More

    ಕರೊನಾ ಬುಲೆಟಿನ್​: ರಾಜ್ಯದಲ್ಲಿ ದೈನಂದಿನ ಸೋಂಕು, ಮರಣ ಪ್ರಮಾಣ ಎರಡರಲ್ಲೂ ಏರಿಕೆ!

    ಬೆಂಗಳೂರು: ರಾಜ್ಯದಲ್ಲಿ ಭಾನುವಾರ 1,837 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ನಗರ, ದಕ್ಷಿಣಕನ್ನಡ, ಮೈಸೂರು ಮತ್ತು ದಾವಣಗೆರೆಯಲ್ಲಿ ತಲಾ ಒಬ್ಬರಂತೆ ನಾಲ್ವರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ. 6.24 ಹಾಗೂ ಮರಣ ಪ್ರಮಾಣ ದರ ಶೇ. 6.50ಕ್ಕೆ ಏರಿಕೆಯಾಗಿದೆ.

    ಕಳೆದ 24 ಗಂಟೆಗಳಲ್ಲಿ 1,290 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟು ಸಂಖ್ಯೆ 39.68 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 11,898 ತಲುಪಿದೆ. ಈವರೆಗೂ 40,118 ಮಂದಿ ಮೃತಪಟ್ಟಿದ್ದು, 40.20 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ.

    ಬೆಂಗಳೂರು ನಗರದಲ್ಲಿ 1,137 ಮಂದಿ, ಧಾರವಾಡ 113, ಮೈಸೂರು 83, ಬೆಳಗಾವಿ 57, ಬಳ್ಳಾರಿ 55, ಬೆಂಗಳೂರು ಗ್ರಾಮಾಂತರ 36, ಕೊಡಗು 32, ಬಾಗಲಕೋಟೆ 28, ಕಲಬುರಗಿ, ಕೋಲಾರ ಮತ್ತು ತುಮಕೂರು ತಲಾ 26, ದಾವಣಗೆರೆ 25, ಕೊಪ್ಪಳ 24, ಶಿವಮೊಗ್ಗ 20, ಚಾಮರಾಜನಗರ 19, ರಾಯಚೂರು 18, ಹಾವೇರಿ 17, ಉತ್ತರ ಕನ್ನಡ 16, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಹಾಸನ ತಲಾ 15 ಹಾಗೂ 8 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಒಂದಂಕಿ ಇದೆ. ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಯಾವುದೇ ಪ್ರಕರಣ ದೃಢಪಟ್ಟಿಲ್ಲ.

    ಮೋದಿ ನಡೆಯನ್ನು ಮೆಚ್ಚಿದ ಪಾಕಿಸ್ತಾನಿ ಪತ್ರಕರ್ತ; ಪಾಕ್ ಸರ್ಕಾರದ ವಿರುದ್ಧ ಅಸಮಾಧಾನ..

    ಮಬ್ಬು ಕವಿದ ಮಾರ್ಗ, 35 ಪ್ರಯಾಣಿಕರಿದ್ದ ಬಸ್​ ಪಲ್ಟಿ​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts