More

    ದ.ಕ.ದಲ್ಲಿ ಕೋವಿಡ್ ಸಾವು ಸಾವಿರ ಸನಿಹಕ್ಕೆ

    ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಐವರು ಮಂಗಳವಾರ ಮೃತಪಟ್ಟಿದ್ದು, ಸೋಂಕಿನಿಂದ ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 988 ತಲುಪಿದೆ. ಉಡುಪಿ ಜಿಲ್ಲೆಯಲ್ಲಿ ಈ ವರೆಗೆ ಮೃತಪಟ್ಟವರ ಸಂಖ್ಯೆ 363.

    ದ.ಕ.ದಲ್ಲಿ ಈ ದಿನ ಹೊಸ 482 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಸೋಂಕು ಪ್ರಮಾಣ ಶೇ. 5.74. 651 ಮಂದಿ ಸೋಂಕುಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 84,875 ಮಂದಿ ಸೋಂಕಿಗೆ ಒಳಗಾಗಿದ್ದು, 77,107 ಮಂದಿ ಗುಣವಾಗಿದ್ದಾರೆ. 6,780 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
    ಒಂದೇ ಕಡೆ ಅಧಿಕ ಸೋಂಕು ದೃಢಪಟ್ಟ 16 ಹೊಸ ಕಂಟೇನ್ಮೆಂಟ್ ಜೋನ್‌ಗಳನ್ನು ಆರೋಗ್ಯ ಇಲಾಖೆ ಗುರುತಿಸಿದೆ. ಬೆಳ್ತಂಗಡಿ, ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳಲ್ಲಿ ಗರಿಷ್ಠ ತಲಾ ನಾಲ್ಕು ಕಂಟೇನ್ಮೆಂಟ್ ಜೋನ್‌ಗಳಿವೆ. ಮಂಗಳೂರಿನಲ್ಲಿ 3 ಮತ್ತು ಸುಳ್ಯದಲ್ಲಿ ಒಂದು ವಲಯವಿದೆ.

    ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 107 ಮಂದಿಗೆ ಕರೊನಾ ದೃಢಪಟ್ಟಿದೆ. ಕುಂದಾಪುರದಲ್ಲಿ 94 ವರ್ಷದ ಮಹಿಳೆ ಮೃತರಾಗಿದ್ದಾರೆ. ಸೋಂಕಿತರಲ್ಲಿ 50 ಮಂದಿ ಉಡುಪಿ, 39 ಮಂದಿ ಕುಂದಾಪುರ, 17 ಮಂದಿ ಕಾರ್ಕಳ ತಾಲೂಕಿನವರಿದ್ದಾರೆ. ಓರ್ವ ಹೊರ ಜಿಲ್ಲೆಯವರು. ಇವರಲ್ಲಿ 52 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 10 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 97 ಮಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 306 ಮಂದಿ ಗುಣವಾಗಿದ್ದಾರೆ. 2683 ಸಕ್ರಿಯ ಪ್ರಕರಣಗಳಿವೆ. ಕಾಸರಗೋಡು ಜಿಲ್ಲೆಯ 301 ಮಂದಿಗೆ ಕೋವಿಡ್ ದೃಢಪಟ್ಟಿದೆ.

    ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಚಿಕ್ಕಮಗಳೂರಿನ ರೋಗಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಬ್ಲ್ಯಾಕ್ ಫಂಗಸ್ ರೋಗಕ್ಕೆ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ನಿವಾಸಿ ಮೃತಪಟ್ಟಿದ್ದಾರೆ. ಒಟ್ಟು ದೃಢಪಟ್ಟ ಪ್ರಕರಣಗಳಲ್ಲಿ 38 ಮಂದಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುವವರಲ್ಲಿ ಏಳು ಮಂದಿ ದ.ಕ.ಜಿಲ್ಲೆಯವರು. ಉಳಿದವರು ಹೊರ ಜಿಲ್ಲೆಯವರು. ರೋಗ ದೃಢಪಟ್ಟವರಲ್ಲಿ ಇಲ್ಲಿಯ ತನಕ 16 ಮಂದಿ ಮೃತಪಟ್ಡಿದ್ದಾರೆ. ಇವರಲ್ಲಿ ಇಬ್ಬರು ದ.ಕ.ಜಿಲ್ಲೆಯವರು. ಉಳಿದವರು ಹೊರ ಜಿಲ್ಲೆಯವರು. ಉಡುಪಿ ಜಿಲ್ಲೆಯಲ್ಲಿ ಹೊರ ಜಿಲ್ಲೆಯ ರೋಗಿಯಲ್ಲಿ ಕಪ್ಪು ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 7 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts