More

    ಶೂನ್ಯದತ್ತ ಕರೊನಾ ಸೋಂಕು

    ಹಾವೇರಿ: 2021ರ ಅಂತ್ಯಕ್ಕೆ ಇಳಿಕೆ ಕಂಡಿದ್ದ ಕರೊನಾ ಸೋಂಕು ನೂತನ ವರ್ಷಾರಂಭದೊಂದಿಗೆ ಅಬ್ಬರಿಸಲು ಆರಂಭಿಸಿತ್ತು. ಇದೀಗ ಕಳೆದೊಂದು ತಿಂಗಳಿನಿಂದ ಸೋಂಕು ಸಂಪೂರ್ಣ ಇಳಿಮುಖತ್ತ ಸಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಶೂನ್ಯದತ್ತ ಬಂದಿದೆ.

    ವರ್ಷಾರಂಭದಲ್ಲಿ ನಿಧಾನ ಗತಿಯಲ್ಲಿ ಏರಿಕೆಯಾಗಿದ್ದ ಸೋಂಕು ಶಾಲಾ- ಕಾಲೇಜ್​ಗಳಲ್ಲಿ ವ್ಯಾಪಕವಾಗಿ ಹರಡಲು ಆರಂಭಿಸಿತ್ತು. ಅದರಲ್ಲಿಯೂ 18ವರ್ಷದೊಳಗಿನವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡಿತ್ತು. ಇದರಿಂದ ಶಾಲಾ- ಕಾಲೇಜ್​ಗಳನ್ನು ಬಂದ್ ಮಾಡುವ ಸ್ಥಿತಿಯೂ ಬಂದಿತ್ತು. ಸೋಂಕು ವ್ಯಾಪಕವಾಗಿ ಹರಡಿದ ಶಾಲೆಗಳಿಗೆ ರಜೆ ಘೊಷಿಸಲಾಗಿತ್ತು. ಫೆಬ್ರವರಿ ಅಂತ್ಯದೊಂದಿಗೆ ಸೋಂಕಿನ ಪ್ರಮಾಣವು ಇಳಿಮುಖವಾಗುತ್ತ ಸಾಗಿ ಜನರಲ್ಲಿ ಸ್ವಲ್ಪ ಆತಂಕ ದೂರವಾಗಿತ್ತು. ಇದೀಗ ಮಾರ್ಚ್​ನಲ್ಲಿ ಪರೀಕ್ಷೆಗಳು ಬರುತ್ತಿದ್ದು, ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಮಾಣವು ಶೂನ್ಯಕ್ಕಿಳಿದಿರುವುದು ಶಾಲಾ- ಕಾಲೇಜ್ ವಿದ್ಯಾರ್ಥಿಗಳ ಪಾಲಿಗೆ ಶುಭದಾಯಕ ವಿಷಯವಾಗಿದೆ.

    ಒಂದು ತಿಂಗಳ ಅವಧಿಯಲ್ಲಿ 135 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟರೆ ಉಳಿದವರು ಗುಣವಾಗಿದ್ದಾರೆ. ಒಟ್ಟಾರೆ 2022ರ ಜನವರಿಯಿಂದ ಈವರೆಗೆ ಒಟ್ಟು 4,874 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ 26 ಜನರು ಮೃತಪಟ್ಟಿದ್ದಾರೆ. ಜನವರಿ ಹಾಗೂ ಫೆಬ್ರವರಿ ಅಂತ್ಯದವರೆಗೆ ಸೋಂಕಿನ ಪ್ರಮಾಣ ಏರು ಗತಿಯಲ್ಲಿ ಸಾಗಿತ್ತು. ಮಾರ್ಚ್ ಆರಂಭದಿಂದ ಈವರೆಗೂ ಸೋಂಕು ಇಳಿಕೆಯತ್ತ ಸಾಗಿದ್ದು, ಸದ್ಯ ಶೂನ್ಯಕ್ಕೆ ಬಂದು ನಿಂತಿದೆ. ಜನವರಿಯಲ್ಲಿ ಸೋಂಕಿನ ಪ್ರಮಾಣ ಏರಿಕೆ ಜತೆಗೆ ಸಾವಿನ ಪ್ರಮಾಣವೂ ಏರಿಕೆಯಾಗಿತ್ತು. ಫೆಬ್ರವರಿ ಅರ್ಧ ತಿಂಗಳ ಕಳೆದ ನಂತರ ಪ್ರಕರಣಗಳ ಸಂಖ್ಯೆ ಎರಡಂಕಿ ದಾಟಿಲ್ಲ. ಇತ್ತೀಚೆಗಂತೂ ಒಂದಂಕಿಗೆ ಬಂದು ನಿಂತಿತ್ತು. ಕಳೆದೊಂದು ವಾರದಿಂದ ಅದು ನಿಂತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts