ ಭಯ ಪಡುತ್ತಿದ್ದಾರಂತೆ. ಕೆಲವರು ಮಾತ್ರ ತಿಂದು ಇನ್ನಷ್ಟು ಸವಿಯುತ್ತಿದ್ದಾರೆ.

    ಪ್ರೀತಿ ಭಟ್ಟಾಚಾರ್ಯ ಎಂಬುವರು ಈ ಸ್ವೀಟಿನ ಫೋಟೋ ತೆಗೆದು ಟ್ವೀಟ್‌ ಮಾಡಿದ್ದಾರೆ. ಟ್ವೀಟ್‌ನಲ್ಲಿ ಸ್ವೀಟ್‌ ಅನ್ನು ಕೊಂಡಾಡಿರುವ ಅವರು, ‘ನಾನು ಸ್ವೀಟ್‌ ಪ್ರಿಯೆ, ಈ ಸ್ವೀಟ್‌ ನೋಡಿದರೂ ಬಾಯಲ್ಲಿ ನೀರೂರತ್ತೆ. ಆದರೆ ಅದರ ಆಕಾರ ಹಾಗೂ ಹೆಸರು ಕೇಳಿದರೆ ಭಯ ಉಂಟಾಗಿ ಇದುವರೆಗೆ ತಿಂದಿಲ್ಲ’ ಎಂದಿದ್ದಾರೆ.

    ಕರೊನಾ ವೈರಸ್‌ನಿಂದಾಗಿ ಲಾಕ್‌ ಡೌನ್‌ ಅವಧಿಯಲ್ಲಿ ಜನಿಸಿದ ಮಕ್ಕಳಿಗೆ ಕರೊನಾ, ಕೋವಿಡ್‌ ಎಂಬ ಹೆಸರು ಇಟ್ಟಾಗಿದೆ. ಹೆಸರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜೋಕ್‌ಗಳೂ ಬರುತ್ತಿವೆ. ಕೆಲವರು ಬೆಕ್ಕು, ನಾಯಿಗಳಿಗೂ ಕರೊನಾ ಎಂದು ಹೆಸರು ಇಟ್ಟಿದ್ದಾರೆ. ಇವೆಲ್ಲವು ಸುದ್ದಿಯಾಗುತ್ತಿರುವ ನಡುವೆಯೇ ಈಗ ಕೋಲ್ಕತಾದ ಕರೊನಾ ಸ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

    ಇಲ್ಲಿಯವರೆಗೆ ಪಶ್ಚಿಮ ಬಂಗಾಳದಲ್ಲಿ 91 ಮಂದಿ ಸೋಂಕು ಪೀಡಿತರಾಗಿದ್ದಾರೆ. ಮೂರು ಮಂದಿ ಮೃತಪಟ್ಟಿದ್ದಾರೆ. (ಏಜನ್ಸೀಸ್‌)

    VIDEO|ದಟ್ಟ ಅರಣ್ಯದ ಮಧ್ಯೆ ಹಾದು ಹೋಗಿರುವ ರಸ್ತೆಯನ್ನು ಆನೆಗಳ ಹಿಂಡು ಹೇಗೆ ದಾಟುತ್ತದೆ ವಿಡಿಯೋ ನೋಡಿ

    ಮಂಗಳವಾರದ ವಹಿವಾಟಿನಲ್ಲಿ 2,476 ಅಂಶ ಏರಿಕೆ ಕಂಡ ಸೆನ್ಸೆಕ್ಸ್​, 2009ರ ನಂತರದಲ್ಲಿ ಒಂದೇ ಇಷ್ಟೊಂದು ಏರಿಕೆಯಾಗಿದ್ದು ಇದೇ ಮೊದಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts