More

    ಕರೊನಾ ಭೀತಿಯಿಂದ ರಸ್ತೆ ಬಂದ್, ತೆರವಿಗೆ ಒತ್ತಾಯ

    ಕೊಕಟನೂರ: ಅಥಣಿ ತಾಲೂಕಿನ ಕೆಲವು ಗ್ರಾಮಗಳ ರಸ್ತೆಯಲ್ಲಿ ಮುಳ್ಳು, ಕಲ್ಲು ಹಾಗೂ ಮಣ್ಣಿನ ರಾಶಿ ಸುರಿದು ಅಡಚಣೆ ಉಂಟು ಮಾಡಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗೆ ತೀವ್ರ ತೊಂದರೆಯಾಗುತ್ತಿದೆ.

    ಸದ್ಯ ಹಿಂಗಾರಿ ಸುಗ್ಗಿಯ ಕಾಲವಾಗಿದ್ದಯ, ಹೊಲದಲ್ಲಿರುವ ಜೋಳ, ಕಡಲೆ, ರಾಶಿಯನ್ನು ಗ್ರಾಮದಲ್ಲಿಯ ಮನೆಗೆ ತರಲು ತೊಂದರೆಯಾಗಿದೆ. ಇನ್ನೂ ದ್ರಾಕ್ಷಿ ಕಟಾವು ಮಾಡಿ ಸಂಸ್ಕರಣೆ ಮಾಡುವವರ ಕೆಲಸ ಜೋರಾಗಿದ್ದು, ರೈತರು ವಾಹನಗಳನ್ನು ಉಪಯೋಗಿಸುವುದು ಕಷ್ಟವಾಗುತ್ತಿದೆ.

    ಕೋಹಳ್ಳಿಯಿಂದ ಸಿಂಧೂರಗೆ, ಹೋಗುವ 4 ಕಿ.ಮೀ ಅಂತರದಲ್ಲಿ 4 ಕಡೆ, ಯಲ್ಲಮ್ಮನವಾಡಿಯಿಂದ ಬಾಡಗಿ ಹಾಗೂ ತುಂಗಳಕ್ಕೆ, ಝುಂಜರವಾಡದಿಂದ ತುಬಚಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮುಳ್ಳು, ಮಣ್ಣು ಹಾಗೂ ಕಲ್ಲಿನ ರಾಶಿ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಗಡಿ ಭಾಗದಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಇದೆ.

    ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು ಅವರಿಗೂ ಕೂಡಾ ಅಡಚಣೆಯಾಗುತ್ತಿದೆ. ಸರ್ಕಾರ ಇಂತಹ ಜನರಿಗೆ ತಿಳುವಳಿಕೆ ನೀಡಿ ರಸ್ತೆ ಬಂದ್ ಮಾಡದಂತೆ ಎಚ್ಚರಿಕೆ ನೀಡಬೇಕು ಎಂಬುದು ಅರುಣ ಕೋಹಳ್ಳಿ ಅವರ ಒತ್ತಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts