More

    ಬೆಂಗಳೂರಿಂದ ಬಂದ ಮೂವರಿಗೆ ಸೋಂಕು

    ಉಡುಪಿ: ಜಿಲ್ಲೆಯಲ್ಲಿ ಮಹಾರಾಷ್ಟ್ರ ಬಳಿಕ ಬೆಂಗಳೂರಿನ ಆತಂಕ ಕಾಡಲು ಶುರುವಾಗಿದೆ. ಶುಕ್ರವಾರ 9 ಕರೊನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದ್ದು, ಇದರಲ್ಲಿ ಮೂವರು ಬೆಂಗಳೂರಿನಿಂದ ಬಂದ ಯುವಕರು. ಎಲ್ಲರನ್ನೂ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಮಸ್ಕತ್ ಮತ್ತು ಕತಾರ್‌ನಿಂದ ಆಗಮಿಸಿದ್ದ ತಲಾ ಇಬ್ಬರು, ಕೇರಳದಿಂದ ಆಗಮಿಸಿದ್ದ ಒಬ್ಬರು ಇತರ ಸೋಂಕಿತರು. ಕಾಪು ತಾಲೂಕು ವ್ಯಾಪ್ತಿಯಲ್ಲಿ ಸ್ಥಳೀಯವಾಗಿ 62 ವರ್ಷ ವೃದ್ಧ ಮತ್ತು ಬೈಂದೂರು ತಾಲೂಕು ನಿವಾಸಿ ನಗರದ ಖಾಸಗಿ ಆಸ್ಪತ್ರೆಯೊಂದರ ಸ್ಟಾಫ್ ನರ್ಸ್‌ಗೆ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ವೃದ್ಧರಿಗೆ ಯಾರ ಸಂಪರ್ಕದಿಂದ ಸೋಂಕು ತಗುಲಿದೆ ಎಂಬುದರ ಬಗ್ಗೆ ಆರೋಗ್ಯ ಇಲಾಖೆ ಪರಿಶೀಲಿಸುತ್ತಿದೆ. ಜಿಲ್ಲಾಡಳಿತ, ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ ಸೋಂಕಿತ ನರ್ಸ್‌ನ ಮಾಹಿತಿ ನೀಡಿಲ್ಲ, ಶನಿವಾರ ಸೇರ್ಪಡೆಯಾಗಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
    ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,125ಕ್ಕೆ ಏರಿಕೆಯಾಗಿದ್ದು, ಇದೂವರೆಗೆ 1037 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 86 ಸಕ್ರಿಯ ಪ್ರಕರಣಗಳಿವೆ. ಶುಕ್ರವಾರ 17 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 147 ಮಂದಿಯ ವರದಿ ನೆಗೆಟಿವ್ ಬಂದಿದ್ದು, 352 ಮಂದಿಯ ವರದಿ ಬರಲು ಬಾಕಿ ಇದೆ. 120 ಮಂದಿಯ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

    ಪಡುಬಿದ್ರಿ ಗರ್ಭಿಣಿಗೆ ಪಾಸಿಟಿವ್: ಪಡುಬಿದ್ರಿ: 10 ದಿನದ ಹಿಂದೆ ಮಹಾರಾಷ್ಟ್ರದಿಂದ ಆಗಮಿಸಿದ ಪಡುಬಿದ್ರಿ ಬೆಂಗ್ರೆಯ 27ರ ಹರೆಯದ ಗರ್ಭಿಣಿಗೆ ಕರೊನಾ ದೃಢಗೊಂಡಿದ್ದು, ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿಯೊಂದಿಗೆ ಬಂದ ಮಹಿಳೆ ಹೋಂ ಕ್ವಾರಂಟೈನ್‌ನಲ್ಲಿದ್ದರು. ಈ ಸಂದರ್ಭ ಮನೆ ಮಂದಿ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರು. ಪತಿ ಮತ್ತು ಪತ್ನಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಗುರುವಾರ ವರದಿಯಲ್ಲಿ ಗರ್ಭಿಣಿಯ ವರದಿ ಪಾಸಿಟಿವ್, ಪತಿಯ ವರದಿ ನೆಗೆಟಿವ್ ಬಂದಿದೆ. ಶುಕ್ರವಾರ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಮನೆಯನ್ನು ಸೀಲ್‌ಡೌನ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts