More

    ಆಗಸ್ಟ್​ 15ರ ವೇಳೆಗೆ 2.5 ಕೋಟಿ ಜನರಿಗೆ ಹಬ್ಬಲಿದೆಯೇ ಕರೊನಾ?

    ನವದೆಹಲಿ: ದೇಶಾದ್ಯಂತ ಮೇ 17 ರವರೆಗೆ ಲಾಕ್​ಡೌನ್​ ಜಾರಿಯಲ್ಲಿದ್ದರೂ, ಹಸಿರು ವಲಯಗಳಲ್ಲಿ ಈಗಾಗಲೇ ಹಲವು ವಿನಾಯ್ತಿಗಳನ್ನು ನೀಡಿದ್ದರಿಂದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

    ಆದರೆ, ಲಾಕ್​ಡೌನ್​ ಸಂಪೂರ್ಣವಾಗಿ ತೆರವುಗೊಳಿಸಿದ್ದೇ ಆದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ನೀತಿ ಆಯೋಗ ರಾಜ್ಯಗಳಿಗೆ ನೀಡಿದ ಮಾಹಿತಿಯಲ್ಲಿ ವಿವರಿಸಲಾಗಿದೆ. ನಿರ್ಬಂಧ ಸಡಿಲಿಸಿದ ಕಾರಣ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುವ ಸಾಧ್ಯತೆಯಿದೆ. ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಬೇರೆಡೆಗಳಲ್ಲಿ ನೆಲೆಸಿದ್ದ ಲಕ್ಷಾಂತರ ಜನರು ತಮ್ಮೂರುಗಳಿಗೆ ತೆರಳುತ್ತಿದ್ದಾರೆ. ಈವರೆಗೆ ಪರೀಕ್ಷೆಗೆ ಒಳಗಾಗದ ಇವರಲ್ಲಿ ಸೋಂಕು ಕಂಡು ಬರುತ್ತಿರುವ ಪ್ರಕರಣಗಳು ಎಲ್ಲ ರಾಜ್ಯಗಳಿಂದಲೂ ವರದಿಯಾಗುತ್ತಿವೆ. ಇದು ಕೂಡ ಆತಂಕಕಾರಿ ಸಂಗತಿಯಾಗಿದೆ.

    ಇದನ್ನೂ ಓದಿ; ಹಬ್ಬಕ್ಕೆ ಎನ್ನುವಂತೆ ಪ್ರತಿವರ್ಷವೂ ಬರುತ್ತಂತೆ ಕರೊನಾ; ಚೀನಾದಿಂದಲೇ ಬಂದಿದೆ ವಾರ್ನಿಂಗ್​

    ಸದ್ಯ ಕರೊನಾ ಪರೀಕ್ಷೆಗೆ ಒಳಪಡಿಸುತ್ತಿರುವವರ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಏಪ್ರಿಲ್​ 1ರಂದು 4,300 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದರೆ, ಶನಿವಾರ (ಮೇ 2) ಒಂದೇ ದಿನ ಬರೋಬ್ಬರಿ 75,000 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
    ಭಾರತದಲ್ಲಿ ಕರೊನಾದ ಮೊದಲ ಪ್ರಕರಣ ಜನವರಿ 30ರಂದು ವರದಿಯಾದರೂ, ಜನವರಿ ಆರಂಭದಿಂದಲೇ ವಿಮಾನನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿತ್ತು. ಜನವರಿಯಿಂದ ಏಪ್ರಿಲ್​ 1ರವರೆಗೆ ಪರೀಕ್ಷೆಗೊಳಪಡಿಸಿದ ಒಟ್ಟು ಜನರ ಸಂಖ್ಯೆ 42,788 ಆಗಿತ್ತು. ಪ್ರಸ್ತುತ ಈ ಸಂಖ್ಯೆ 10,43,000ಕ್ಕೆ ತಲುಪಿದೆ.

    ಆದರೆ, ಈ ಸಾಮರ್ಥ್ಯವನ್ನು ಇನ್ನೂ ಹೆಚ್ಚಿಸಬೇಕಿದೆ. ಪ್ರತಿದಿನವೂ ಒಂದು ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಬೇಕಾದ ಅಗತ್ಯವಿದೆ. ಏಕೆಂದರೆ, ಲಾಕ್​ಡೌನ್​ನಲ್ಲಿ ವಿನಾಯ್ತಿ ನೀಡಿದ ನಂತರ ಜೂನ್​ನಲ್ಲಿ ಕರೊನಾದ ಎರಡನೇ ಹಂತ ಅಥವಾ ಅಲೆ ಭಾರತದಲ್ಲಿ ಕಾಣಿಸಿಕೊಳ್ಳಲಿದೆ. ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬರುವ ನಿರೀಕ್ಷೆಯಿದೆ.

    ಇದನ್ನೂ ಓದಿ; ನಿಷ್ಪ್ರಯೋಜಕವೆಂದು ಗುಜರಿ ಸೇರಿದ್ದ ಔಷಧ ಕರೊನಾಗೆ ರಾಮಬಾಣ? ಬಳಸಿ ಎಂದು ಭಾರತೀಯ ತಜ್ಞರು ಹೇಳುತ್ತಿರೋದೇಕೆ?

    ಖಾಸಗಿ ವಲಯದಲ್ಲೂ ಈ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಇದಕ್ಕಾಗಿ ಅಗತ್ಯ ಟೆಸ್ಟಿಂಗ್​ ಕಿಟ್​ಗಳನ್ನು ದೇಶ ಹಾಗೂ ವಿದೇಶಗಳಿಂದ ತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ನಿಗದಿಯಂತೆ, ಮೇ 3ರಂದೇ ದೇಶಾದ್ಯಂತ ಲಾಕ್​ಡೌನ್​ ಸಂಪೂರ್ಣವಾಗಿ ಸಡಿಲ ಮಾಡಿದ್ದೇ ಆದರೆ, ಪ್ರಸ್ತುತ 38,800 ಇರುವ ಸೋಂಕಿತರ ಸಂಖ್ಯೆ ಮೇ 15ರ ವೇಳೆಗೆ 65,000ಕ್ಕೆ ತಲುಪಿದರೆ, ಆಗಸ್ಟ್​ 15ರ ಹೊತ್ತಿಗೆ 2.5 ಕೋಟಿಯಾಗಲಿದೆ ಎಂದು ನೀತಿ ಆಯೋಗ ಅಂದಾಜಿಸಿದೆ. ಕಳೆದ ವಾರವೇ ಈ ಮಾಹಿತಿಯನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಂಡಿತ್ತು. ಈ ಕಾರಣದಿಂದಾಗಿಯೇ ಮೇ 17ರವರೆಗೆ ಲಾಕ್​ಡೌನ್​ ಅವಧಿಯನ್ನು ವಿಸ್ತರಿಸಲಾಗಿದೆ. ಹಸಿರು ವಲಯಗಳಲ್ಲಿ ಸೋಂಕು ಕಾಣಿಸಿಕೊಳ್ಳದಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

    ಇದನ್ನೂ ಓದಿ; http://ಅರಬ್ಬರು ತಿರುಗಿ ನೋಡುವಂತೆ ತೈಲ ಸಾಮ್ರಾಜ್ಯ ಕಟ್ಟಿದ ಭಾರತೀಯ ಆತ್ಮಹತ್ಯೆಗೆ ಶರಣಾಗಿದ್ದೇಕೆ?

    ಪರೀಕ್ಷೆಗೊಳಪಡಿಸಿದ ಒಟ್ಟಾರೆ ಪ್ರಕರಣಗಳಲ್ಲಿ ಪಾಸಿಟಿವ್​ ಕಂಡುಬರುತ್ತಿರುವ ಸಂಖ್ಯೆ ಶೇ.4. ಅಲ್ಲದೇ, ಕೆಂಪು ಹಾಗೂ ಸೀಲ್​ ಡೌನ್​ ವಲಯಗಳಲ್ಲಿ ಸ್ವಯಂಪ್ರೇರಿತವಾಗಿ ಜನರನ್ನು ಪರೀಕ್ಷೆಗೊಳಪಡಿಸಬೇಕಾದ ಅನಿವಾರ್ಯತೆಯೂ ಇದೆ. ಜತೆಗೆ, ನಿರ್ಬಂಧ ಹಾಗೂ ವಿನಾಯ್ತಿಗಳನ್ನು ನೀಡುವುದು ಹೆಚ್ಚಾದಂತೆ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚಾಗುವುದರಿಂದ ಟೆಸ್ಟಿಂಗ್​ಅನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಬೇಕಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

    ಚೆನ್ನೈನಲ್ಲಿ ತ್ಯಾಜ್ಯ ನೀರಿನಿಂದ ಹರಡುತ್ತಿದೆಯಾ ಕರೊನಾ? ಸಂಸ್ಕರಿಸಿದ ನೀರಿನಲ್ಲಿ ಕಂಡುಬಂತು ವೈರಸ್​, ದೇಶದಲ್ಲೇ ಮೊದಲ ವಿದ್ಯಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts