More

    ಹಳ್ಳಿಗಳತ್ತ ಜನರ ಮುಖ

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ಮಹಾಮಾರಿ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಗಲು-ರಾತ್ರಿ ಶತಾಯಗತಾಯ ಶ್ರಮಿಸುತ್ತಿರುವುದು ಒಂದೆಡೆಯಾದರೆ, ಮಹಾನಗರ ಬಿಟ್ಟು ಜನತೆ ತಮ್ಮೂರಿಗೆ ವಾಪಸ್ ತೆರಳಲಾರಂಭಿಸಿದ್ದಾರೆ.

    ಸೋಂಕಿನಿಂದಾಗಿ ಕರ್ನಾಟಕ ಅಕ್ಷರಶಃ ಸ್ತಬ್ಧಗೊಂಡಿದೆ. ರಾಜಧಾನಿ ಬೆಂಗಳೂರು ಸೇರಿ ಎಲ್ಲೆಡೆ ರಸ್ತೆಗಳು ಬಿಕೋ ಎನ್ನುತ್ತಿವೆ. ಉನ್ನತ ವ್ಯಾಸಂಗ ಪಡೆದು ಹಳ್ಳಿಯಲ್ಲಿ ಏನಿದೆ?, ಜೀವನಕ್ಕೆ ಆಧಾರ ಸಿಟಿಗಳೇ ಎಂದು ಬೀಗುತ್ತ ಮಸ್ತ್ ಮಜಾ ಮಾಡುತ್ತಿದ್ದ ಮಂದಿ ಇದೀಗ ತಮ್ಮ ಜೀವ ಕಾಪಾಡಿಕೊಳ್ಳಲು ಬೆಂಗಳೂರು, ಪುಣೆ, ಮುಂಬೈ, ಗೋವಾ ಹಾಗೂ ಹೈದರಾಬಾದ್ ಬಿಟ್ಟು ಹಳ್ಳಿಗಳಿಗೆ ಓಡೋಡಿ ಬರುತ್ತಿದ್ದಾರೆ.

    ಮುಂಜಾಗ್ರತಾ ಸರ್ಕಾರ ಜನದಟ್ಟಣೆ ನಿಯಂತ್ರಿಸಲು ದೂರದ ಪ್ರದೇಶಕ್ಕೆ ತೆರಳುವ ಬಸ್ ಹಾಗೂ ಕೆಲ ರೈಲುಗಳ ಸೇವೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಹೀಗಾಗಿ ಶಹರಗಳಲ್ಲಿನ ಜನತೆ ಆತಂಕಕ್ಕೀಡಾಗಿ ಟ್ಯಾಕ್ಸಿಗಳ ಮೂಲಕ ತಮ್ಮೂರಿಗೆ ಬರತೊಡಗಿದ್ದು, ಜನರೇ ಇಲ್ಲದೆ ಖಾಲಿ ಹೊಡೆಯುತ್ತಿದ್ದ ಹಳ್ಳಿಗಳು ಕರೊನಾ ಎಫೆಕ್ಟ್ನಿಂದ ತುಂಬಿ ತುಳುಕುತ್ತಿವೆ.

    ಮೆಡಿಕಲ್, ಇಂಜಿನಿಯರಿಂಗ್ ಇತರ ಉನ್ನತ ಕೋಸರ್್ ಅಧ್ಯಯನಕ್ಕಾಗಿ ಬೆಂಗಳೂರಿಗೆ ತೆರಳಿದ್ದ ವಿದ್ಯಾಥರ್ಿಗಳು ಇದೀಗ ತಮ್ಮ ಮನೆಗಳಿಗೆ ವಾಪಸ್ ಆಗುತ್ತಿದ್ದಾರೆ. ಕಲಬುರಗಿಯಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ ಬಳಿಕವಂತೂ ಕರೊನಾ ಭೀತಿ ಎಲ್ಲೆ ಮೀರಿದೆ. ವೈರಸ್ನಿಂದ ಮತ್ತಷ್ಟು ಭಯಭೀತರಾಗಿದ್ದು, ಹಳ್ಳಿಗಳಲ್ಲಿನ ತಮ್ಮ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

    ಕರೊನಾ ತಡೆಯಲು ಬೆಂಗಳೂರಿನಲ್ಲೂ ಇಷ್ಟೊಂದು ಜಾಗೃತಿ ವಹಿಸುತ್ತಿಲ್ಲ. ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸೋಂಕು ಹರಡದಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಬೇರೆ ಬೇರೆ ಕಡೆಗಳಿಂದ ಶಹಬ್ಬಾಶ್ಗಿರಿ ಕೊಡುತ್ತಿದ್ದಾರೆ.

    ಇನ್ನು ವೈರಸ್ನಿಂದ ತಪ್ಪಿಸಿಕೊಳ್ಳಲು ಜಿಲ್ಲೆಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಶನಿವಾರ ನಗರದಲ್ಲಿ ಸಿಂಗಲ್ ಕಪ್ ಚಹಾ ಸಿಗದೆ ಜನತೆ ಪರದಾಡುವಂತಾಯಿತು. ಕೆಟ್ಟು ಪಟ್ಟಣ ಸೇರು.. ಎಂಬ ಕನ್ನಡ ಗಾದೆ ಇದೀಗ ಕರೊನಾ ವೈರಸ್ನಿಂದ ಆರೋಗ್ಯ ಕೆಡದಂತಿರಲು ಹಳ್ಳಿ ಸೇರು ಎಂದು ಬದಲಾದಂತಿದೆ. ಒಟ್ಟಾರೆ, ಮಹಾಮಾರಿ ಎಲ್ಲ ವರ್ಗದ ಜನರನ್ನು ಬೆಚ್ಚಿ ಬೀಳಿಸಿದ್ದಂತೂ ಸುಳ್ಳಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts