More

    ಬಳಸಿದ ಮಾಸ್ಕ್ ವಿಲೇವಾರಿ ಜೋಕೆ

    ಬಳಸಿದ ಮಾಸ್ಕ್ ವಿಲೇವಾರಿ ಜೋಕೆ

    ಕಡೂರು: ಕರೊನಾ ತಡೆಗೆ ಮಾಸ್ಕ್ ಧರಿಸಿದವರು ಎಲ್ಲೆಂದೆರಲ್ಲಿ ಎಸೆಯುತ್ತಿದ್ದು, ಇದು ಮತ್ತೊಂದು ಸಮಸ್ಯೆ ಹುಟ್ಟುಹಾಕುವ ಸಾಧ್ಯತೆ ಇದೆ. ಹೀಗಾಗಿ ಜನ ಬಳಸಿದ ಮಾಸ್ಕ್​ಗಳನ್ನು ಡಸ್ಟ್​ಬಿನ್​ಗೆ ಹಾಕಿ ಅದನ್ನು ಕಾಗದದಲ್ಲಿ ಸುತ್ತಿ ಕಸ ಸಂಗ್ರಹಿಸುವವರು ಗುರುತಿಸುವಂತೆ ಮಾರ್ಕ್ ಮಾಡಿ ಕಸದ ವಾಹನಗಳಿಗೆ ನೀಡಬೇಕಿದೆ.

    ಕಡೂರು-ಬೀರೂರು ರಾಷ್ಟ್ರೀಯ ಹೆದ್ದಾರಿ ಬದಿ ಎಲ್ಲೆಂದರಲ್ಲಿ ಮಾಸ್ಕ್​ಗಳು ಬಿದ್ದಿವೆ. ಬ್ಯಾಂಕ್ ಕಚೇರಿ ಬಳಿ, ತಾಲೂಕು ಕಚೇರಿ ಆವರಣದಲ್ಲೂ ಅಲ್ಲಲ್ಲಿ ಮಾಸ್ಕ್​ಗಳು ಬಿದ್ದಿವೆ.

    ಕರೊನಾ ಸೇನಾನಿಗಳು ಹೊರತುಪಡಿಸಿದರೆ ಬಹುತೇಕ ಜನರು ಬಳಸಿ ಎಸೆಯುವ (ಯ್ಯೂಸ್ ಆಂಡ್ ಥ್ರೋ) ಮಾಸ್ಕ್​ಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಧರಿಸಿದ ಮಾಸ್ಕ್ ಅನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಡಸ್ಟ್​ಬಿನ್ ಅಥವಾ ಪ್ರತ್ಯೇಕ ಪ್ರದೇಶದಲ್ಲಿ ಹಾಕದೆ ಅಪಾಯಕಾರಿ ರೀತಿಯಲ್ಲಿ ಎಸೆಯಲಾಗುತ್ತಿದೆ. ಇಂತಹ ಮಾಸ್ಕ್​ಗಳಿಂದ ಬ್ಯಾಕ್ಟೀರಿಯಾ ಗಾಳಿ ಸಂಪರ್ಕಕ್ಕೆ ಬಂದು ಮಾನವನ ದೇಹ ಸೇರಿದರೆ ಇತರೆ ಕಾಯಿಲೆಗೆ ದಾರಿಮಾಡಿಕೊಟ್ಟಂತಾಗುತ್ತದೆ. ಅದನ್ನು ತಡೆಯಲು ಜನ ಜಾಗರೂಕರಾಗಿ ಮಾಸ್ಕ್​ಗಳನ್ನು ಡಸ್ಟ್​ಬಿನ್​ಗೆ ಹಾಕಿ ವಿಲೇವಾರಿ ಮಾಡಬೇಕಿದೆ.

    ಮಾಸ್ಕ್ ಮರು ಬಳಕೆ, ವಿಲೇ ಹೇಗೆ?: ಬಳಸಿದ ಮಾಸ್ಕ್​ಗಳನ್ನು ಕಡ್ಡಾಯವಾಗಿ ಕರೊನಾ ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್​ವೆುಂಟ್ ಮೂಲಕ ವಿಲೇವಾರಿ ಮಾಡಬೇಕು. ಸೋಡಿಯಂ ಹೈಪೋಕ್ಲೋರೈಡ್ ರಾಸಾಯನಿಕ ದ್ರಾವಣ ಬಳಸಿ ಮಾಸ್ಕ್​ನ ವೈರಸ್​ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನಂತರ ಇನ್ಸಿರೇಟರ್ ಯಂತ್ರದ ಮೂಲಕ ದಹಿಸಲಾಗುತ್ತದೆ. ವೈರಸ್ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಬಳಸುವ ಮರುಬಳಕೆಯ ಮಾಸ್ಕ್​ಗಳನ್ನು ಡೆಟಾಲ್ ಮತ್ತು ಸೋಪಿನ ನೀರಿನಲ್ಲಿ ಶುಚಿಗೊಳಿಸಿ ಬಿಸಿಲಿನಲ್ಲಿ ಕನಿಷ್ಠ 3 ಗಂಟೆ ಒಣಗಿಸಿ ಧರಿಸುವುದು ಉತ್ತಮ ಎಂಬುದು ವೈದ್ಯರ ಸಲಹೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts