More

    ಕರೊನಾ ಸಕ್ರಿಯ ಪ್ರಕರಣ ದೇಶದಲ್ಲಿ 4 ಲಕ್ಷಕ್ಕಿಂತ ಕಡಿಮೆ

    ನವದೆಹಲಿ: ದೇಶದಲ್ಲಿನ ಕರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷಕ್ಕಿಂತ ಕಡಿಮೆಯಾಗಿದ್ದು, ವೈರಸ್​ನ ಆತಂಕವನ್ನು ಕಡಿಮೆಗೊಳಿಸಿದೆ. ಭಾರತದಲ್ಲಿ ಭಾನುವಾರ 33 ಸಾವಿರ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 96.78 ಲಕ್ಷಕ್ಕೆ ಏರಿಕೆಯಾಗಿದೆ. 390 ಮಂದಿ ಸಾವನ್ನಪು್ಪವುದರೊಂದಿಗೆ ಮೃತರ ಸಂಖ್ಯೆ 1.40 ಲಕ್ಷ ತಲುಪಿದೆ. ಈವರೆಗೆ 91.39 ಲಕ್ಷ ಸೋಂಕಿತರು ಚೇತರಿಸಿಕೊಂಡಿದ್ದಾರೆ. ವಿಶ್ವಾದ್ಯಂತ ಭಾನುವಾರ 7,500 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 15.41 ಲಕ್ಷ ತಲುಪಿದೆ. 5.35 ಲಕ್ಷ ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 6.73 ಕೋಟಿ ತಲುಪಿದೆ. 4.65 ಕೋಟಿ ಸೋಂಕಿತರು ಈವರೆಗೆ ಗುಣಮುಖರಾಗಿದ್ದಾರೆ.

    ಅನುಮತಿ ಕೋರಿದ ಸೆರಂ, ಭಾರತ್ ಬಯೋಟೆಕ್: ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಪುಣೆಯ ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಅನುಮತಿ ಕೋರಿ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯಕ್ಕೆ (ಡಿಸಿಜಿಐ) ಅರ್ಜಿ ಸಲ್ಲಿಸಿದೆ. ಭಾರತ್ ಬಯೋಟೆಕ್ ಕೂಡ ಅರ್ಜಿ ಸಲ್ಲಿಸಿದೆ. ಅಮೆರಿಕ ಮೂಲದ ಫೈಜರ್ ಸಂಸ್ಥೆ ಈಗಾಗಲೇ ತುರ್ತು ಬಳಕೆಗೆ ಭಾರತದ ಅನುಮತಿ ಕೋರಿದೆ, ಈ ಮೂರೂ ಅರ್ಜಿಗಳ ಬಗ್ಗೆ 2 ವಾರಗಳ ಒಳಗಾಗಿ ಡಿಸಿಜಿಐ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆಸ್ಟ್ರಾಜೆನೆಕಾ ಸಂಸ್ಥೆಯೊಂದಿಗೆ ಸೆರಂ ಇನ್ಸ್​ಟಿಟ್ಯೂಟ್ ಲಸಿಕೆ ತಯಾರಿಸಲು ಒಪ್ಪಂದ ಮಾಡಿಕೊಂಡಿದ್ದು, ದೇಶದ ವಿವಿಧೆಡೆ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ.

    ಕರೊನಾ ಲಸಿಕೆಗಾಗಿ ದೇಶವು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಕಳೆದ ಕೆಲವು ದಿನಗಳಲ್ಲಿ ಅನೇಕ ವಿಜ್ಞಾನಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದೇನೆ. ಕೆಲವು ವಾರಗಳಲ್ಲಿ ಔಷಧ ಲಭ್ಯವಾಗಲಿದೆ ಎಂದು ಭಾವಿಸುತ್ತೇನೆ.

    | ನರೇಂದ್ರ ಮೋದಿ ಪ್ರಧಾನಮಂತ್ರಿ

    ನಿಯಮ ಉಲ್ಲಂಘಿಸಿದರೆ ಪ್ರಬಂಧ ಬರೆಯಬೇಕು!: ಕರೊನಾ ನಿಯಮಗಳನ್ನು ಉಲ್ಲಂಘಿಸುವವರಿಗೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ವಿಚಿತ್ರ ಶಿಕ್ಷೆ ಜಾರಿಗೆ ತರಲಾಗಿದೆ. ಯಾರೂ ಕರೊನಾ ಮುನ್ನೆಚ್ಚರಿಕಾ ನಿಯಮಗಳನ್ನು ಉಲ್ಲಂಘಿಸುತ್ತಾರೋ ಅವರು ಕರೊನಾ ಕುರಿತು ಪ್ರಬಂಧ ಬರೆಯಬೇಕು. ಇಲ್ಲದಿದ್ದರೆ ಅವರನ್ನು ಬಯಲು ಜೈಲಾಗಿ ಪರಿವರ್ತಿಸಲಾಗಿರುವ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ಇರಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    • ಚೀನಾದ ಕಂಪನಿ ಸಿನೋವಾಕ್ ಲಸಿಕೆಯ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 60 ಕೋಟಿಗೆ ಹೆಚ್ಚಿಸುವ ಹೊಸ ಸೌಲಭ್ಯವನ್ನು ಶೀಘ್ರದಲ್ಲೇ ಪೂರ್ಣಗೊಳಿಸುವುದಾಗಿ ಘೋಷಿಸಿದೆ. ಇದಕ್ಕಾಗಿ 500 ಮಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿದೆ. ್ಞ
    • ಕರೊನಾ ಲಸಿಕೆ ಕುರಿತ ರಾಷ್ಟ್ರೀಯ ತಜ್ಞರ ತಂಡದ ದಾಖಲೆಗಳು ಎಲ್ಲಿವೆ ಎಂಬುದು ತಮಗೆ ಗೊತ್ತಿಲ್ಲವೆಂದು ಆರ್​ಟಿಐ ಅರ್ಜಿಯೊಂದಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರತಿಕ್ರಿಯಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts