More

    ಕರೊನಾ ಗುಣಮುಖ, ಜಗತ್ತಿನಲ್ಲೇ ಭಾರತ ಅತ್ಯಧಿಕ

    ನವದೆಹಲಿ: ಕರೊನಾ ಸೋಂಕಿತರ ಗುಣ ಪ್ರಮಾಣ ಭಾರತದಲ್ಲಿ ಶೇ. 80 ದಾಟಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಎಂದೆನಿಸಿಕೊಂಡಿದೆ. ಭಾರತದಲ್ಲಿ ಸತತ ಮೂರನೇ ದಿನ 90 ಸಾವಿರ ಮಂದಿ ಗುಣವಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕರೊನಾ ಸೋಂಕಿನಿಂದ ಗುಣವಾದವರ ಪ್ರಮಾಣ ಮೇ 4ರಂದು ಶೇ. 27.52 ಇದ್ದಿದ್ದು, ಜುಲೈ 13ರಂದು ಶೇ. 63.02 ಆಗಿತ್ತು. ಈಗ ಸೆ. 21ರಂದು ಅದು ಶೇ. 80ಕ್ಕೆ ತಲುಪಿದೆ.

    ಕಳೆದ 24 ಗಂಟೆಗಳಲ್ಲಿ 93,356 ಸೋಂಕಿತರು ಗುಣವಾಗಿದ್ದು, ಗುಣವಾದವರ ಒಟ್ಟು ಸಂಖ್ಯೆ 43,96,399 ತಲುಪಿದೆ. ಇಷ್ಟೊಂದು ಗುಣ ಪ್ರಮಾಣ ಜಗತ್ತಿನಲ್ಲೇ ಅತ್ಯಧಿಕ. ಇನ್ನು ಕೋವಿಡ್​-19 ದೇಶದಲ್ಲಿ ಪ್ರಕರಣಗಳ ಒಟ್ಟು ಸಂಖ್ಯೆ 5.49 ದಶಲಕ್ಷ ದಾಟಿದ್ದು, ಇದುವರೆಗೆ 87,882 ಮಂದಿ ಕರೊನಾಗೆ ಬಲಿ ಆಗಿದ್ದಾರೆ ಎಂದು ಕೇಂದ್ರ ಹೇಳಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts