More

    ಸೋಂಕು ದೃಢಪಟ್ಟ 30 ದಿನಗಳಲ್ಲಿ ಸತ್ತಿದ್ದರೆ, ಅದು ಕರೊನಾ​​ ಸಾವು; ಪ್ರಮಾಣಪತ್ರ ಪಡೆಯಲು ಹೀಗಿವೆ, ಮಾರ್ಗಸೂಚಿಗಳು

    ನವದೆಹಲಿ: ಕೋವಿಡ್​ ಸೋಂಕಿನಿಂದಾಗಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಪಡೆಯಲು ಸಹಾಯವಾಗುವಂತೆ ಕೋವಿಡ್​​ 19 ಸಾವು ಎಂಬ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಈ ಬಗ್ಗೆ ಸರ್ಕಾರದ ವಿಳಂಬನೀತಿಯನ್ನು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್​ ಮುಂದೆ, ಸರ್ಕಾರಿ ವಕೀಲರು ಶನಿವಾರ ಸಂಜೆ ಅಫಿಡೆವಿಟ್​ ಮೂಲಕ ಮಾಹಿತಿ ನೀಡಿದ್ದಾರೆ.

    ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್​ ಜಂಟಿಯಾಗಿ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಆರ್‌ಟಿ-ಪಿಸಿಆರ್ ಪರೀಕ್ಷೆ, ಮಾಲಿಕ್ಯುಲರ್ ಪರೀಕ್ಷೆ, ರಾಪಿಡ್​-ಆ್ಯಂಟಿಜನ್​​ ಪರೀಕ್ಷೆ ಮೂಲಕ, ಅಥವಾ ಆಸ್ಪತ್ರೆಯಲ್ಲಿ ಅಥವಾ ಇತರ ಒಳರೋಗಿಗಳ ಸೌಲಭ್ಯವಿರುವ ಕೇಂದ್ರದಲ್ಲಿ ತನಿಖೆಗಳ ಮೂಲಕ ಅಥವಾ ವೈದ್ಯರಿಂದ ನಿರ್ಧರಿಸಲ್ಪಟ್ಟ ಕೋವಿಡ್ -19 ಪ್ರಕರಣಗಳನ್ನು ಮಾತ್ರ ಪರಿಗಣಿಸಲಾಗುವುದು.

    ಇದನ್ನೂ ಓದಿ: ಸಂಕಷ್ಟದಲ್ಲಿ ಶುಲ್ಕ ರಿಯಾಯಿತಿ ನೀಡಿ ; ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಎಸ್. ಮುನಿಸ್ವಾಮಿ ಸಲಹೆ

    ಕರೊನಾ ಪಾಸಿಟೀವ್​ ಬಂದ ಪರೀಕ್ಷೆಯ ದಿನಾಂಕದಿಂದ ಅಥವಾ ಕೋವಿಡ್ -19 ಪ್ರಕರಣವೆಂದು ವೈದ್ಯಕೀಯವಾಗಿ ನಿರ್ಧರಿಸಿದ ದಿನಾಂಕದಿಂದ 30 ದಿನಗಳೊಳಗೆ ರೋಗಿಯು ಆಸ್ಪತ್ರೆಯಲ್ಲಿ ಅಥವಾ ಆಸ್ಪತ್ರೆಯ ಹೊರಗೆ(ಮನೆಯಲ್ಲಿ ಅಥವಾ ಇತರ ಶುಶ್ರೂಷಾ ಕೇಂದ್ರಗಳಲ್ಲಿ) ಸಾವನ್ನಪ್ಪಿದ್ದರೆ, ಅದನ್ನು ಕೋವಿಡ್ -19 ನಿಂದ ಆದ ಸಾವು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ.

    ಜೊತೆಗೆ, ಕರೊನಾ ರೋಗಿಯನ್ನು 30 ದಿನಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಅಥವಾ ಒಳರೋಗಿ ಸೌಲಭ್ಯದಲ್ಲಿ ದಾಖಲಿಸಲಾಗಿದ್ದು ಅವರು ನಂತರ ಸಾವನ್ನಪ್ಪಿದರೆ ಕೂಡ ಕೋವಿಡ್ -19 ಸಾವು ಎಂದು ಪರಿಗಣಿಸಲಾಗುತ್ತದೆ. ಆದರೆ, ವಿಷ, ಆತ್ಮಹತ್ಯೆ, ಹತ್ಯೆ ಮತ್ತು ಅಪಘಾತದಿಂದ ಸಂಭವಿಸುವ ಸಾವುಗಳನ್ನು ಕೋವಿಡ್ -19 ಸ್ಥಿತಿಯಿದ್ದರೂ ಸಹ, ಕೋವಿಡ್ -19 ಸಾವು ಎಂದು ಪರಿಗಣಿಸಲಾಗುವುದಿಲ್ಲ ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ. (ಏಜೆನ್ಸೀಸ್)

    ತಾರಾಸಂಗಮ: ರಣವೀರ್​, ದೀಪಿಕಾ ಜೊತೆ ಪಿ.ವಿ.ಸಿಂಧು ಡಿನ್ನರ್!

    ಬೆಂಗಳೂರಿಗರೇ, ಎಚ್ಚರ! 3 ತಿಂಗಳಲ್ಲಿ 6 ಪಟ್ಟು ಹೆಚ್ಚಿದೆ ಡೆಂಘೆ ಜ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts