More

    ಪ್ರಗತಿ ಪರ ರೈತ ಕಲ್ಲೇರ್ ಬಸವರಾಜಪ್ಪರಿಂದ 100 ಕ್ವಿಂಟಾಲ್ ಜೋಳ

    ಹರಪನಹಳ್ಳಿ: ಕರೊನಾದಿಂದ ರಾಜ್ಯದಲ್ಲಿ ಲಾಕ್‌ಡೌನ್‌ಗೊಳಗಾಗಿರುವ ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಹಸಿವಿನ ಪರದಾಡಬಾರದು ಎಂದು ಪ್ರಗತಿಪರ ರೈತ ಹಾಗೂ ಬಿಜೆಪಿ ಮುಖಂಡ ಕಲ್ಲೇರ್ ಬಸವರಾಜಪ್ಪ ಅವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ 100 ಕ್ವಿಂಟಾಲ್‌ಗೂ ಅಧಿಕ ಊಟದ ಜೋಳವನ್ನು ದಾನ ಮಾಡಿದರು.

    ತಾಲೂಕಿನ ಹಲವಾಗಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜೋಳ ವಿತರಿಸಿ ಮಾತನಾಡಿ, ಕರೊನಾ ಹಾವಳಿಯಿಂದ ದೇಶವೇ ಆತಂಕದಲ್ಲಿದೆ. ಲಾಕ್‌ಡೌನ್‌ನಿಂದಾಗಿ ಸಾಮಾನ್ಯಜನರ ಜೀವನ ದುಸ್ತರವಾಗಿದೆ.

    ಕೂಲಿಕಾರ್ಮಿಕರಿಗೆ ಕೂಲಿ ಕೆಲಸವೂ ಇಲ್ಲದೆ ತೊಂದರೆ ಸಿಲುಕಿದ್ದಾರೆ. ಪ್ರತಿ ಪಡಿತರ ಚೀಟಿದಾರರಿಗೆ ತಲಾ 5 ಕೆಜಿ ಜೋಳ ವಿತರಿಸಿದ್ದೇನೆ. ಪಡಿತರ ಚೀಟಿ ಇಲ್ಲದವರಿಗೂ ಜೋಳ ನೀಡಲಾಗಿದೆ ಎಂದರು.

    ಹಲವಾಗಲು ಗ್ರಾಮ ಪಂಚಾಯಿತಿಯ ಹಲವಾಗಲು, ಕಣಿವಿ, ಗರ್ಭಗುಡಿ, ಗರ್ಭಗುಡಿತಾಂಡ, ಒಳತಾಂಡ ಸೇರಿ ಎಲ್ಲಾ ಗ್ರಾಮಗಳ 2500ಕ್ಕೂ ಹೆಚ್ಚು ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡಿ ತೊಂದರೆಯಲ್ಲಿರುವ ಜನರಿಗೆ ನನ್ನ ಅಳಿಲು ಸೇವೆ ಸಲ್ಲಿಸಿದ್ದೇನೆ.

    ಅಲೆಮಾರಿ ಜನಾಂಗದವರಿಗೂ ಜೋಳ ಹಂಚಿಕೆ ಮಾಡಲಾಗುವುದು. ಹಲವಾಗಲು ಪೊಲೀಸ್ ಠಾಣಾ ಸಿಬ್ಬಂದಿಗೆ ತಲಾ 2 ಕೆಜಿ ಚವನ್ ಪ್ರಾಸ್ ನೀಡಲಿದ್ದೇನೆ ಎಂದರು.

    ಹಲವಾಗಲು ಗ್ರಾಮದ ನಿವಾಸಿಗಳಾದ ಈರಣ್ಣ ಮತ್ತು ಮಲ್ಲಮ್ಮ ಮಾತನಾಡಿ, ಕರೊನಾ ಭೀತಿಯಲ್ಲಿ ಕೆಲಸವಿಲ್ಲದೆ ಬದುಕು ದುಸ್ತರವಾಗಿದ್ದು, ಇಂತಹ ಸಂದರ್ಭದಲ್ಲಿ ಬಡವರಿಗೆ ಇಂತಹ ದಾನಿಗಳಿಂದ ತುಂಬಾ ಅನುಕೂಲವಾಗಿದೆ ಎಂದರು. ಅರಸನಾಳು ಬಸವರಾಜ್, ಪಿಎಸ್‌ಐ ಕೃಷ್ಣಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts