More

    ಖಾಸಗಿ ಆಸ್ಪತ್ರೆ ತೆರೆಯದಿದ್ದರೆ ಲೈಸೆನ್ಸ್ ರದ್ದು – ತಹಸೀಲ್ದಾರ್ ಕೆ.ವಿಜಯಕುಮಾರ್ ಎಚ್ಚರಿಕೆ

    ಹೂವಿನಹಡಗಲಿ: ಪಟ್ಟಣದ ಖಾಸಗಿ ಆಸ್ಪತ್ರೆಗಳು 24 ಗಂಟೆ ಕಾರ್ಯನಿರ್ವಹಿಸಬೇಕು. ಇಲ್ಲವಾದರೆ ಪರವಾನಗಿ ರದ್ದುಪಡಿಸಲಾಗುವುದು ಎಂದು ತಹಸೀಲ್ದಾರ್ ಕೆ.ವಿಜಯಕುಮಾರ್ ಎಚ್ಚರಿಕೆ ನೀಡಿದರು.

    ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯಲ್ಲಿ ಮಾತನಾಡಿದರು. ಪಟ್ಟಣ ಸೇರಿ ಗ್ರಾಮೀಣ ಭಾಗಗಳಲ್ಲಿ ಕರೊನಾ ರೋಗ ಹರಡಂದತೆ ಬೆಳಗ್ಗೆ 7 ರಿಂದ 11 ಹಾಗೂ ಸಂಜೆ 5 ರಿಂದ 7 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಶೀತ, ಜ್ವರ , ಕೆಮ್ಮು ಎಂದು ಬರುವ ರೋಗಿಗಳಿಗೆ ತಪಾಸಣೆ ಮಾಡಬೇಕು. ಕರೊನಾ ಲಕ್ಷಣಗಳು ಕಾಣಿಸಿ ಕೊಂಡರೆ ಕೂಡಲೇ ಸಾರ್ವಜನಿಕ ಆಸ್ಪತ್ರೆಗಳಿಗೆ ಕಳಿಸಿಕೊಡಬೇಕೆಂದು ಹೇಳಿದರು.

    ಖಾಸಗಿ ಆಸ್ಪತ್ರೆಯ ಡಾ.ಪ್ರಕಾಶ್ ಅಟವಾಳಗಿ ಮಾತನಾಡಿ, ಖಾಸಗಿ ವೈದ್ಯರಿಗೆ ರಕ್ಷಣೆಗಾಗಿ ಅಗತ್ಯ ಸಲಕರಣೆ ನೀಡಬೇಕೆಂದು ಕೋರಿದರು. ಸರ್ಕಾರದಿಂದ ಪೂರೈಸಲಾಗುತ್ತದೆ ಎಂದು ತಹಸೀಲ್ದಾರ್ ತಿಳಿಸಿದರು. ತಾಲೂಕಿನ ಕೆಲ ಗ್ರಾಮಗಳಲ್ಲಿ ಬೇಲಿ ಹಾಕಿದ್ದು, ಕೂಡಲೇ ತೆರವುಗೊಳಿಸಲಾಗುತ್ತದೆ. ಮೂಢನಂಬಿಕೆ ಸರಿಯಲ್ಲ. ಹೆರಿಗೆ ಸೇರಿ ತುರ್ತು ಸಂದರ್ಭದಲ್ಲಿ ತೊಂದರೆಯಾಗುತ್ತದೆ. ಬೇಲಿಗಳ ತೆರವಿಗೆ ತಂಡ ರಚಿಸಲಾಗಿದೆ ಎಂದು ತಹಸೀಲ್ದಾರ್ ವಿಜಯಕುಮಾರ್ ಹೇಳಿದರು.

    ಪಟ್ಟಣದಲ್ಲಿ ಪ್ರತಿ ವಾರ್ಡ್‌ಗೆ ಸ್ವಯಂ ಸೇವಕರನ್ನು ನೇಮಿಸಲಾಗುತ್ತದೆ. ಅಗತ್ಯ ವಸ್ತುಗಳನ್ನು ಸ್ವಯಂ ಸೇವಕರೇ ಮನೆ ಬಾಗಿಲಿಗೆ ಮುಟ್ಟಿಸುತ್ತಾರೆ. ತಾಲೂಕಿನಲ್ಲಿ ಈವರೆಗೆ ಕರೊನಾ ಶಂಕಿತರು ಪತ್ತೆಯಾಗಿಲ್ಲ . ತಾಲೂಕಿನಲ್ಲಿ 36 ಜನರನ್ನು ಮುಂಜಾಗೃತಾ ಕ್ರಮವಾಗಿ ಗೃಹಬಂಧನದಲ್ಲಿಡಲಾಗಿದೆ ಎಂದು ಮಾಹಿತಿ ನೀಡಿದರು. ತಾಪಂ ಇಒ ಯು.ಎಚ್.ಸೋಮಶೇಖರ್, ಟಿಎಚ್‌ಒ ಡಾ.ಬದ್ಯಾನಾಯ್ಕ, ಡಾ.ಶಿವಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts