ಜೆಎನ್​ಯು ಗುಂಪು ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್​: ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಐಷೆ ಘೋಷ್​ ವಿರುದ್ಧ ಎಫ್​ಐಆರ್​ ದಾಖಲು

blank

ನವದೆಹಲಿ: ಜನವರಿ ನಾಲ್ಕರಂದು ಜೆಎನ್​ಯು ವಿಶ್ವವಿದ್ಯಾಲಯದ ಸರ್ವರ್​ ರೂಮ್​ಗೆ ಹಾನಿ ಮಾಡಿ ಸೆಕ್ಯೂರಿಟಿ ಗಾರ್ಡ್​ಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಜೆಎನ್​ಯು ವಿದ್ಯಾರ್ಥಿ ಒಕ್ಕೂಟದ ನಾಯಕಿ ಐಷೆ ಘೋಷ್​ ಸೇರಿಂದತೆ ಇತರೆ 19 ಮಂದಿಯ ವಿರುದ್ಧ ದೆಹಲಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ಕಳೆದ ವರ್ಷ ಹೆಚ್ಚಿಸಲಾದ ಹಾಸ್ಟೆಲ್​ ಶುಲ್ಕ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ವಿಶ್ವವಿದ್ಯಾಲಯದ ಕಂಪ್ಯೂಟರ್​ ಸರ್ವರ್​ ರೂಮ್​ ಅನ್ನು ಕೊಳ್ಳೆ ಹೊಡೆಯಲಾಗಿದೆ ಮತ್ತು ಸೆಮಿಸ್ಟರ್​ ನೋಂದಣಿ ಪ್ರಕ್ರಿಯೆಗೆ ತಾಂತ್ರಿಕ ಸಿಬ್ಬಂದಿಗೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆ ಎಂದು ಜೆಎನ್​ಯು ಆಡಳಿತ ಮಂಡಳಿ ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ.

ಸುಮಾರು 70 ರಿಂದ 100 ಮಂದಿ ಮುಸುಕುಧಾರಿಗಳು ಶಸ್ತ್ರಾಸ್ತ್ರಗಳನ್ನು ಹಿಡಿದು ಜೆಎನ್​ಯು ಆವರಣಕ್ಕೆ ನುಗ್ಗಿ ಐಷೆ ಘೋಷ್​ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ದಾಳಿ ನಡೆಸಿದ ಒಂದು ದಿನಕ್ಕೂ ಮುಂಚೆಯೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಘಟನೆ ಸಂಬಂಧ ಜನವರಿ 3(ಶುಕ್ರವಾರ) ಮತ್ತು ಜನವರಿ 4(ಶನಿವಾರ) ಎರಡು ಎಫ್​ಐಆರ್​ ದಾಖಲಾಗಿದ್ದು, ಘೋಷ್​ ಹೆಸರು ಉಲ್ಲೇಖವಾಗಿದೆ. ಆದರೆ ಎಷ್ಟು ಮಂದಿಯ ಹೆಸರು ಎಫ್​ಐಆರ್​ನಲ್ಲಿದೆ ಎಂಬುದು ಶುಕ್ರವಾರ ದಾಖಲಿಸಿದ್ದ ಎಫ್​ಐಆರ್​ನಲ್ಲಿ ಸ್ಪಷ್ಟವಾಗಿರಲಿಲ್ಲ. ಆದರೂ ಸರ್ವರ್​ ರೂಮ್​ ಘಟನೆಗೆ ಸಂಬಂಧಿಸಿದ್ದು ಎಂಬುದು ಸ್ಪಷ್ಟವಾಗಿತ್ತು. ಜನವರಿ 4 ರಂದು ದಾಖಲಾಗಿರುವ ಎಫ್​ಐಆರ್​ನಲ್ಲಿ ಮಹಿಳಾ ಸೆಕ್ಯುರಿಟಿ ಗಾರ್ಡ್​ಗೆ ದೈಹಿಕ ಹಲ್ಲೆ ಮಾಡಿ ಬೆದರಿಕೆಯೊಡ್ಡಿದ ಮೇಲೆ ಘೋಷ್​ ಸೇರಿದಂತೆ ಇತರರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ವಿದ್ಯಾರ್ಥಿಗಳು ಕಂಪ್ಯೂಟರ್​​ ಸರ್ವರ್​ ಅನ್ನು ಕಾರ್ಯನಿರ್ವಹಿಸಿದಂತೆ ಮಾಡಿದ್ದರು. ಒಂದು ದಿನದ ಬಳಿಕ ಅಂದರೆ ಶನಿವಾರ ತಾಂತ್ರಿಕ ಸಿಬ್ಬಂದಿ ಸರ್ವರ್​ ಸೆಟ್​ ಮಾಡಲು ತೆರಳಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಒಂದು ಗುಂಪು ಸರ್ವರ್​ ರೂಮ್​ನೊಳಗೆ ಮತ್ತೆ ಪ್ರವೇಶ ನೀಡಿ ಮತ್ತೆ ಹಾನಿ ಮಾಡಿದರು. ಬಳಿಕ 4 ಗಂಟೆಗೆ ಸರ್ವರ್​ ರೀಸ್ಟೋರ್​ ಮಾಡಲಾಯಿತು ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.

ಜೆಎನ್​ಯು ಆಡಳಿತ ಮಂಡಳಿ ಆರೋಪಕ್ಕೆ ತಿರುಗೇಟು ನೀಡಿರುವ ವಿದ್ಯಾರ್ಥಿ ಒಕ್ಕೂಟ ಇದೆಲ್ಲ ಆಡಳಿತ ಮಂಡಳಿಯ ಕೈವಾಡ ಎಂದು ಆರೋಪಿಸಿದ್ದಾರೆ. ಮುಸುಧಾರಿ ಸೆಕ್ಯುರಿಟಿ ಗಾರ್ಡ್​ಗಳನ್ನು ಬಳಸಿಕೊಂಡು ಸರ್ವರ್ ರೂಮ್​ ನಾಶ ಮಾಡಿ ಮತ್ತು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿಸಿದ್ದಾರೆ. ಮುಸುಕುಧರಿಸಲು ಅವರಿಗೆ ನಾಚಿಕೆಯಾಗಬೇಕು ಎಂದು ಜೆಎನ್​ಯುಎಸ್​ಯು ಅಧ್ಯಕ್ಷೆ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ನಡುವೆ ಹಾಸ್ಟೆಲ್​ ಶುಲ್ಕ ದರ ವಿಚಾರವಾಗಿ ಪ್ರಸ್ತುತ ನಡೆಯುತ್ತಿರುವ ತಿಕ್ಕಾಟಕ್ಕೂ ಮತ್ತು ಸರ್ವರ್​ ಘಟನೆಗೂ ಸಂಬಂಧವಿದೆ. ಅಲ್ಲದೆ, ಭಾನುವಾರ ನಡೆದ ಹಿಂಸಾತ್ಮಕ ಘಟನೆಗೂ ಸರ್ವರ್​ ಘಟನೆಗೂ ಸಂಬಂಧವಿದೆ ಎಂದು ವಿಶ್ವವಿದ್ಯಾಲಯ ವಾದಿಸಿದೆ. (ಏಜೆನ್ಸೀಸ್​)

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…