More

    500ರ ಸನಿಹಕ್ಕೆ ಸಾವಿನ ಸಂಖ್ಯೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತಪಟ್ಟ ಆರು ಮಂದಿಯ ಸಹಿತ 414 ಮಂದಿಗೆ ಕರೊನಾ ಪಾಸಿಟಿವ್ ಬುಧವಾರ ವರದಿಯಾಗಿದೆ.
    ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 381ಕ್ಕೆ ಏರಿಕೆಯಾಗಿದೆ. ಮಂಗಳೂರಿನ 222, ಬಂಟ್ವಾಳದ 64, ಪುತ್ತೂರಿನ 49, ಸುಳ್ಯದ 31, ಬೆಳ್ತಂಗಡಿಯ 28 ಹಾಗೂ ಹೊರ ಜಿಲ್ಲೆಯ 20 ಮಂದಿ ಪಾಸಿಟಿವ್ ಬಂದವರು.
    150 ಮಂದಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ, ಐಎಲ್‌ಐ ಲಕ್ಷಣವಿರುವ 174 ಮಂದಿ, ಪ್ರಾಥಮಿಕ ಸಂಪರ್ಕದಿಂದ 77 ಮಂದಿ, ತೀವ್ರ ಉಸಿರಾಟ ತೊಂದರೆಯ 11 ಮಂದಿಗೆ ಕರೊನಾ ದೃಢಪಟ್ಟಿದೆ. ರೋಗಲಕ್ಷಣ ಇದ್ದವರು ಇದರಲ್ಲಿ 196 ಆದರೆ ರೋಗಲಕ್ಷಣ ರಹಿತರು 218.
    ಜಿಲ್ಲೆಯಲ್ಲಿ 346 ಮಂದಿ ಗುಣಮುಖರಾಗಿದ್ದು ಒಟ್ಟು ಡಿಸ್‌ಚಾರ್ಜ್ ಆದವರ ಸಂಖ್ಯೆ 10498ಕ್ಕೆ ತಲುಪಿದೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 13,479 ಆಗಿದ್ದರೆ ಸದ್ಯ ಸಕ್ರಿಯ ಪ್ರಕರಣಗಳು 2,600 ಆಗಿವೆ.

    ಉಡುಪಿಯಲ್ಲಿ 167 ಸೋಂಕಿತರು
    ಉಡುಪಿ: ಜಿಲ್ಲೆಯಲ್ಲಿ ಬುಧವಾರ 167 ಮಂದಿಗೆ ಕರೊನಾ ಪಾಸಿಟಿವ್ ವರದಿಯಾಗಿದೆ. ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಮೂವರು ಹಿರಿಯ ನಾಗರಿಕರಿಗೆ ಕೋವಿಡ್ ದೃಢಪಟ್ಟಿದೆ. ಸಾವಿನ ಸಂಖ್ಯೆ 102ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 11,917ಕ್ಕೆೆ ಏರಿಕೆಯಾಗಿದೆ. 971 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 357 ಮಂದಿಯ ವರದಿ ಬರಲು ಬಾಕಿ ಇದೆ. 2221 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

    ಕಾಸರಗೋಡಿನಲ್ಲಿ 88
    ಕಾಸರಗೋಡು: ಜಿಲ್ಲೆಯ 88 ಮಂದಿ ಸಹಿತ ಕೇರಳದಲ್ಲಿ ಬುಧವಾರ 1547 ಮಂದಿಗೆ ಕೋವಿಡ್-19 ಬಾಧಿಸಿದೆ. ಮಂಜೇಶ್ವರ ನಿವಾಸಿ ಸಹಿತ ರಾಜ್ಯದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts